ಗಾಲಾ ನೈಟ್​ನಲ್ಲಿ ಆರ್​ಸಿಬಿ ವನಿತೆಯರ ಮಿಂಚು 
ಫೋಟೋ ಗ್ಯಾಲರಿ

ಕಲರ್​ಫುಲ್​ ಉಡುಗೆಯಲ್ಲಿ ಸಖತ್​ ಹಾಟ್​ ಆಗಿ ಕಾಣಸಿಕೊಂಡ ಆರ್​ಸಿಬಿ ನಾರಿಯರು! RCB

ರಮೇಶ್​ ಕುಮಾರ್​​ ಬಿ ಎಡಮೋಳೆ

ಗಾಲಾ ನೈಟ್​ನಲ್ಲಿ ಆರ್​ಸಿಬಿ ವನಿತೆಯರ ಮಿಂಚು

ನಿನ್ನೆ (ಜನವರಿ 22, 2026) ಆಯೋಜಿಸಲಾಗಿದ್ದ ಆರ್‌ಸಿಬಿ 'ಗಾಲಾ ನೈಟ್' ಕಾರ್ಯಕ್ರಮದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಆಟಗಾರ್ತಿಯರು ಅತ್ಯಂತ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಸ್ಮೃತಿ ಲುಕ್​ಗೆ ಫ್ಯಾನ್ಸ್​ ಫಿದಾ

ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಅವರು ಗಾಲಾ ನೈಟ್​ ಕಾರ್ಯಕ್ರಮದಲ್ಲಿ ಕಪ್ಪು ಬಣ್ಣದ ಟ್ರೆಂಡಿ ಡ್ರೆಸ್​​ನಲ್ಲಿ ಎಲ್ಲರ ಗಮನ ಸೆಳೆದರು.

ಲಾರೆನ್​ ಲುಕ್​ಗೆ ಕ್ಲೀನ್​ ಬೋಲ್ಡ್​

ತಮ್ಮ ವೇಗದ ಬೌಲಿಂಗ್​ ದಾಳಿಯಿಂದ ಎದುರಾಳಿ ತಂಡದ ಬ್ಯಾಟ್ಸ್​ವುಮನ್​ಗಳಲ್ಲಿ ನಡುಕ ಹುಟ್ಟಿಸಿರುವ ಆರ್​ಸಿಬಿ ಸ್ಪೀಡ್​ ಸ್ಟಾರ್​ ಲಾರೆನ್​ ಬೆಲ್​ ಹಳದಿ ಬಣ್ಣದ ಉಡುಪಿನಲ್ಲಿ ಸಖತ್​ ಹಾಟ್ ಆಗಿ ಕಾಣಿಸಿಕೊಂಡರು.

ಮೋಡಿ ಮಾಡಿದ ಗೌತಮಿ ನಗು

ಗೌತಮಿ ನಾಯಕ್ ಕರ್ನಾಟಕ ಮೂಲದ ಉದಯೋನ್ಮುಖ ಆಲ್-ರೌಂಡರ್ ಆಟಗಾರ್ತಿಯಾಗಿದ್ದಾರೆ. ಇತ್ತೀಚೆಗೆ ನಡೆದ ತಂಡದ 'ಗಾಲಾ ನೈಟ್' ಕಾರ್ಯಕ್ರಮದಲ್ಲಿ ಅವರು ಕಪ್ಪು ಬಣ್ಣದ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.

ನಾಚಿದ ನಾಡಿನ್​

ತಮ್ಮ ಬೌಲಿಂಗ್​ ಮತ್ತು ಸ್ಫೋಟಕ ಬ್ಯಾಟಿಂಗ್​ನಿಂದ ಎದುರಾಳಿ ತಂಡಕ್ಕೆ ಮುಳ್ಳಾಗಿರುವ ಆರ್​ಸಿಬಿ ಆಲ್​ರೌಂಡರ್​ ನಾಡಿನ್ ಡಿ ಕ್ಲರ್ಕ್​ ಸಾಂಪ್ರಾದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು.

ಜಾರ್ಜಿಯಾ ವಿಸ್ಮಯ

ಆರ್​ಸಿಬಿ ಮಹಿಳಾ ತಂಡದ ಬ್ಯಾಟಿಂಗ್​ ಶಕ್ತಿಯಾಗಿರುವ ಜಾರ್ಜಿಯಾ ವೋಲ್​ ಅವರು ಕೆಂಪು ಬಣ್ಣದ ದಿರಿಸಿನಲ್ಲಿ ಗಾಲಾ ನೈಟ್​ನಲ್ಲಿ ಎಲ್ಲ ಕಣ್ಣು ಕುಕ್ಕಿದರು.

ಗ್ರೇಸ್​ ಹ್ಯಾರಿಸ್​ ಕಮಾಲ್

ತಮ್ಮ ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕವೇ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿರುವ ಆರ್​ಸಿಬಿ ಹೆಣ್ಣು ಹುಲಿ ಗ್ರೇಸ್​ ಹ್ಯಾರಿಸ್​ ಕಪ್ಪು ಬಣ್ಣದ ದಿರಿಸಿನಲ್ಲಿ ಕಂಗೊಳಿಸಿದರು.

ಹಾಟ್​ ರಿಚಾ

ತಮ್ಮ ವಿಕೆಟ್​ ಕೀಪಿಂಗ್​ ಕೌಶಲ್ಯ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಆರ್​ಸಿಬಿ ಪಾಲಿಗೆ ಆಧಾತವಾಗಿರುವ ಸ್ಫೋಟಕ ಆಟಗಾರ್ತಿ ರಿಚಾ ಘೋಷ್​ ಕಡು ನೀಲಿ ಬಣ್ಣದ ಲಾಂಗ್​ ಡ್ರೆಸ್​ನಲ್ಲಿ ಸಖತ್​ ಬೋಲ್ಡ್​ ಆಗಿ ಕಾಣಿಸಿಕೊಂಡರು.

ಟಗರು ಪುಟ್ಟಿ ಶ್ರೇಯಾಂಕಾ

ಸ್ಪಿನ್​ ಬೌಲಿಂಗ್​ನಲ್ಲಿ ಆರ್​ಸಿಬಿಗೆ ಪ್ರಮುಖ ಅಸ್ತ್ರವಾಗಿರುವ ಹಾಗೂ ನಿರ್ಣಾಯಕ ಸಮಯದಲ್ಲಿ ವಿಕೆಟ್​ ಕಬಳಿಸುವ ಕನ್ನಡತಿ ಶ್ರೇಯಾಂಕಾ ಪಾಟೀಲ್​ ಬಾಡಿ ಫಿಟ್​ ಉಡುಗೆಯಲ್ಲಿ ಸಖತ್​ ಹಾಟ್​ ಆಗಿ ಪೋಸ್​ ನೀಡಿದರು.

ಮನ ಗೆದ್ದ ರಾಧಾ

ಆರ್​ಸಿಬಿ ತಂಡಕ್ಕೆ ಬ್ಯಾಟಿಂಗ್​, ಬೌಲಿಂಗ್​ ಮತ್ತು ಫೀಲ್ಡಿಂಗ್​ ಮೂಲಕ ಬಲ ತುಂಬುತ್ತಿರುವ ರಾಧಾ ಯಾದವ್​ ಪ್ಯಾಂಟ್​-ಟಾಪ್​ನಲ್ಲಿ ಮಿಂಚಿದರು.

ಅರುಂಧತಿ ಸ್ಟೈಲಿಶ್​ ಲುಕ್​

ತಮ್ಮ ಬ್ಯಾಟಿಂಗ್​ ಮತ್ತು ವೇಗದ ಬೌಲಿಂಗ್​ನಿಂದ ಆರ್​ಸಿಬಿಯ ಪ್ರಮುಖ ಅಸ್ತ್ರವಾಗಿರುವ ಅರುಂಧತಿ ರೆಡ್ಡಿ ಸ್ಟೈಲಿಶ್​ ಲುಕ್​ನಲ್ಲಿ ಮಿಂಚಿದರು.

ಹ್ಯಾರಿಸ್​-ಸ್ಮೃತಿ ಮಿಂಚು

ತಂಡದ ನಾಯಕಿ ಸ್ಮೃತಿ ಮಂಧಾನ ಹಾಗೂ ಸ್ಟಾರ್ ಆಟಗಾರ್ತಿ ಗ್ರೇಸ್​ ಹ್ಯಾರಿಸ್​ ಅವರು ಕಪ್ಪು ಬಣ್ಣದ ದಿರಿಸಿನಲ್ಲಿ ಕ್ಯಾಮೆರಾಗೆ ಒಟ್ಟಿಗೆ ಪೋಸ್​ ನೀಡಿದರು.

ಲಾರೆನ್​-ಸ್ಮೃತಿ ಜೋಡಿ

ಗಾಲಾ ನೈಟ್​ ಕಾರ್ಯಕ್ರಮದಲ್ಲಿ ತಂಡದ ನಾಯಕಿ ಸ್ಮೃತಿ ಮಂಧಾನ ಜತೆ ಕ್ಯಾಮೆರಾಗೆ ಪೋಸ್​ ನೀಡಿದ ವೇಗದ ಬೌಲರ್​ ಲಾರೆನ್​ ಬೆಲ್​.

ಸಖತ್​ ಅಂಡ್​ ಸ್ಟೈಲಿಶ್​

ತಂಡದ ಸದಸ್ಯರೆಲ್ಲರೂ ಒಟ್ಟಾಗಿ ಹಾಡುಗಳಿಗೆ ಹೆಜ್ಜೆ ಹಾಕುತ್ತಾ, ಕ್ರಿಕೆಟ್ ಒತ್ತಡದಿಂದ ಹೊರಬಂದು ಪರಸ್ಪರ ಸ್ನೇಹದ ಕ್ಷಣಗಳನ್ನು ಆನಂದಿಸಿದರು.

ಸಖತ್​ ಎಂಜಾಯ್​ ಮಾಡುತ್ತಿರುವ ಆರ್​ಸಿಬಿ ವನಿತೆಯರು

ಈ ಗಾಲಾ ನೈಟ್ ಕಾರ್ಯಕ್ರಮವು ಕೇವಲ ಸಂಭ್ರಮಕ್ಕೆ ಮಾತ್ರ ಸೀಮಿತವಾಗದೆ, ಸತತ ಐದು ಪಂದ್ಯಗಳನ್ನು ಗೆದ್ದು ಪ್ಲೇ-ಆಫ್‌ಗೆ ಪ್ರವೇಶಿಸಿರುವ ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಬಾರಿಯೂ ಕಪ್​ ನಮ್ಮದೇ

ಆಟಗಾರ್ತಿಯರ ಈ ಸಂಭ್ರಮವು ಮೈದಾನದಲ್ಲಿ ಅವರ ನಡುವಿನ ಬಾಂಧವ್ಯ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಸಾಬೀತುಪಡಿಸಿತು. ಮುಂದಿನ ಪಂದ್ಯಗಳಿಗೂ ಮುನ್ನ ಆಟಗಾರ್ತಿಯರು ಈ ರೀತಿ ಒಟ್ಟಾಗಿ ಸಮಯ ಕಳೆದಿದ್ದು, ಅಭಿಮಾನಿಗಳಲ್ಲಿ 'ಈ ಬಾರಿಯೂ ಕಪ್ ನಮ್ಮದೇ' ಎಂಬ ನಿರೀಕ್ಷೆಯನ್ನು ಮೂಡಿಸಿದೆ.