ದೇಹಕ್ಕೆ ಅತ್ಯಮೂಲ್ಯ ನಿದ್ರೆ 
ಫೋಟೋ ಗ್ಯಾಲರಿ

ಆಳವಾದ ನಿದ್ರೆ ಪಡೆಯಲು ಇಂದೇ ಈ ಕೆಟ್ಟ ಅಭ್ಯಾಸ ಬಿಟ್ಟುಬಿಡಿ! Sleep Deprivation

ಭಾನುಪ್ರಿಯ ಡಿ.ಕೆ

ದೇಹಕ್ಕೆ ಅತ್ಯಮೂಲ್ಯ ನಿದ್ರೆ

ನಮ್ಮ ದೈನಂದಿನ ಕೆಲವು ತಪ್ಪುಗಳು ರಾತ್ರಿಯ ಗಾಢವಾದ ನಿದ್ರೆಯನ್ನು ಸಂಪೂರ್ಣವಾಗಿ ಹಾಳುಮಾಡುತ್ತವೆ. ಉತ್ತಮ ಆರೋಗ್ಯಕ್ಕೆ ಮಾರಕವಾಗುವ ಅಭ್ಯಾಸಗಳು ಇಲ್ಲಿವೆ ನೋಡಿ.

ಮಲಗುವ ಮುನ್ನ ಮೊಬೈಲ್ ಬಳಕೆ

ಮೊಬೈಲ್ ಅಥವಾ ಟಿವಿ ಪರದೆಯಿಂದ ಬರುವ ಬ್ಲೂ ಲೈಟ್, ನಿದ್ರೆಗೆ ಕಾರಣವಾಗುವ 'ಮೆಲಟೋನಿನ್' ಹಾರ್ಮೋನ್ ಉತ್ಪತ್ತಿಯಾಗದಂತೆ ತಡೆಯುತ್ತದೆ. ಇದರಿಂದ ಹಾಸಿಗೆಯಲ್ಲಿ ಮಲಗಿದರೂ ತಕ್ಷಣ ನಿದ್ರೆ ಬರುವುದಿಲ್ಲ.

ತಡರಾತ್ರಿಯ ಭಾರೀ ಊಟ

ರಾತ್ರಿ ತಡವಾಗಿ ಅತಿಯಾದ ಮಸಾಲೆಯುಕ್ತ ಅಥವಾ ಜಿಡ್ಡಿನ ಆಹಾರ ಸೇವಿಸುವುದರಿಂದ ಅಸಿಡಿಟಿ ಮತ್ತು ಎದೆಯುರಿ ಕಾಣಿಸಿಕೊಳ್ಳುತ್ತದೆ. ನಾವು ಮಲಗಿದಾಗಲೂ ಜೀರ್ಣಾಂಗವ್ಯೂಹ ಕೆಲಸ ಮಾಡಬೇಕಾಗಿ ಬರುವುದರಿಂದ ನಿದ್ರೆಗೆ ಭಂಗ ಬರುತ್ತದೆ.

ಸಂಜೆ ವೇಳೆ ಕೆಫೀನ್ ಸೇವನೆ

ಸಂಜೆಯ ನಂತರ ಟೀ ಅಥವಾ ಕಾಫಿ ಕುಡಿಯುವುದರಿಂದ ಅದರಲ್ಲಿರುವ ಕೆಫೀನ್ ಅಂಶವು ನಮ್ಮ ನರಮಂಡಲವನ್ನು ಜಾಗೃತಗೊಳಿಸುತ್ತದೆ. ಇದು ದೇಹದಲ್ಲಿ 5-6 ಗಂಟೆಗಳ ಕಾಲ ಇರುವುದರಿಂದ ನಿದ್ರೆಯ ಗುಣಮಟ್ಟ ಕೆಡುತ್ತದೆ.

ಅನಿಯಮಿತ ನಿದ್ರೆಯ ಸಮಯ

ಪ್ರತಿದಿನ ಒಂದೇ ಸಮಯಕ್ಕೆ ಮಲಗದೆ ಇರುವುದು ದೇಹದ ನೈಸರ್ಗಿಕ ಗಡಿಯಾರವನ್ನು ಏರುಪೇರು ಮಾಡುತ್ತದೆ. ಇದು ವಾರದ ಇತರ ದಿನಗಳಲ್ಲೂ ನಿದ್ರಹೀನತೆಗೆ ಕಾರಣವಾಗುತ್ತದೆ.

ಅಶುದ್ಧ ವಾತಾವರಣ

ಮಲಗುವ ಕೋಣೆಯಲ್ಲಿ ಅತಿಯಾದ ಬೆಳಕು, ಟಿವಿ ಸದ್ದು ಅಥವಾ ಗದ್ದಲಗಳಿದ್ದರೆ ಮೆದುಳಿಗೆ ಸಂಪೂರ್ಣ ವಿಶ್ರಾಂತಿ ಸಿಗುವುದಿಲ್ಲ. ಕತ್ತಲೆ ಇಲ್ಲದಿದ್ದರೆ ಮೆದುಳು ಆಳವಾದ ನಿದ್ರೆಯ ಹಂತಕ್ಕೆ ತಲುಪಲು ಸಾಧ್ಯವಾಗುವುದಿಲ್ಲ.