ಕಾಂತಾರ ಬ್ಯೂಟಿ ಸಪ್ತಮಿ
ನಟಿ ಸಪ್ತಮಿ ಗೌಡ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳಬೇಕಿಲ್ಲ. ಅದರಲ್ಲೂ 2022ರಲ್ಲಿ ತೆರೆಕಂಡ ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡರು.ಪ್ಯಾನ್ ಇಂಡಿಯಾ ನಟಿ
ಪ್ರಾದೇಶಿಕ ಚಿತ್ರವಾಗಿ ಕನ್ನಡ ಭಾಷೆಯಲ್ಲಿ ಮೊದಲು ಬಿಡುಗಡೆಯಾದ 'ಕಾಂತಾರ' ಸಿನಿಮಾ, ನಂತರ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ಯಾನ್ ಇಂಡಿಯಾ ಹಿಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಚಿತ್ರದ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ ಸಪ್ತಮಿ ಗೌಡ ಹೆಸರು ಎಲ್ಲರಿಗೂ ಪರಿಚಯವಾಯಿತು.ಮುಂದಿನ ಸಿನಿಮಾಗಳು
ಕಾಂತಾರ ಚಿತ್ರದ ನಂತರ ಯುವರಾಜ್ ಕುಮಾರ್ ನಟನೆಯ ಯುವ ಸಿನಿಮಾದಲ್ಲಿ ನಟಿಸಿದರು. ಪ್ರಸ್ತುತ, ಶೋಧ ಮತ್ತು ದಿ ರೈಸ್ ಆಫ್ ಅಶೋಕ ಸಿನಿಮಾದಲ್ಲಿ ನಟಿಸಿದ್ದಾರೆ.ತೆಲುಗಿನಲ್ಲಿ ಕೈಕೊಟ್ಟ ಲಕ್
ಇತ್ತೀಚೆಗೆ ನಾಯಕ ನಿತಿನ್ ನಟನೆಯ 'ತಮ್ಮುಡು' ಚಿತ್ರದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೂ ಸಪ್ತಮಿ ಗೌಡ ಪದಾರ್ಪಣೆ ಮಾಡಿದರು. ಆದರೆ, ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಲಿಲ್ಲ.ಜಾಲತಾಣದಲ್ಲಿ ಹೈಪರ್ ಆಕ್ಟಿವ್
ಸಿನಿಮಾ ಹೊರತುಪಡಿಸಿದರೆ ಸಾಮಾಜಿಕ ಜಾಲತಾಣದಲ್ಲಿ ಸಪ್ತಮಿ ಅವರು ಹೈಪರ್ ಆಕ್ಟಿವ್ ಆಗಿರುತ್ತಾರೆ. ಅವರು ಆಗಾಗ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.ವೆಲ್ವೆಟ್ ಸೀರೆಯಲ್ಲಿ ಸಪ್ತಮಿ ಸೊಬಗು
ಇತ್ತೀಚೆಗೆ, ಸಪ್ತಮಿ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ನೀಲಿ ವೆಲ್ವೆಟ್ ಸೀರೆಯಲ್ಲಿ ಮುದ್ದಾದ ನಗುವಿನೊಂದಿಗೆ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವೆಲ್ವೆಟ್ ಸೀರೆಯಲ್ಲಿ ಸಪ್ತಮಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಅದನ್ನು ನೋಡಿದ ಅಭಿಮಾನಿಗಳು ಸಪ್ತಮಿ ಸೌಂದರ್ಯವನ್ನು ಹೊಗಳುವ ಕಾಮೆಂಟ್ಗಳನ್ನು ಹರಿಬಿಡುತ್ತಿದ್ದಾರೆ.