ಈ ಆಹಾರಗಳ ಸೇವನೆಯಿಂದ ಮಧುಮೇಹದ ಅಪಾಯ ದೂರ 
ಫೋಟೋ ಗ್ಯಾಲರಿ

ಈ ಆಹಾರಗಳ ಸೇವನೆಯಿಂದ ಮಧುಮೇಹದ ಅಪಾಯ ದೂರ

ವಿಶ್ವಾಸ್​ ಎನ್​ ಜೋಳದಾಳು

ಈ ಆಹಾರಗಳ ಸೇವನೆಯಿಂದ ಮಧುಮೇಹದ ಅಪಾಯ ದೂರ

ಇನ್ಸುಲಿನ್ ರೆಸಿಸ್ಟೆನ್ಸ್ ಎಂದರೆ ನಿಮ್ಮ ದೇಹದ ಜೀವಕೋಶಗಳು ಇನ್ಸುಲಿನ್ ಹಾರ್ಮೋನ್‌ಗೆ ಸರಿಯಾಗಿ ಪ್ರತಿಕ್ರಿಯಿಸದಿರುವುದು. ಇದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ.

1. ಸಿರಿಧಾನ್ಯಗಳು ಮತ್ತು ನಾರಿನಂಶದ ಆಹಾರ

ಬಿಳಿ ಅಕ್ಕಿ ಮತ್ತು ಮೈದಾ ಬದಲಿಗೆ ನಾರಿನಂಶ ಹೆಚ್ಚಿರುವ ಆಹಾರಗಳನ್ನು ಬಳಸಿ. ನಾರಿನಂಶವು ರಕ್ತದಲ್ಲಿ ಸಕ್ಕರೆ ಅಂಶವು ನಿಧಾನವಾಗಿ ಹರಡುವಂತೆ ಮಾಡುತ್ತದೆ, ಇದರಿಂದ ಇನ್ಸುಲಿನ್ ಹಠಾತ್ ಏರಿಕೆಯಾಗುವುದಿಲ್ಲ.

2. ದಾಲ್ಚಿನ್ನಿ

ದಾಲ್ಚಿನ್ನಿ ಕೇವಲ ಮಸಾಲೆಯಲ್ಲ, ಇದು ಇನ್ಸುಲಿನ್ ರೆಸಿಸ್ಟೆನ್ಸ್‌ಗೆ ರಾಮಬಾಣ. ಇದು ಜೀವಕೋಶಗಳು ಇನ್ಸುಲಿನ್ ಅನ್ನು ಸುಲಭವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

3. ಮೆಂತೆ ಕಾಳುಗಳು

ಮಧುಮೇಹ ನಿಯಂತ್ರಣಕ್ಕೆ ಮೆಂತೆ ಅತ್ಯಂತ ಹಳೆಯ ಮತ್ತು ಪರಿಣಾಮಕಾರಿ ಮನೆಮದ್ದು. ಇದು ಕಾರ್ಬೋಹೈಡ್ರೇಟ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಇನ್ಸುಲಿನ್ ಕಾರ್ಯಕ್ಷಮತೆ ಹೆಚ್ಚಿಸುತ್ತದೆ.

4. ಆಪಲ್ ಸೈಡರ್ ವಿನೆಗರ್

ಊಟಕ್ಕೆ ಮೊದಲು ಆಪಲ್ ಸೈಡರ್ ವಿನೆಗರ್ ಸೇವಿಸುವುದು ಇನ್ಸುಲಿನ್ ಮಟ್ಟವನ್ನು ಸಮತೋಲನದಲ್ಲಿಡುತ್ತದೆ.

5. ಹಸಿರು ಎಲೆ ತರಕಾರಿಗಳು ಮತ್ತು ನುಗ್ಗೆ ಸೊಪ್ಪು

ತರಕಾರಿಗಳಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಇನ್ಸುಲಿನ್ ನಿರೋಧಕತೆಯನ್ನು ಕಡಿಮೆ ಮಾಡುತ್ತವೆ. ನುಗ್ಗೆ ಸೊಪ್ಪು ಇನ್ಸುಲಿನ್ ರೆಸಿಸ್ಟೆನ್ಸ್‌ ಅನ್ನು ನೈಸರ್ಗಿಕವಾಗಿ ರಿವರ್ಸ್ ಮಾಡುವ ಶಕ್ತಿ ಹೊಂದಿದೆ.