1. ಸೂಕ್ತವಾದ ಆಹಾರ ಸೇವಿಸಿ 
ಫೋಟೋ ಗ್ಯಾಲರಿ

ಮೊಡವೆ ಮುಕ್ತ ಚರ್ಮಕ್ಕಾಗಿ ಈ ಸಲಹೆಗಳನ್ನು ಪಾಲಿಸಿ!| Pimple free face

Vijayavan

1. ಸೂಕ್ತವಾದ ಆಹಾರ ಸೇವಿಸಿ

ನಾವು ಸೇವಿಸುವಂತಹ ಆಹಾರದಲ್ಲಿ ಹೆಚ್ಚು ಸಕ್ಕರೆ, ಹುರಿದ ಆಹಾರಗಳು, ಮಸಾಲೆಯುಕ್ತ ಪದಾರ್ಥಗಳು ಮತ್ತು ಹೆಚ್ಚಿನ ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ಇವು ನಮ್ಮ ಚರ್ಮದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಇದರಿಂದ ಮೊಡವೆಗಳಾಲು ಪ್ರಾರಂಭಿಸುತ್ತವೆ. ಹಾಗಾಗಿ ಆದಷ್ಟು ಹಣ್ಣುಗಳು, ತರಕಾರಿ, ದೇಹಕ್ಕೆ ಬೇಕಾದ ಸಾಕಷ್ಟು ನೀರನ್ನು ಕುಡಿಯಿರಿ.

2. ಗುಣಮಟ್ಟದ ನಿದ್ರೆ

ದೇಹಕ್ಕೆ ಸರಿಯಾದ ನಿದ್ರೆಯನ್ನು ಒದಗಿಸದಿದ್ದರೆ ಚರ್ಮಕ್ಕೆ ವಿಶ್ರಾಂತಿ ಸಿಗದೆ, ಮೊಡವೆಗಳು ಹೆಚ್ಚಾಗಿಸುತ್ತವೆ. ಹಾಗಾಗಿ ಪ್ರತಿದಿನ 7-8 ಗಂಟೆಗಳ ಆಳವಾದ ನಿದ್ರೆಯನ್ನು ಮಾಡುವುದರಿಂದ ದೇಹವು ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ. ಚರ್ಮವನ್ನು ಪುನಃ ಯೌವನಗೊಳಿಸುವಂತೆ ಮಾಡುವುದರ ಜೊತೆಗೆ ಮೊಡವೆಗಳನ್ನು ತೆಗೆದುಹಾಕುವಂತೆ ಮಾಡುತ್ತದೆ.

3. ಶುಚಿತ್ವ

ಪ್ರತಿನಿತ್ಯ ನಿಮ್ಮ ಕೈಗಳನ್ನು ಉನ್ನತ ಸಾಬೂನುಗಳಿಂದ ತೊಳೆಯಿರಿ. ಏಕೆಂದರೆ ನೀವೇನಾದರೂ, ಅಶುಚಿತ್ವ ಕೈಗಳಿಂದ ನಿಮ್ಮ ಮುಖವನ್ನು ಮುಟ್ಟಿಕೊಂಡರೆ ಇವು ಚರ್ಮದಲ್ಲಿ ಮೊಡವೆಗಳಾಗುವಂತೆ ಮಾಡುತ್ತದೆ. ಅದಲ್ಲದೇ ಪ್ರತಿ ಎರಡು - ಮೂರು ದಿನಗಳಿಗೊಮ್ಮೆ ದಿಂಬಿನ ಕವರ್​ ಹಾಗೂ ಟವೆಲ್​ಗಳನ್ನು ಬದಲಾಯಿಸಿ ಇದು ಚರ್ಮಕ್ಕೆ ಆಗುವ ತೊಂದರೆಯನ್ನು ತಡೆಯಲು ಸಹಾಯ ಮಾಡುತ್ತದೆ.

4. ಸೂರ್ಯನ ಬೆಳಕು

ಸೂರ್ಯನ ಬೆಳಕು ಚರ್ಮಕ್ಕೆ ಹಾನಿಕರವಾಗಿದೆ. ಯಾರಾದರು ಚರ್ಮದಲ್ಲಿ ಮೊಡವೆಗಳನ್ನು ಹೊಂದಿದ್ದರೆ ಅಂತವರು ಸೂರ್ಯನ ಬೆಳಕಿಗೆ ಹೋದಾಗ ಅದರ ಗಾಢವಾದ ಕಿರಣಗಳು ಚರ್ಮದ ಮೇಲೆ ಬಿದ್ದು, ಮೊಡವೆಗಳು ಕಲೆಯಾಗಿ ಉಳಿದುಕೊಳ್ಳುವಂತೆ ಮಾಡುತ್ತದೆ. ಹಾಗಾಗಿ ಹೊರಗಡೆ ಹೋಗುವಾಗ ಎಣ್ಣೆ ರಹಿತ ಸನ್​ಸ್ಕ್ರೀನ್​ ಗಳನ್ನು ಹಚ್ಚಿರಿ. ಇವು ಆದಷ್ಟು ಚರ್ಮದ ಮೇಲೆ ಪ್ರಭಾವ ಬೀರುವ ಕಿರಣಗಳನ್ನು ತಡೆಯ