ಮಳೆಗಾಲ ಆರಂಭ 
ಫೋಟೋ ಗ್ಯಾಲರಿ

ವರುಣನ ಆರ್ಭಟಕ್ಕೂ ಮುನ್ನ ನಿಮ್ಮ ಮನೆಯನ್ನು ಹೀಗೆ ಪ್ರೊಟೆಕ್ಟ್ ಮಾಡಿ! Rainy Season

ಭಾನುಪ್ರಿಯ ಡಿ.ಕೆ

ಮಳೆಗಾಲ ಆರಂಭ

ಮಳೆಗಾಲ ಆರಂಭವಾಗುವ ಮುನ್ನವೇ ಮನೆಯನ್ನು ಸಿದ್ದಪಡಿಸಿಕೊಳ್ಳುವುದು ತೇವಾಂಶ, ಸೋರಿಕೆ ಮತ್ತು ಇತರೆ ಹಾನಿಗಳಿಂದ ಬದಲಿ ರಕ್ಷಣೆ ನೀಡುತ್ತದೆ. ನಿಮ್ಮ ಮನೆ ಪ್ರೊಟೆಕ್ಟ್ ಮಾಡಲು ಪ್ರಮುಖ ಸಲಹೆಗಳು ಇಲ್ಲಿವೆ.

ಛಾವಣಿ ಮತ್ತು ಗೋಡೆಗಳ ತಪಾಸಣೆ

ಮಳೆ ಬರುವ ಮುನ್ನವೇ ಟೆರೇಸ್ ಅಥವಾ ಗೋಡೆಗಳಲ್ಲಿ ಬಿರುಕುಗಳಿವೆಯೇ ಎಂದು ಪರಿಶೀಲಿಸಿ. ಸಣ್ಣ ಬಿರುಕುಗಳಿದ್ದರೂ ವಾಟರ್‌ಪ್ರೂಫಿಂಗ್ ಕೆಮಿಕಲ್ ಬಳಸಿ ಅವುಗಳನ್ನು ಮುಚ್ಚಿ, ಇದರಿಂದ ನೀರು ಸೋರುವುದನ್ನು ತಡೆಯಬಹುದು.

ನೀರೊಗಾಲುವೆ ಸ್ವಚ್ಛತೆ

ಟೆರೇಸ್ ಹಾಗೂ ಬಾಲ್ಕನಿಗಳಲ್ಲಿರುವ ನೀರಿನ ಪೈಪ್‌ಗಳಲ್ಲಿ ಕಸ, ಒಣಗಿದ ಎಲೆಗಳು ಸಿಲುಕಿಕೊಳ್ಳದಂತೆ ಕ್ಲೀನ್ ಮಾಡಿ. ನೀರು ಸರಾಗವಾಗಿ ಹರಿದು ಹೋಗದಿದ್ದರೆ ಮೇಲ್ಛಾವಣಿಯಲ್ಲಿ ನೀರು ನಿಂತು ಸೀಲಿಂಗ್ ಹಾಳಾಗುತ್ತದೆ.

ವಿದ್ಯುತ್ ವೈರಿಂಗ್ ಸುರಕ್ಷತೆ

ಮನೆಯ ಹೊರಗಿರುವ ಸ್ವಿಚ್ ಬೋರ್ಡ್‌ಗಳು ಮತ್ತು ತೆರೆದ ವೈರ್‌ಗಳನ್ನು ಪರೀಕ್ಷಿಸಿ. ಮಳೆ ನೀರು ತಗುಲಿ ಶಾರ್ಟ್ ಸರ್ಕ್ಯೂಟ್ ಆಗದಂತೆ ಇನ್ಸುಲೇಶನ್ ಟೇಪ್ ಬಳಸಿ ಅಥವಾ ಸುರಕ್ಷಿತ ಬಾಕ್ಸ್ ಅಳವಡಿಸಿ.

ಕಿಟಕಿ ಮತ್ತು ಬಾಗಿಲುಗಳ ನಿರ್ವಹಣೆ

ಮರದ ಕಿಟಕಿ ಬಾಗಿಲುಗಳು ಮಳೆಗೆ ಉಬ್ಬಿ ಸರಿಯಾಗಿ ಮುಚ್ಚುವುದಿಲ್ಲ. ಅದಕ್ಕಾಗಿ ಮುಂಚಿತವಾಗಿ ಆಯಿಲಿಂಗ್ ಮಾಡಿ. ಗಾಜಿನ ಕಿಟಕಿಗಳ ಸಂದಿಗಳಿಂದ ನೀರು ಒಳಗೆ ಬರದಂತೆ ಸಿಲಿಕಾನ್ ಜೆಲ್ ಬಳಸಿ ಸೀಲ್ ಮಾಡಿ.

ಕೀಟಗಳ ನಿಯಂತ್ರಣ

ಮಳೆಗಾಲದಲ್ಲಿ ಸೊಳ್ಳೆ, ನೊಣ ಹಾಗೂ ಕೀಟಗಳ ಕಾಟ ಹೆಚ್ಚು. ಕಿಟಕಿಗಳಿಗೆ ಮೆಶ್ ಅಳವಡಿಸಿ. ತೇವಾಂಶದಿಂದ ಬರುವ ಕೀಟಗಳನ್ನು ತಡೆಯಲು ನೈಸರ್ಗಿಕ ಜೈವಿಕ ಕಿಣ್ವಗಳು ಅಥವಾ ಸೂಕ್ತ ಕ್ಲೀನರ್‌ಗಳನ್ನು ಬಳಸಿ ನೆಲ ಒರೆಸಿ.