ಸುಸ್ತು, ನಿಶ್ಯಕ್ತಿಗೆ ಹೇಳಿ ಬೈ-ಬೈ: ನಿಮ್ಮನ್ನು ದಿನವಿಡೀ ಚೈತನ್ಯವಾಗಿಡುವ ಆಹಾರಗಳ 
ಫೋಟೋ ಗ್ಯಾಲರಿ

ಸುಸ್ತು, ನಿಶ್ಯಕ್ತಿಗೆ ಹೇಳಿ ಬೈ-ಬೈ: ನಿಮ್ಮನ್ನು ದಿನವಿಡೀ ಚೈತನ್ಯವಾಗಿಡುವ ಆಹಾರಗಳಿವು!

ವಿಶ್ವಾಸ್​ ಎನ್​ ಜೋಳದಾಳು

ಸುಸ್ತು, ನಿಶ್ಯಕ್ತಿಗೆ ಹೇಳಿ ಬೈ-ಬೈ: ನಿಮ್ಮನ್ನು ದಿನವಿಡೀ ಚೈತನ್ಯವಾಗಿಡುವ ಆಹಾರಗಳ

ಬೆಂಗಳೂರು: ಇಂದಿನ ಜಂಜಾಟದ ಜೀವನಶೈಲಿ, ಹೆಚ್ಚುತ್ತಿರುವ ಮಾಲಿನ್ಯ ಮತ್ತು ಹರಡುತ್ತಿರುವ ರೋಗಗಳ ನಡುವೆ ನಮ್ಮನ್ನು ರಕ್ಷಿಸುವುದು ನಾವು ಸೇವಿಸುವ ಆಹಾರ ಮಾತ್ರ. "ನಮ್ಮ ಆಹಾರವೇ ನಮಗೆ ಔಷಧಿಯಾಗಬೇಕು" ಎಂಬ ನಾಣ್ಣುಡಿಯಂತೆ, ಶಕ್ತಿ, ಆರೋಗ್ಯ ಮತ್ತು ಜೀವಸತ್ವಗಳ ಗಣಿಯಾಗಿರುವ ಕೆಲವು ಆಹಾರಗಳನ್ನು ನಾವು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

1. ಸೊಪ್ಪು ಮತ್ತು ಹಸಿರು ತರಕಾರಿಗಳು

ಪಾಲಕ್, ದಂಟು ಮತ್ತು ಮೆಂತ್ಯ ಸೊಪ್ಪುಗಳು ಕಬ್ಬಿಣಾಂಶ ಮತ್ತು ಫೋಲಿಕ್ ಆಮ್ಲದ ಖಜಾನೆ. ಇವು ರಕ್ತಹೀನತೆಯನ್ನು ತಡೆಗಟ್ಟಿ, ದೇಹದಲ್ಲಿ ಆಮ್ಲಜನಕದ ಸಂಚಾರವನ್ನು ಸುಗಮಗೊಳಿಸುತ್ತವೆ. ದಿನಕ್ಕೊಂದು ಬಟ್ಟಲು ಸೊಪ್ಪು ಸೇವಿಸುವುದು ನಿಮ್ಮ ಆಯಸ್ಸನ್ನು ಹೆಚ್ಚಿಸುತ್ತದೆ.

2. ಒಣ ಹಣ್ಣುಗಳು ಮತ್ತು ಬೀಜಗಳು

ಬಾದಾಮಿ, ಆಕ್ರೋಟ್ ಮತ್ತು ಅಗಸೆ ಬೀಜಗಳು ಮೆದುಳಿನ ಆರೋಗ್ಯಕ್ಕೆ ಹಾಗೂ ಹೃದಯದ ಬಲಕ್ಕೆ ಅತ್ಯಗತ್ಯ. ಇವುಗಳಲ್ಲಿರುವ 'ಒಮೆಗಾ-3 ಫ್ಯಾಟಿ ಆಸಿಡ್ಸ್' ನಿಮ್ಮ ಚರ್ಮದ ಕಾಂತಿ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುತ್ತವೆ.

3. ಸಿಟ್ರಸ್ ಹಣ್ಣುಗಳು

ಕಿತ್ತಳೆ, ನಿಂಬೆ ಮತ್ತು ನೆಲ್ಲಿಕಾಯಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನಂಬರ್ ಒನ್. ಇವುಗಳಲ್ಲಿರುವ ವಿಟಮಿನ್ ಸಿ ಶೀತ, ಕೆಮ್ಮು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿ ನೀಡುತ್ತವೆ.

4. ಮೊಟ್ಟೆ ಮತ್ತು ಧಾನ್ಯಗಳು

ಪ್ರೋಟೀನ್‌ಗಾಗಿ ಮೊಟ್ಟೆ ಅತ್ಯುತ್ತಮ ಆಯ್ಕೆ. ಅದರಂತೆ ನವಣೆ, ಸಾಮೆ, ರಾಗಿ ಅಂತಹ ಸಿರಿಧಾನ್ಯಗಳು ದೇಹಕ್ಕೆ ಅಗತ್ಯವಿರುವ ನಾರಿನಂಶವನ್ನು ನೀಡಿ, ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತವೆ ಮತ್ತು ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡುತ್ತವೆ.