ಸಿಟ್ರಸ್ ಹಣ್ಣುಗಳು
ಕಿತ್ತಳೆ, ನಿಂಬೆ, ಮೋಸಂಬಿ ಮತ್ತು ದ್ರಾಕ್ಷಿ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ಬಿಳಿ ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸಿ, ಸೋಂಕುಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿ ನೀಡುತ್ತದೆ.ಶುಂಠಿ ಮತ್ತು ಬೆಳ್ಳುಳ್ಳಿ
ಶುಂಠಿಯು ಉರಿಯೂತವನ್ನು ಕಡಿಮೆ ಮಾಡಿದರೆ, ಬೆಳ್ಳುಳ್ಳಿಯಲ್ಲಿರುವ 'ಅಲಿಸಿನ್' ಎಂಬ ಸಂಯುಕ್ತವು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಹೋರಾಡುತ್ತದೆ. ಶೀತ ಮತ್ತು ಕೆಮ್ಮಿಗೆ ಇದು ರಾಮಬಾಣ.ಅರಿಶಿಣ
ಅರಿಶಿಣದಲ್ಲಿರುವ 'ಕುರ್ಕ್ಯುಮಿನ್' ಎಂಬ ಅಂಶವು ಅದ್ಭುತ ಆಂಟಿ-ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ. ಪ್ರತಿದಿನ ರಾತ್ರಿ ಹಾಲಿಗೆ ಒಂದು ಚಿಟಿಕೆ ಅರಿಶಿನ ಬೆರೆಸಿ ಕುಡಿಯುವುದು ರೋಗನಿರೋಧಕ ಶಕ್ತಿಗೆ ತುಂಬಾ ಒಳ್ಳೆಯದು.ಮೊಸರು
ಮೊಸರಿನಲ್ಲಿರುವ 'ಗುಡ್ ಬ್ಯಾಕ್ಟೀರಿಯಾ'ಗಳು ಕರುಳಿನ ಆರೋಗ್ಯವನ್ನು ಕಾಪಾಡುತ್ತವೆ. ನಮ್ಮ ದೇಹದ ಶೇ. 70ರಷ್ಟು ರೋಗನಿರೋಧಕ ಶಕ್ತಿ ಕರುಳಿನ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ.ಪಾಲಕ್ ಸೊಪ್ಪು
ಇದು ವಿಟಮಿನ್ ಸಿ ಮಾತ್ರವಲ್ಲದೆ, ಹಲವಾರು ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಬೀಟಾ ಕ್ಯಾರೋಟಿನ್‌ಗಳನ್ನು ಒಳಗೊಂಡಿದೆ. ಇದು ದೇಹದ ಸೋಂಕು ನಿವಾರಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.