ಕಲಬೆರಕೆ ಅರಿಶಿಣ 
ಫೋಟೋ ಗ್ಯಾಲರಿ

ಕಲಬೆರಕೆ ಅರಿಶಿನ ಪತ್ತೆಹಚ್ಚಲು ಸರಳ ವಿಧಾನಗಳು! Adulterated Turmeric

ಭಾನುಪ್ರಿಯ ಡಿ.ಕೆ

ಕಲಬೆರಕೆ ಅರಿಶಿಣ

ಪ್ರತಿದಿನ ಅಡುಗೆಗೆ ಬಳಸುವ ಅರಿಶಿನ ಪುಡಿಯಲ್ಲಿ ಬಣ್ಣ ಮತ್ತು ತೂಕ ಹೆಚ್ಚಿಸಲು ರಾಸಾಯನಿಕಗಳು, ಸೀಸದ ಕ್ರೋಮೇಟ್ ಅಥವಾ ಸಮೆದ ಹಿಟ್ಟುಗಳನ್ನು ಬೆರೆಸಲಾಗುತ್ತದೆ. ಈ ಸುಲಭ ಪರೀಕ್ಷೆಗಳ ಮೂಲಕ ಶುದ್ಧ ಅರಿಶಿನವನ್ನು ಪತ್ತೆಹಚ್ಚಬಹುದು.

ನೀರಿನ ಪರೀಕ್ಷೆ

ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಅರ್ಧ ಚಮಚ ಅರಿಶಿನ ಪುಡಿ ಹಾಕಿ, ಕಲಕದೆ 20 ನಿಮಿಷ ಬಿಡಿ. ಅರಿಶಿನ ಲೋಟದ ತಳದಲ್ಲಿ ಕುಳಿತು ನೀರು ತಿಳಿ ಹಳದಿಯಾದರೆ ಅದು ಶುದ್ಧ. ನೀರು ದಟ್ಟ ಹಳದಿ ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಕಲಬೆರಕೆಯಿದೆ.

ಅಂಗೈ ಪರೀಕ್ಷೆ

ಸ್ವಲ್ಪ ಅರಿಶಿನವನ್ನು ನಿಮ್ಮ ಅಂಗೈ ಮೇಲಿಟ್ಟು ಹೆಬ್ಬೆರಳಿನಿಂದ ಚೆನ್ನಾಗಿ ಉಜ್ಜಿ. ಶುದ್ಧ ಅರಿಶಿನವಾದರೆ ಕೈಗೆ ಹಳದಿ ಬಣ್ಣ ಅಂಟಿಕೊಳ್ಳುತ್ತದೆ ಹಾಗೂ ನಯವಾಗಿ ಭಾಸವಾಗುತ್ತದೆ.

ನಿಂಬೆ ರಸ ಪರೀಕ್ಷೆ

ಸ್ವಲ್ಪ ಅರಿಶಿನಕ್ಕೆ ಕೆಲವು ಹನಿ ನಿಂಬೆ ರಸ ಹಾಕಿ. ಅದು ತಕ್ಷಣವೇ ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗಿದರೆ, ಅದರಲ್ಲಿ ಅಪಾಯಕಾರಿ ರಾಸಾಯನಿಕ ಬಣ್ಣಗಳು ಬೆರೆತಿವೆ ಎಂದರ್ಥ.

ಹೈಡ್ರೋಕ್ಲೋರಿಕ್ ಆಸಿಡ್

ಅರಿಶಿನದ ಪೇಸ್ಟ್‌ಗೆ ಸಾಂದ್ರ ಆಸಿಡ್ ಹನಿಗಳನ್ನು ಸೇರಿಸಿದಾಗ ಅದು ಕೆಂಪು ಬಣ್ಣಕ್ಕೆ ತಿರುಗಿ, ನೀರು ಸೇರಿಸಿದ ಮೇಲೆಯೂ ಅದೇ ಬಣ್ಣ ಉಳಿದುಕೊಂಡರೆ ಅದು ಕಲಬೆರಕೆ.

ಸುವಾಸನೆ ಮತ್ತು ರುಚಿ ಪರೀಕ್ಷೆ

ಶುದ್ಧ ಅರಿಶಿನವು ತೀಕ್ಷ್ಣವಾದ ನೈಸರ್ಗಿಕ ಮಣ್ಣಿನ ಪರಿಮಳ ಹೊಂದಿರುತ್ತದೆ. ಯಾವುದೇ ಸುವಾಸನೆ ಇಲ್ಲದಿದ್ದರೆ ಅದು ಕಲಬೆರಕೆಯಾಗಿರಬಹುದು.