ಚಳಿಗಾಲದ ಸೂಪರ್​ ಫ್ರೂಟ್​! 
ಫೋಟೋ ಗ್ಯಾಲರಿ

ಈ ಒಂದು ಹಣ್ಣು ತಿಂದರೆ ಸಾಕು ಚಳಿಗಾಲದ ಆರೋಗ್ಯ ಸಮಸ್ಯೆಗಳು ಮಾಯ! Persimmon

ರಮೇಶ್​ ಕುಮಾರ್​​ ಬಿ ಎಡಮೋಳೆ

ಚಳಿಗಾಲದ ಸೂಪರ್​ ಫ್ರೂಟ್​!

ಚಳಿಗಾಲದಲ್ಲಿ ಪರ್ಸಿಮನ್ ಹಣ್ಣನ್ನು ಸೇವನೆ ಮಾಡಿದರೆ ಸಾಕಷ್ಟು ಉಪಯೋಗವಿದೆ. ಹೀಗಾಗಿ ಇದನ್ನು ಚಳಿಗಾಲದ ಸೂಪರ್​ ಫ್ರೂಟ್​ ಅಂತಾನೇ ಕರೆಯುತ್ತಾರೆ.

ಸೋಂಕುಗಳಿಂದ ರಕ್ಷಣೆ

ಪರ್ಸಿಮನ್‌ನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಇದು ಚಳಿಗಾಲದಲ್ಲಿ ಶೀತ ಮತ್ತು ಸೋಂಕುಗಳಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ.

ರಕ್ತದೊತ್ತಡ ನಿಯಂತ್ರಣ

ಈ ಹಣ್ಣಿನಲ್ಲಿ ಪೊಟ್ಯಾಸಿಯಂ ಅಧಿಕವಾಗಿದ್ದು, ಇದು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

ಕಣ್ಣಿನ ಆರೋಗ್ಯ

ವಿಟಮಿನ್ ಎ, ಜಿಯಾಕ್ಸಾಂಥಿನ್ ಮತ್ತು ಲುಟೀನ್ ಸಮೃದ್ಧವಾಗಿದೆ. ಈ ಮೂರು ಪೋಷಕಾಂಶಗಳು ಕಣ್ಣಿನ ಆರೋಗ್ಯವನ್ನು ರಕ್ಷಿಸುತ್ತವೆ. ವಯೋಸಹಜ ಮ್ಯಾಕ್ಯುಲರ್ ಡಿಜೆನರೇಶನ್ (AMD) ಮತ್ತು ಕ್ಯಾಟರಾಕ್ಟ್ ಅಪಾಯವನ್ನು ಕಡಿಮೆ ಮಾಡುತ್ತವೆ..

ಚರ್ಮದ ಸುಕ್ಕು ನಿವಾರಣೆ

ಪರ್ಸಿಮನ್​ ಹಣ್ಣಿನಲ್ಲಿರುವ ವಿಟಮಿನ್ ಎ, ಸಿ ಮತ್ತು ಇ ಚರ್ಮದ ಸುಕ್ಕುಗಳು ಮತ್ತು ಗುರುತುಗಳನ್ನು ಕಡಿಮೆ ಮಾಡಿ, ಚರ್ಮವನ್ನು ಸೊಗಸಾಗಿ ಕಾಣುವಂತೆ ಮಾಡುತ್ತದೆ.

ಮಲಬದ್ಧತೆ

ಈ ಹಣ್ಣಿನಲ್ಲಿರುವ ಹೆಚ್ಚಿನ ಫೈಬರ್ ಅಂಶವು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು ಸರಾಗವಾಗಿ ಕಾರ್ಯನಿರ್ವಹಿಸುವಂತೆ ಮಾಡುತ

ಕೊಲೆಸ್ಟ್ರಾಲ್ ಕಡಿಮೆ

ಪರ್ಸಿಮನ್ ಹಣ್ಣಿನಲ್ಲಿ ಹೇರಳವಾಗಿರುವ ಫೈಬರ್, ಪಾಲಿಫಿನಾಲ್‌ಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಕೆಟ್ಟ LDL ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ಒಳ್ಳೆಯ HDL ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಿ ಹೃದಯದ ಆರೋಗ್ಯ ಉತ್ತಮಗೊಳಿಸುತ್ತವೆ.

ಕ್ಯಾನ್ಸರ್ ಅಪಾಯ ತಗ್ಗಿಸುತ್ತದೆ

ಪರ್ಸಿಮನ್​ ಹಣ್ಣು ಸ್ವತಂತ್ರ ರಾಡಿಕಲ್‌ಗಳನ್ನು ನಾಶಪಡಿಸುತ್ತದೆ ಮತ್ತು ಕೆಲವು ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ತೂಕ ಇಳಿಕೆಗೆ ಸಹಕಾರಿ

ಪರ್ಸಿಮನ್ ಹಣ್ಣು ಕಡಿಮೆ ಕ್ಯಾಲೊರಿ, ಹೆಚ್ಚು ನಾರಿನಂಶ ಮತ್ತು ನೀರಿನಾಂಶದಿಂದ ತ್ವರಿತವಾಗಿ ಹೊಟ್ಟೆ ತುಂಬಿಸಿ, ಹಸಿವನ್ನು ನಿಯಂತ್ರಿಸಿ, ತೂಕ ಇಳಿಕೆಗೆ ಬಹಳ ಉಪಯುಕ್ತವಾಗಿದೆ.

ಗಮನಿಸಿ

ಪರ್ಸಿಮನ್​ ಹಣ್ಣನ್ನು ಸಂಪೂರ್ಣವಾಗಿ ಹಣ್ಣಾದ ನಂತರವೇ ತಿನ್ನಬೇಕು, ಇಲ್ಲದಿದ್ದರೆ ಅದು ಕಹಿ ರುಚಿಯನ್ನು ಹೊಂದಿರುತ್ತದೆ.