ಸ್ವಿಮ್​ ಶೂಟ್​ನಲ್ಲಿ ಸೀರಿಯಲ್​ ಸುಂದರಿ 
ಫೋಟೋ ಗ್ಯಾಲರಿ

ಸ್ವಿಮ್ಮಿಂಗ್​ಪೂಲ್​ನಲ್ಲಿ ಸೀರಿಯಲ್​ ಬ್ಯೂಟಿ... ಜ್ಯೋತಿ ಪೂರ್ವಜ್​ ಹಾಟ್​ ಫೋಟೋಗಳು ವೈರಲ್​! Jyoti Poorvaj

ರಮೇಶ್​ ಕುಮಾರ್​​ ಬಿ ಎಡಮೋಳೆ

ಸ್ವಿಮ್​ ಶೂಟ್​ನಲ್ಲಿ ಸೀರಿಯಲ್​ ಸುಂದರಿ

ಖ್ಯಾತ ನಟಿ ಜ್ಯೋತಿ ರೈ ಅಲಿಯಾಸ್​ ಜ್ಯೋತಿ ಪೂರ್ವಜ್ ಅವರು ಸ್ವಿಮ್​ ಶೂಟ್​ ಧರಿಸಿ, ಸ್ವಿಮ್ಮಿಂಗ್​ ಪೂಲ್​ ಬಳಿ ಕ್ಯಾಮೆರಾ ಮುಂದೆ ಮಾದಕ ಭಂಗಿಯಲ್ಲಿ ಪೋಸ್​ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ಜ್ಯೋತಿ ರೈ ಹಾಟ್​ ಅವತಾರ

ಅಂದಹಾಗೆ, ಜ್ಯೋತಿ ಪೂರ್ವಜ್​ ಅವರನ್ನು ಕನ್ನಡಿಗರಿಗೆ ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರುವ ಆವರು ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ.

ಆರಂಭಿಕ ಜೀವನ

1985ರ ಫೆಬ್ರವರಿ 23ರಂದು ಕೊಡಗಿನ ಮಡಿಕೇರಿಯಲ್ಲಿ ಜನಿಸಿದರು. ಪುತ್ತೂರಿನಲ್ಲಿ ಬೆಳೆದರು. ಡಿಗ್ರಿ ಓದು ಮುಗಿಯುತ್ತಿದ್ದಂತೆಯೇ ಸುಮಾರು 20 ವರ್ಷ ವಯಸ್ಸಿನಲ್ಲೇ ಮೊದಲ ಮದುವೆಯಾಗಿತ್ತು. ಆದರೆ, ಭಿನ್ನಾಭಿಪ್ರಾಯಗಳಿಂದಾಗಿ ಡಿವೋರ್ಸ್​ ಪಡೆದುಕೊಂಡರು.

ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧಿ

ಕನ್ನಡ ಧಾರಾವಾಹಿಗಳಾದ 'ಜೋಗುಳ', 'ಬಂದೇ ಬರುತಾವ ಕಾಲ', 'ಕಿನ್ನರಿ ಸಿರಿ' ಮುಂತಾದವುಗಳಲ್ಲಿ ನಟಿಸಿ ಗುರುತಿಸಿಕೊಂಡರು. ಕನ್ನಡದಲ್ಲಿ 'ಮನೆಮಗಳು' ಎಂದೇ ಖ್ಯಾತಿ ಪಡೆದರು.

ತೆಲುಗು ಡೆಬ್ಯೂಟ್​ ಬಳಿಕ ಹೆಸರು ಬದಲಾವಣೆ

ತೆಲುಗಿನ ಗುಪ್ಪೆದಂಥಾ ಮನಸ್ಸು ಧಾರಾವಾಹಿಯಲ್ಲಿ ಮಿಂಚಿದ ಬಳಿಕ ತೆಲುಗು ಚಿತ್ರರಂಗದಲ್ಲಿ ಬಿಜಿಯಾದರು. ನಿರ್ದೇಶಕ ಸುಕು ಪೂರ್ವಜ್ ಅವರೊಂದಿಗೆ 2ನೇ ಮದುವೆಯಾದ ನಂತರ ಜ್ಯೋತಿ ಪೂರ್ವಜ್ ಎಂದು ಹೆಸರು ಬದಲಿಸಿಕೊಂಡರು.

ಬೋಲ್ಡ್ ಅವತಾರ

ತೆಲುಗಿನಲ್ಲಿ ನಾಯಕಿಯಾಗಿ 'ಕಿಲ್ಲರ್' ಚಿತ್ರದ ಮೂಲಕ ಗಮನ ಸೆಳೆದರು. ಇದು ಸೈ-ಫೈ ಥ್ರಿಲ್ಲರ್ ಚಿತ್ರವಾಗಿದ್ದು, ಬೋಲ್ಡ್ ಮತ್ತು ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ತೆಲುಗು ಸಿನಿಮಾ ಮತ್ತು ವೆಬ್ ಸೀರೀಸ್‌ಗಳಲ್ಲಿ ಸಕ್ರಿಯರಾಗಿದ್ದಾರೆ.

ಫ್ಯಾನ್ ಫಾಲೋಯಿಂಗ್

ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಫಿಟ್‌ನೆಸ್, ಗ್ಲಾಮರಸ್ ಫೋಟೋಶೂಟ್‌ಗಳು ಮತ್ತು ಬೋಲ್ಡ್ ಲುಕ್‌ಗಳಿಂದಾಗಿ ಯುವಕರಲ್ಲಿ ಭಾರಿ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ.

ಸ್ವಿಮ್​ ಶೂಟ್​ನಲ್ಲಿ ಬೋಲ್ಡ್​ ಫೋಟೋ

ಜ್ಯೋತಿ ಪೂರ್ವಜ್​ ಅವರು ಇದೀಗ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬೋಲ್ಡ್​ ಫೋಟೋಗಳನ್ನು ಹರಿಬಿಟ್ಟಿದ್ದಾರೆ. ಗುಲಾಬಿ ಬಣ್ಣದ ಸ್ವಿಮ್​ ಶೂಟ್​ ಧರಿಸಿ, ಎದೆಸೀಳು ಕಾಣವಂತೆ ಕ್ಯಾಮೆರಾಗೆ ಮಾದಕವಾಗಿ ಪೋಸ್​ ನೀಡಿದ್ದಾರೆ. ಜ್ಯೋತಿಯ ಮೈಮಾಟವನ್ನು ನೋಡಿ ಪಡ್ಡೆ ಹುಡುಗರ ಮೈ ಬಿಸಿಯೇರಿದೆ.