ಸೌತ್ ಬ್ಯೂಟಿ ಶ್ರದ್ಧಾ
ಶ್ರದ್ಧಾ ಶ್ರೀನಾಥ್ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ವಿಶೇಷ ಮನ್ನಣೆ ಗಳಿಸಿದ ಜನಪ್ರಿಯ ನಾಯಕಿ. ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿರುವ ಈ ಬೆಡಗಿ ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಯಲ್ಲೂ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದರು.ಯೂ ಟರ್ನ್ ಮೊದಲ ಸಿನಿಮಾ
2016ರಲ್ಲಿ ಪವನ್ ಕುಮಾರ್ ನಿರ್ದೇಶನದ 'ಯೂ ಟರ್ನ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ಮೂಲಕ ರಾತ್ರೋರಾತ್ರಿ ಪ್ರಸಿದ್ಧಿ ಪಡೆದರು ಮತ್ತು ಅವರ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.ಸಹಜ ಅಭಿನಯಕ್ಕೆ ಹೆಸರು
ಗ್ಲಾಮರ್ ಗೊಂಬೆ
ತಮಿಳಿನ 'ವಿಕ್ರಮ್ ವೇದ', ತೆಲುಗಿನ 'ಜೆರ್ಸಿ' ಮತ್ತು ಕನ್ನಡದ 'ಆಪರೇಷನ್ ಅಲುಮೇಲಮ್ಮ' ಇವರ ವೃತ್ತಿಜೀವನದ ಪ್ರಮುಖ ಚಿತ್ರಗಳು. ಶ್ರದ್ಧಾ ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗದೆ, ಕಥೆಯ ಕೇಂದ್ರಬಿಂದುವಾಗಿರುವ ಮತ್ತು ಮಹಿಳಾ ಪ್ರಧಾನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಹೆಸರುವಾಸಿಯಾಗಿದ್ದಾರೆ.ಹಲವು ಪ್ರಶಸ್ತಿಗಳು
ಶ್ರದ್ಧಾ ಅವರ ನಟನಾ ಕೌಶಲಕ್ಕಾಗಿ ಫಿಲ್ಮ್‌ಫೇರ್ ಮತ್ತು ಸೈಮಾ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ದಕ್ಷಿಣ ಭಾರತದ ಚಿತ್ರರಂಗದ ಭರವಸೆಯ ನಟಿಯರಲ್ಲಿ ಶ್ರದ್ಧಾ ಕೂಡ ಒಬ್ಬರು.ಅವಕಾಶಗಳ ಕೊರತೆ
ಈಗ ಅವಕಾಶಗಳ ಕೊರೆತೆಯಿಂದಾನೋ ಏನೋ ವಿರಳ ಸಿನಿಮಾಗಳಲ್ಲಿ ಶ್ರದ್ಧಾ ನಟಿಸುತ್ತಿದ್ದಾರೆ. ಅವರ ಮೊದಲ ವೆಬ್ ಸರಣಿ 'ದಿ ಗೇಮ್: ಯು ನೆವರ್ ಪ್ಲೇ ಅಲೋನ್ ವೆಬ್ ಸರಣಿ' ಇತ್ತೀಚೆಗೆ ಬಿಡುಗಡೆಯಾಯಿತು. ಅಲ್ಲದೆ, ಇತ್ತೀಚೆಗೆ ಬಿಡುಗಡೆಗೊಂಡ ತಮಿಳು ಚಿತ್ರ ಆರ್ಯನ್ ಭರ್ಜರಿ ಯಶಸ್ಸು ಕಂಡಿತು.ಜಾಲತಾಣದಲ್ಲಿ ಫುಲ್ ಆ್ಯಕ್ಟೀವ್
ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿರುವ ಶ್ರದ್ಧಾ ಆಗಾಗ ತಮ್ಮ ಬೋಲ್ಡ್ ಫೋಟೊಗಳನ್ನು ಹರಿಬಿಡುತ್ತಿರುತ್ತಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ 1 ಮಿಲಿಯನ್ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಇತ್ತೀಚೆಗೆ ಶ್ರದ್ಧಾ ಪೋಸ್ಟ್ ಮಾಡಿರುವ ಹಾಟ್ ಫೋಟೋಗಳು ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದೆ.ಹಾಟ್ ಅವತಾರದಲ್ಲಿ ಪ್ರತ್ಯಕ್ಷ
ಸರಳವಾದ ಶ್ವೇತ ವರ್ಣದ ಉಡುಪು ಧರಿಸಿ, ಒಂದು ಕೆರೆಯ ಮುಂದೆ ವಿವಿಧ ಭಂಗಿಗಳಲ್ಲಿ ನಿಂತು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಬಿಳಿಬಣ್ಣದ ಉಡುಪು ಪಾರದರ್ಶಕವಾಗಿದ್ದು, ಶ್ರದ್ಧಾರ ಮೈಮಾಟ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಎಲ್ಲ ಫೋಟೋಗಳಲ್ಲೂ ಶ್ರದ್ಧಾ ತುಂಬಾ ಬೋಲ್ಡ್ ಆಗಿ ಕಾಣುತ್ತಿದ್ದಾರೆ.ಬೋಲ್ಡ್ನೆಸ್ಗೆ ಅಭಿಮಾನಿಗಳು ಫಿದಾ
ನಿನ್ನೆ (ಡಿ.19) ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಫೋಟೋವನ್ನು ಈವರೆಗೆ 60 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಶ್ರದ್ಧಾರ ಬೋಲ್ಡ್ ಲುಕ್ಗೆ ಫಿದಾ ಆಗಿರುವ ಅಭಿಮಾನಿಗಳು ತರಹೇವಾರಿ ಕಾಮೆಂಟ್ಗಳು ಹರಿಬಿಡುತ್ತಿದ್ದಾರೆ.