ನಾವು ಪ್ಲಾಸ್ಟಿಕ್ ವಸ್ತುಗಳಿಗೆ ಒಗ್ಗಿಕೊಂಡಿದ್ದೇವೆ. ಆಫೀಸಿಗೆ ಟಿಫಿನ್ ಬಾಕ್ಸ್ , ಉಳಿದ ಆಹಾರ ಫ್ರಿಡ್ಜ್ನಲ್ಲಿ ಇಡಲು, ದಿನಸಿ ಸ್ಟೋರ್ ಮಾಡಲು ಎಲ್ಲದಕ್ಕೂ ಪ್ಲಾಸ್ಟಿಕ್ ಖಾಯಂ. ಸ್ಟೀಲ್ಗಿಂತ ಪ್ಲಾಸ್ಟಿಕ್ ಕಡಿಮೆಗೆ ದಕ್ಕುತ್ತವೆ ಎಂದು ನಾವು ಹೆಚ್ಚು ಕೊಂಡುಕೊಳ್ಳುತ್ತೇವೆ. ಆದರೆ, ಕೆಲವೊಂದು ಆಹಾರ ಪದಾರ್ಥವನ್ನು ಪ್ಲಾಸ್ಟಿಕ್ನಲ್ಲಿ ಇಡುವುದು ಆರೋಗ್ಯಕ್ಕೆ ಹಾನಿಕಾರಕ. ಇದರಲ್ಲಿರುವ ಬಿಸ್ಫೆನಾಲ್ ಎ (ಬಿಪಿಎ) ಮತ್ತು ಥಾಲೇಟ್ ಎನ್ನುವ ಅಂಶವೂ ದೇಹಕ್ಕೆ ಸೇರಿಕೊಂಡು ವಿವಿಧ ವೈರಲ್ ಕಾಯಿಲೆಯನ್ನು ಹುಟ್ಟುಹಾಕುತ್ತದೆ.
ಹಾಗಾದ್ರೆ ಇನ್ಮುಂದೆ ಯಾವ ಆಹಾರವನ್ನು ನೀವು ಪ್ಲಾಸ್ಟಿಕ್ನಲ್ಲಿಡಬಹುದು. ಯಾವುದನ್ನು ಶೇಖರಣೆ ಮಾಡುವಂತಿಲ್ಲ. ಯಾವ ಆಹಾರ ಶೇಖರಣೆ ಮಾಡಿದರೆ ಆರೋಗ್ಯದ ಮೇಲೆ ಬೀರುವ ಪರಿಣಾಮ ಏನು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಉಪ್ಪಿನಕಾಯಿ, ಹುಣಸೆ, ವಿನೇಗರ್ ಸೇರಿದಂತೆ ಹುಳಿ ಪದಾರ್ಥವನ್ನು ಎಂದಿಗೂ ಪ್ಲಾಸ್ಟಿಕ್ನಲ್ಲಿ ಸ್ಟೋರ್ ಮಾಡಬೇಡಿ. ಇದರಲ್ಲಿರುವ ಆಮ್ಲೀಯ ಅಂಶವು ಪ್ಲಾಸ್ಟಿಕ್ನೊಂದಿಗೆ ರಿಯಾಕ್ಟ್ ಮಾಡುವ ಮೂಲಕ ದೇಹಕ್ಕೆ ಸೇರಿ ನಿಮಗೆ ಆರೋಗ್ಯದಲ್ಲಿ ಸಮಸ್ಯೆಯನ್ನುಂಟು ಮಾಡಬಹುದು. ಹೀಗಾಗಿ ಪ್ಲಾಸ್ಟಿಕ್ ಬದಲಿಗೆ ಮಣ್ಣಿನ ಪಿಂಗಾಣಿ, ಸೆರಾಮಿಕ್ ಬಳಕೆ ಮಾಡುವುದು ಸೂಕ್ತ.
ಬಿಸಿ ಆಹಾರವನ್ನು ಪ್ಲಾಸ್ಟಿಕ್ ಬಾಕ್ಸ್ನಲ್ಲಿ ಇಡಕೂಡದು ಎನ್ನುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಆದರೆ, ವಿಧಿಯಿಲ್ಲದೆ ಕೆಲವರು ಪ್ಲಾಸ್ಟಿಕ್ನಲ್ಲಿಯೇ ಆಫೀಸು, ಕಾಲೇಜು, ಶಾಲೆಗೆ ಆಹಾರ ಕೊಂಡೊಯ್ಯುತ್ತಾರೆ. ಬಿಸಿಗೆ ರಾಸಾಯನಿಕ ಕರಗಿ ಆಹಾರಕ್ಕೆ ಇಳಿಯುವ ಮೂಲಕ ನಿಮ್ಮ ದೇಹವನ್ನು ಸೇರಿಕೊಳ್ಳುತ್ತದೆ. ಹೀಗಾಗಿ ಪ್ಲಾಸ್ಟಿಕ್ ಅವಾಯ್ಡ್ ಮಾಡಿ.
ಎಣ್ಣೆಯುಕ್ತ ಆಹಾರವನ್ನು ಪ್ಲಾಸ್ಟಿಕ್ ಡಬ್ಬದ ಬದಲಾಗಿ ಸ್ಟೀಲ್ ಪಾತ್ರೆ ಅಥವಾ ಬಾಟಲ್ನಲ್ಲಿ ಸ್ಟೋರ್ ಮಾಡುವುದು ಸೂಕ್ತ. ಇದರಿಂದ ಹೊರಡುವ ಜಿಡ್ಡು ದೀರ್ಘಕಾಲದವರೆಗೂ ಕ್ಯಾರಿ ಮಾಡುವುದು ಸೂಕ್ತವಲ್ಲ. ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು.
ಮಸಾಲೆ ಪೌಡರ್ಗಳು, ಪದಾರ್ಥವನ್ನು ಸ್ಟೋರ್ ಮಾಡುವುದು ಸರಿಯಲ್ಲ. ಒಂದು ಈ ಮಸಾಲೆಯು ತನ್ನ ರುಚಿಯನ್ನು ಕಳೆದುಕೊಳ್ಳಬಹುದು. ಮತ್ತೊಂದು ಪ್ಲಾಸ್ಟಿಕ್ನಲ್ಲಿರುವ ರಾಸಾಯನಿಕವು ಮಸಾಲೆಯೊಂದಿಗೆ ರಿಯಾಕ್ಟ್ ಮಾಡಿ ನಮ್ಮ ಆಹಾರ ಮೂಲಕ ದೇಹಕ್ಕೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಸಾಲೆಯನ್ನು ಪ್ಲಾಸ್ಟಿಕ್ನಲ್ಲಿ ಇಡಬೇಡಿ.
ಪ್ಲಾಸ್ಟಿಕ್ ಬದಲಾಗಿ ಇತ್ತೀಚೆಗೆ ಮತ್ತೆ ಟ್ರೆಂಡ್ನಲ್ಲಿರುವ ಮಡಿಕೆ, ಸ್ಟೀಲ್ ಪಾತ್ರೆಗಳನ್ನು ಬಳಕೆ ಮಾಡುವುದು ಹೆಚ್ಚು ಬೆಸ್ಟ್ ಇಲ್ಲದಿದ್ದರೆ, ಗಾಜು ಅಥವಾ ಸೆರಾಮಿಕ್ನಿಂದ ತಯಾರಿಸಲಾದ ಪಾತ್ರೆ ಬಳಕೆ ಮಾಡಿ. ಪ್ಲಾಸ್ಟಿಕ್ಗಳಿಗಿಂತ ಇವು ಉತ್ತಮ.
ಪ್ಲಾಸ್ಟಿಕ್ ಬಳಕೆ ಸುದೀರ್ಘವಾಗಿ ಇಟ್ಟುಕೊಳ್ಳಬೇಡಿ. ಅದರ ಮೇಲೆ ಜಿಡ್ಡು, ಗೀಟು ಹಾಳಾದ ತಕ್ಷಣ ಅಥವಾ ಒಂದು ಮೂರು ವರ್ಷಕ್ಕೊಮ್ಮೆ ಬದಲಾಯಿಸುವ ಅಭ್ಯಾಸ ಮಾಡಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ, (ಏಜೆನ್ಸೀಸ್).