ಭೇಲ್ ಪುರಿ 
ಫೋಟೋ ಗ್ಯಾಲರಿ

ಯಾವುದೇ ಭಯವಿಲ್ಲದೆ ತಿನ್ನಬಹುದಾದ ಆರೋಗ್ಯಕರ ಬೀದಿ ಆಹಾರಗಳು! Street Food

Vijayavan

ಭೇಲ್ ಪುರಿ

ಈ ಜನಪ್ರಿಯ ಭಾರತೀಯ ತಿಂಡಿಯನ್ನು ಮರ್ಮುರ್ ಎಂದು ಕರೆಯಲಾಗುತ್ತದೆ. ತರಕಾರಿಗಳನ್ನು ಕತ್ತರಿಸಿ, ಸ್ವಲ್ಪ ಹುಣಸೆಹಣ್ಣು ಹಾಗೂ ಕೆಲವು ಮಸಾಲೆ ಪದಾರ್ಥಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಈ ಪುರಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದರೆ, ತರಕಾರಿಗಳು ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ. ಇದು ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ

ಕಡಲೆಕಾಳು ಉಸುಳಿ

ಕಡಲೆಕಾಳು ಹೆಚ್ಚು ಪ್ರೊಟೀನ್​ ಹೊಂದಿರುತ್ತವೆ. ಬೇಯಿಸಿದ ಕಡಲೆ ಕಾಳಿಗೆ ಕೆಲವು ಮಸಾಲೆಗಳು, ಟೊಮ್ಯಾಟೊ, ಈರುಳ್ಳಿ, ಸೌತೆಕಾಯಿ ಮತ್ತು ಮೆಣಸಿನಕಾಯಿಯನ್ನು ಸೇರಿಸಿ ಸೇವಿಸುವುದರಿಂದ ಪೌಷ್ಟಿಕಾಂಶವನ್ನು ನೀಡಲು ಸಹಾಯ ಮಾಡುತ್ತದೆ.

ಜೋಳ

ಕಡಿಮೆ ಹಣ ಹಾಗೂ ಅತಿಯಾದ ರುಚಿಯಲ್ಲಿ ಸಿಗುವಂತಹ ಒಂದು ಬೀದಿ ಆಹಾರವಾಗಿದೆ. ಇದನ್ನು ಬೆಂಕಿಯ ಮೇಲೆ ಹುರಿದು ನಿಂಬೆ ರಸ ಹಾಗೂ ಉಪ್ಪಿನೊಂದಿಗೆ ಸವರಿ ಜನರಿಗೆ ತಿನ್ನಲು ಕೊಡಲಾಗುತ್ತದೆ. ಇದು ಬೀದಿ ಆಹಾರವನ್ನು ಆನಂದಿಸಲು ಸಹಾಯ ಮಾಡುತ್ತದೆ.

ಇಡ್ಲಿ

ದಕ್ಷಿಣ ಭಾರತದ ಖಾದ್ಯದಲ್ಲೊಂದಾದ ಇಡ್ಲಿಯನ್ನು ಅಕ್ಕಿ ಹಾಗೂ ಉದ್ದಿನ ಬೇಳೆಯಿಂದ ಮಾಡಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದು ಕಡಿಮೆ ಕ್ಯಾಲೋರಿ ಹೊಂದಿದ್ದು, ಅಧಿಕ ಫೈಬರ್​ ಹೊಂದಿರುವುದರಿಂದ ಆರೋಗ್ಯಕ್ಕೆ ಉತ್ತಮವಾಗಿದೆ.