ಈ ಚಾಲ್ತಿಯಲ್ಲಿರೋದು ರುಕ್ಮಿಣಿ ಹೆಸರು 
ಫೋಟೋ ಗ್ಯಾಲರಿ

ಕಪ್ಪು ದಿರಿಸಿನಲ್ಲಿ ಕಣ್ಮನ ಸೆಳೆದ ರುಕ್ಕು: ಕಾಂತಾರ ಬೆಡಗಿಯ ಅಂದಕ್ಕೆ ಮರುಳಾದ ಫ್ಯಾನ್ಸ್​! Rukmini Vasanth

ರಮೇಶ್​ ಕುಮಾರ್​​ ಬಿ ಎಡಮೋಳೆ

ಈ ಚಾಲ್ತಿಯಲ್ಲಿರೋದು ರುಕ್ಮಿಣಿ ಹೆಸರು

ನಟಿ ರುಕ್ಮಿಣಿ ವಸಂತ್ ಅವರ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ರುಕ್ಮಿಣಿ, ಇತ್ತೀಚೆಗೆ ಕಾಂತಾರ: ಅಧ್ಯಾಯ 1 ಚಿತ್ರದ ಮೂಲಕ ಇದ್ದಕ್ಕಿದ್ದಂತೆ ದೇಶದ ಗಮನ ಸೆಳೆದಿದ್ದಾರೆ.

ರುಕ್ಮಿಣಿ ತಂದೆ ಕರ್ನಲ್

ರುಕ್ಮಿಣಿ ವಸಂತ್ ಅವರು 1996, ಡಿಸೆಂಬರ್ 10ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆಯ ಹೆಸರು ಕರ್ನಲ್ ವಸಂತ್ ವೇಣುಗೋಪಾಲ್. ಇವರು ಕರ್ನಾಟಕದ ಮೊದಲ ಅಶೋಕ ಚಕ್ರ ಪುರಸ್ಕಾರ ವಿಜೇತ. ತಾಯಿ ಸುಭಾಷಿಣಿ ವಸಂತ್ ಖ್ಯಾತ ಭರತನಾಟ್ಯ ನೃತ್ಯಗಾರ್ತಿಯಾಗಿದ್ದಾರೆ.

ಲಂಡನ್‌ನಲ್ಲಿ ಅಭಿನಯ ತರಬೇತಿ

ಬಾಲ್ಯದಲ್ಲಿ ಆರ್ಮಿ ಸ್ಕೂಲ್, ಏರ್ ಫೋರ್ಸ್ ಸ್ಕೂಲ್ ಮತ್ತು ಸೆಂಟರ್ ಫಾರ್ ಲರ್ನಿಂಗ್‌ನಲ್ಲಿ ಶಿಕ್ಷಣ ಪಡೆದ ರುಕ್ಮಿಣಿ, ಲಂಡನ್‌ನ ರಾಯಲ್ ಅಕಾಡೆಮಿ ಆಫ್ ಡ್ರಾಮ್ಯಾಟಿಕ್ ಆರ್ಟ್ಸ್‌ನಲ್ಲಿ ಅಭಿನಯದಲ್ಲಿ ಪದವಿ ಪಡೆದರು. ಈ ಮೂಲಕ ತಮ್ಮ ಕುಟುಂಬದ ಸೇವಾ ಮತ್ತು ಕಲಾ ಪರಂಪರೆಯನ್ನು ಮುಂದುವರಿಸುತ್ತಾ ಚಿತ್ರರಂಗಕ್ಕೆ ಧುಮುಕಿದರು.

ಬೀರ್‌ಬಲ್ ಟ್ರಯಾಲಜಿ ಮೊದಲ ಸಿನಿಮಾ

ರುಕ್ಮಿಣಿ ವಸಂತ್‌ರ ಮೊದಲ ಚಿತ್ರ ಬೀರ್‌ಬಲ್ ಟ್ರಯಾಲಜಿ. ಇದು 2019ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಈ ಸಿನಿಮಾವನ್ನು ಎಂ.ಜಿ. ಶ್ರೀನಿವಾಸ್ ನಿರ್ದೇಶಿಸಿ, ನಟಿಸಿದ್ದಾರೆ. ಅದೇ ವರ್ಷ ಹಿಂದಿಯ 'ಅಪ್‌ಸ್ಟಾರ್ಟ್ಸ್' ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಪ್ರವೇಶಿಸಿದರು.

ಸಪ್ತ ಸಾಗರದಾಚೆ ಎಲ್ಲೋ ಗೆಲುವಿನ ಸಿಹಿ

ರುಕ್ಮಿಣಿ ಅವರಿಗೆ ನಿಜವಾದ ಯಶಸ್ಸು ಸಿಕ್ಕಿದ್ದು 2023ರಲ್ಲಿ ತೆರೆಕಂಡ 'ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ' ಮತ್ತು 'ಸೈಡ್ ಬಿ' ಚಿತ್ರಗಳ ಮೂಲಕ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜತೆ ನಟಿಸಿದರು. ಈ ಚಿತ್ರಗಳಲ್ಲಿ ಪ್ರಿಯಾ ಪಾತ್ರದಲ್ಲಿ ರುಕ್ಮಿಣಿ ಅವರ ಅಭಿನಯ ಒಳ್ಳೆಯ ಯಶಸ್ಸನ್ನು ತಂದಿತು. ಅಲ್ಲದೆ, ಫಿಲ್ಮ್‌ಫೇರ್ ಕ್ರಿಟಿಕ್ಸ್ ಅವಾರ್ಡ್‌ ಕೂಡ ಸಿಕ್ಕಿತು.

ಸಾಲು ಸಾಲು ಸಿನಿಮಾಗಳು

'ಬಾನ ದಾರಿಯಲ್ಲಿ' ಸಿನಿಮಾದಲ್ಲಿ ಗಣೇಶ್‌ ಜತೆ ನಟಿಸಿ ಗಮನ ಸೆಳೆದರು. 2024ರಲ್ಲಿ 'ಬಗೀರ' ಮತ್ತು 'ಭೈರತಿ ರಾಣಗಲ್' ಚಿತ್ರಗಳು ವಾಣಿಜ್ಯ ಯಶಸ್ಸು ತಂದರೆ, ತೆಲುಗಿನಲ್ಲಿ 'ಅಪ್ಪುಡೊ ಇಪ್ಪುಡೊ ಎಪ್ಪುಡೊ' ಸಿನಿಮಾದಲ್ಲಿ ನಿಖಿಲ್ ಸಿದ್ಧಾರ್ಥನೊಂದಿಗೆ ಡೆಬ್ಯೂ ಮಾಡಿದರು. 2025ರಲ್ಲಿ ತಮಿಳಿನ 'ಏಸ್' (ವಿಜಯ್ ಸೇತುಪತಿ) ಮತ್ತು 'ಮದರಾಸಿ' (ಶಿವಕಾರ್ತಿಕೇಯನ್) ಚಿತ್ರಗಳಲ್ಲಿ

ಕಾಂತಾರದಿಂದ ಭರ್ಜರಿ ಯಶಸ್ಸು

ಕಾಂತಾರ: ಚಾಪ್ಟರ್ 1' ಚಿತ್ರದಲ್ಲಿ ಕನಕವತಿ ಪಾತ್ರದಲ್ಲಿ ಅವರ ಅಭಿನಯ ಮತ್ತು ಸಂಭಾಷಣೆಗಳು ಅತ್ಯಂತ ಯಶಸ್ವಿಯಾದವು. ಕಾಂತಾರಾದಿಂದ ಭಾರಿ ಯಶಸ್ಸನ್ನು ರುಕ್ಮಿಣಿ ಅವರು ಗಳಿಸಿದ್ದಾರೆ. ಇದೀಗ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದಲ್ಲಿ ನಟ ಯಶ್ ಜೊತೆ ನಟಿಸುತ್ತಿದ್ದಾರೆ.

ಕಪ್ಪು ಧಿರಿಸಿನಲ್ಲಿ ಕಣ್ಮನ ಸೆಳೆದ ರುಕ್ಕು

ಸಿನಿಮಾ ಹೊರತುಪಡಿಸಿ ಜಾಲತಾಣದಲ್ಲೂ ಸಕ್ರಿಯರಾಗಿರುವ ರುಕ್ಮಿಣಿ​, ಆಗಾಗ ಕಣ್ಮನ ಸೆಳೆಯುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಕಪ್ಪು ಧಿರಿಸಿನಲ್ಲಿ ತನ್ನ ಸ್ಟೈಲಿಶ್ ಪೋಸ್‌ಗಳಿಂದ ಫ್ಯಾನ್ಸ್​ ಮನಸ್ಸು ಗೆದ್ದಿದ್ದಾರೆ. ಅವರ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಫ್ಯಾನ್ಸ್​ ಅವರ ಅಂದವನ್ನು ಹೊಗಳಿ ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ.