ಫೋಟೋ ಗ್ಯಾಲರಿ

'ಪ್ರೇಮದ ಊರಲಿ' ರಮಿಕಾ ಶಿವು

ವಿಜಯವಾಣಿ ಸುದ್ದಿ ಜಾಲ

ಸೆ.25ರಂದು ರಿಲೀಸ್​ ಆಗಿದ್ದ ಪ್ರೇಮದ ಊರಲಿ ಸಿನಿಮಾವು 50 ಕೋಟಿಯನ್ನು ಗಳಿಸಿಕೊಂಡಿದೆ. ಕಡಿಮೆ ಬಜೆಟ್​ನಲ್ಲಿ ನಿರ್ಮಾಣದ ಈ ಸಿನಿಮಾದ ಕತೆಗೆ ಸಿನಿ ಪ್ರೇಮಿಗಳು ಫಿದಾ ಆಗಿದ್ದಾರೆ. ಟಾಕ್ಸಿಕ್​, ಬೇಲ್​​, ಹೆಗ್ಗಣ ಮುದ್ದು ಸಿನಿಮಾಗಳಿಗೂ ಈ ಚಿತ್ರ ಸೆಡ್ಡ ಹೊಡೆದಿದೆ.

ಹಳ್ಳಿ ಜನರ ಬದುಕು, ಹುಟ್ಟುಕೊಳ್ಳುವ ಅನುಮಾನಗಳು, ಪ್ರೀತಿ ಬಿರುಕು ಸೇರಿದಂತೆ ಸಂಬಂಧ ಸುತ್ತ ಈ ಸಿನಿಮಾದ ಕತೆಯನ್ನು ನಿರ್ದೇಶಕ ಮನೋಜ್​ ಕುಮಾರ್​ ಬರೆದಿದ್ದಾರೆ. ಹಳ್ಳಿಯ ಸುತ್ತಲಿನ ಪರಿಸರ, ಸಿಟಿ ಬದುಕು ಕಣ್ಣು ಕಟ್ಟುವಂತಿದೆ.

ಈ ಸಿನಿಮಾದಲ್ಲಿ ರಮಿಕಾ ಶಿವು ವಸಂತಳಾಗಿ ನಟಿಸಿದ್ದು ಮೊದಲಾರ್ಧ ರಗಡ್​ ಆಗಿ ಜೀವಿಸಿದ್ದಾರೆ. ಪಾತ್ರದಲ್ಲಿ ನೈಜವಾದ ನಟನೆಯಿದ್ದು, ಹೆಚ್ಚು ಇಷ್ಟವಾಗುತ್ತಾರೆ.

ರಮಿಕಾ ಶಿವು ಹಲವು ಸೀರಿಯಲ್​ಗಳಲ್ಲಿ​ ನಟಿಸಿ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನೀನಾದೆನಾ ಹೆಚ್ಚು ಖ್ಯಾತಿ ತಂದುಕೊಟ್ಟ ಸೀರಿಯಲ್​. ಗಂಗಾ, ಪಾರು, ನಮ್ಮನೆ ಯುವರಾಣಿಯಲ್ಲಿಯೂ ನಟಿಸಿದ್ದಾರೆ.

ರಮಿಕಾ ಮತ್ತು ಅವರ ಸಹ ನಟ ದಿಲೀಪ್​ ಶೆಟ್ಟಿ ಜೊತೆ ಸೇರಿ ಇತ್ತೀಚೆಗೆ ಹೋಟೆಲ್​ ಉದ್ಯಮ ಶುರು ಮಾಡಿದ್ದರು. ದೊಡ್ಮನೆ ಹೋಟೆಲ್​ ಎಂದು ಹೆಸರಿಟ್ಟಿದ್ದಾರೆ.

ದೀಲಿಪ್​ ಶೆಟ್ಟಿ ಮತ್ತು ರಮಿಕಾ ಪ್ರೀತಿಸುತ್ತಿದ್ದಾರಾ ಎನ್ನುವ ಸಾಕಷ್ಟು ಪ್ರಶ್ನೆಗಳು ಅವರ ಫ್ಯಾನ್ಸ್​ನಲ್ಲಿದೆ. ಆದರೆ, ಈ ಬಗ್ಗೆ ನಟಿ ಎಲ್ಲಿಯೂ ಅಧಿಕೃತ ಸ್ಪಷ್ಟನೆ ಕೊಟ್ಟಿಲ್ಲ.