ಹೆಚ್ಚಾಗಿ ಫೋನ್ ಬಳಸುವುದರಿಂದ ನಿಮ್ಮ ಕುತ್ತಿಗೆಯ ಮೇಲೆ ಎಷ್ಟು ಭಾರ ಬೀಳುತ್ತೆ ಗೊತ
ಹೆಚ್ಚಾಗಿ ಫೋನ್ ಬಳಸುವುದರಿಂದ ನಿಮ್ಮ ಕುತ್ತಿಗೆಯ ಮೇಲೆ ಎಷ್ಟು ಭಾರ ಬೀಳುತ್ತೆ ಗೊತ
phone; ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳ ಅತಿಯಾದ ಬಳಕೆ ಜನರ ನಡುವಿನ ವೈಯಕ್ತಿಕ ಸಂಬಂಧಗಳನ್ನು ಹಾಳುಮಾಡುತ್ತಿದೆ. ಕೂತರು, ನಿಂತರು ಹಾಗೂ ಮಲಗಿದರೂ ಮೊಬೈಲ್ ಬೇಕೇ ಬೇಕು ಎನ್ನುವಂತಾಗಿದೆ. ಊಟ ಮಾಡುವಾಗ, ಪ್ರಯಾಣ ಮಾಡುವಾಗ ಮತ್ತು ನಿತ್ಯ ಕರ್ಮಗಳನ್ನು ಮುಗಿಸುವಾಗಲೂ ಮೊಬೈಲ್ ಕೈಯಲ್ಲಿ ಹಿಡಿದಿರಲೇಬೇಕು.15° ಬಾಗಿದಾಗ: ಕುತ್ತಿಗೆಯ ಮೇಲಿನ ಒತ್ತಡ ಸುಮಾರು 12 ಕೆ.ಜಿ.
30° ಬಾಗಿದಾಗ: ಸುಮಾರು 18 ಕೆ.ಜಿ. 45° ಬಾಗಿದಾಗ: ಸುಮಾರು 22 ಕೆ.ಜಿ. 60° ಬಾಗಿದಾಗ: ಸುಮಾರು 27 ಕೆ.ಜಿ.= ಇದರರ್ಥ ನೀವು ನಿಮ್ಮ ಫೋನ್‌ನಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡಿದರೆ, ನಿಮ್ಮ ಕುತ್ತಿಗೆ ಮತ್ತು ಸ್ನಾಯುಗಳು ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತವೆ. ಇದು ನಿಮ್ಮ ಕುತ್ತಿಗೆಯಲ್ಲಿರುವ ನಮ್ಯತೆಯನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ.ನಿವಾರಣೆಗೆ ಟಿಪ್ಸ್:
ಫೋನ್‌ನ್ನು ಕಣ್ಣಿನ ಮಟ್ಟದಲ್ಲಿ ಬಳಕೆ ಮಾಡಿ.
ವಿರಾಮ ತೆಗೆದುಕೊಂಡು ಕುತ್ತಿಗೆ ವ್ಯಾಯಾಮ ಮಾಡಿ.
ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ.
ಕುತ್ತಿಗೆ ಮತ್ತು ಭುಜದ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳನ್ನು ಅಭ್ಯಾಸ ಮಾಡಿ.