ಹಾರ್ಮೋನುಗಳ ಬದಲಾವಣೆಯೇ ಇದಕ್ಕೆ ಕಾರಣ 
ಫೋಟೋ ಗ್ಯಾಲರಿ

ಕೀಲು ನೋವಿನಿಂದ ಬಳಲುತ್ತಿದ್ದರೆ, ಈ ಎಣ್ಣೆ ಬಳಸಿ! Joint pain

ಭಾನುಪ್ರಿಯ ಡಿ.ಕೆ

ಹಾರ್ಮೋನುಗಳ ಬದಲಾವಣೆಯೇ ಇದಕ್ಕೆ ಕಾರಣ

ವಯಸ್ಸಾದಂತೆ ದೇಹವು ಅನೇಕ ಬದಲಾವಣೆಗಳಿಗೆ ಒಳಗಾಗುತ್ತದೆ. ದೇಹದಲ್ಲಿನ ಹಾರ್ಮೋನುಗಳು ಬದಲಾವಣೆ ಹೆಚ್ಚಾದಂತೆ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಇವುಗಳು ನಮ್ಮ ಕೀಲುಗಳ ಮೇಲೆ ಹಾನಿಯನ್ನುಂಟು ಮಾಡುತ್ತದೆ.

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆ ಉರಿಯೂತ ನಿವಾರಕ ಮತ್ತು ನೋವು ನಿವಾರಕ ಗುಣಗಳನ್ನು ಹೊಂದಿದೆ. ಇದು ಕೀಲುಗಳ ಸುತ್ತಲಿನ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುವುದರ ಜೊತೆಗೆ ನೋವಿನಿಂದ ಪರಿಹಾರವನ್ನು ನೀಡುತ್ತದೆ.

ಶುಂಠಿ ಎಣ್ಣೆ

ಶುಂಠಿಯಲ್ಲಿ ಜಿಂಜಿಬೆರಿನ್, ಬಿಸಾಬೋಲಿನ್, ಕರ್ಕ್ಯುಮಿನ್, ಫರ್ನೆಸಿನ್ ಸಂಯುಕ್ತಗಳಿದ್ದು, ಇದು ಉರಿಯೂತ, ಬಿಗಿತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಕೀಲುಗಳ ಚಲನಶೀಲತೆಯನ್ನು ಸುಧಾರಿಸುತ್ತದೆ.

ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆ ಸ್ನಾಯುಗಳ ಬಿಗಿತವನ್ನು ಶಮನಗೊಳಿಸಲು ಒಳ್ಳೆಯ ಔಷಧವಾಗಿದೆ. ಇದು ನೋವಿನಿಂದ ಪರಿಹಾರ ನಿಡುವುದರ ಜೊತೆಗೆ ಕೀಲು ನೋವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಿಯಮಿತವಾಗಿ ಈ ಎಣ್ಣೆಯನ್ನು ಹಚ್ಚಿ ಮಸಾಜ್​ ಮಾಡುವುದರಿಂದ ನೋವನ್ನು ಶಮನಗೊಳಿಸಬಹುದು.

ಆಲಿವ್ ಎಣ್ಣೆ

ಆಲಿವ್ ಎಣ್ಣೆಯಲ್ಲಿರುವ ಸಂಯುಕ್ತವಾದ ಓಲಿಯೋಕ್ಯಾಂಥಲ್ ಸ್ನಾಯು ನೋವನ್ನು ಕಡಿಮೆ ಮಡಲು ಹಾಗೂ ಸೆಳೆತವನ್ನು ಸುಧಾರಿಸುವ ಕೆಲಸವನ್ನು ಮಾಡುತ್ತದೆ. ಆದರಿಂದ ಈ ಎಣ್ಣೆಯನ್ನು ನಿಯಮಿತವಾಗಿ ಹಚ್ಚಿ ಮಸಾಜ್​ ಮಾಡುವುದರಿಂದ ಸ್ನಾಯುಗಳ ನೋವನ್ನು ಕಡಿಮೆ ಮಾಡಬಹುದು.

ಕರ್ಪೂರ ಎಣ್ಣೆ

ಕರ್ಪೂರ ಎಣ್ಣೆಯನ್ನು ನೋವು ನಿವಾರಕಗಳಿಗೆ ಹೆಚ್ಚಾಗಿ ಬಳಸಲಾಗುತ್ತದೆ. ಇದು ರಕ್ತ ಪರಿಚಲನೆಯನ್ನು ಸುಧಾರಿಸಿ, ಕೀಲು ನೋವಿನಿಂದ ತ್ವರಿಗ ಪರಿಹಾರವನ್ನು ನೀಡುತ್ತದೆ.