ಕ್ಲೀನ್ ಸ್ವೀಪ್ ಮಾಡುವತ್ತ ಹರಿಣರ ಪಡೆ
ಕ್ಲೀನ್ ಸ್ವೀಪ್ ಮಾಡುವತ್ತ ಹರಿಣರ ಪಡೆ
ದಕ್ಷಿಣ ಆಫ್ರಿಕಾ 2 ಪಂದ್ಯಗಳ ಟೆಸ್ಟ್ ಸರಣಿ ಗೆದ್ದರೆ, ವಿಶ್ವ ಕ್ರಿಕೆಟ್‌ನಲ್ಲಿ ಯಾವುದೇ ತಂಡವು ಸಾಧಿಸಲಾಗದ ದಾಖಲೆಯನ್ನು ಸಾಧಿಸಲಿದೆ. ಟೀಮ್ ಇಂಡಿಯಾವನ್ನು ಎರಡು ಬಾರಿ ತವರಿನಲ್ಲೇ ವೈಟ್‌ವಾಶ್ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಹಾಗೂ ಇತಿಹಾಸಕ್ಕೆ ಸಾಕ್ಷಿಯಾಗಲಿದೆ.2 ತಂಡಗಳಿಂದ ಭಾರತ ತವರಿನಲ್ಲಿ ವೈಟ್‌ವಾಶ್
2000ದಲ್ಲಿ, ಹ್ಯಾನ್ಸಿ ಕ್ರಾಹ್ನ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಭಾರತವನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು. ಕಳೆದ ವರ್ಷ, ಟಾಪ್ ಲ್ಯಾಥಮ್ ಕ್ಯಾಪ್ಟನ್ಸಿಯ ನ್ಯೂಜಿಲೆಂಡ್ ತಂಡ ಭಾರತವನ್ನು 3-0 ಅಂತರದಿಂದ ಮಣಿಸಿತು.ಒಂದೇ ಒಂದು ಟೆಸ್ಟ್ ಪಂದ್ಯ
1980ರಲ್ಲಿ, ಬಿಸಿಸಿಐ 50 ವರ್ಷಗಳನ್ನು ಪೂರೈಸಿದಾಗ, ಮುಂಬೈ ಅಂಗಳದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಕೇವಲ ಒಂದೇ ಒಂದು ಟೆಸ್ಟ್ ಪಂದ್ಯವನ್ನಾಡಿತು. ಆ ಪಂದ್ಯವನ್ನು ಭಾರತ 10 ವಿಕೆಟ್‌ಗಳಿಂದ ಸೋತಿತು. ಆದರೆ, ಒಂದೇ ಪಂದ್ಯ ಆಡುವುದನ್ನು ಸರಣಿ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಇದು ಪರಿಗಣನೆಗೆ ಬರಲಿಲ್ಲ.ಗಂಭೀರ್ ಪಾಲಿಗೆ ಕೆಟ್ಟ ರೆಕಾರ್ಡ್
ಪ್ರಸ್ತುತ ಗುವಾಹಟಿಯಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಡ್ರಾ ಕಾಣದೆ ಸೋತರೆ, ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಪಾಲಿಗೆ ಇದು ಕೆಟ್ಟ ದಾಖಲೆಯಾಗಿ ಉಳಿಯಲಿದೆ. ಎರಡು ವಿದೇಶಿ ತಂಡಗಳ ಎದುರು ತವರಿನಲ್ಲಿ ಎರಡು ವೈಟ್‌ವಾಶ್‌ಗಳನ್ನು ಎದುರಿಸಿದ ಮೊದಲ ಸೋಲಿನ ದಾಖಲೆ ಕೋಚ್ ಗಂಭೀರ್ ಹೆಸರಿಗೆ ಸೇರಲಿದೆ.