ಡ್ರ್ಯಾಗನ್ ಫ್ರೂಟ್ 
ಫೋಟೋ ಗ್ಯಾಲರಿ

ಈ 5 ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಡ್ರ್ಯಾಗನ್ ಫ್ರೂಟ್ ತಿನ್ನಬೇಡಿ | Dragon Fruit

ಮಣಿಕಂಠ ಪಾ ಹಿರೇಮಠ

ಡ್ರ್ಯಾಗನ್ ಫ್ರೂಟ್

ಡ್ರ್ಯಾಗನ್ ಫ್ರೂಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದಾದರೂ, ಕೆಲವು ಆರೋಗ್ಯ ಸಮಸ್ಯೆ ಇರುವವರು ಇದನ್ನು ತಿನ್ನಬಾರದು. ಮುಖ್ಯವಾಗಿ ಈ ಕೆಳಗಿನ 5 ಜನರು ಇದರಿಂದ ದೂರವಿರಬೇಕು.

ಮಧುಮೇಹಿಗಳು (Diabetes)

ಡ್ರ್ಯಾಗನ್ ಫ್ರೂಟ್‌ನಲ್ಲಿ ನೈಸರ್ಗಿಕ ಸಕ್ಕರೆಯಂಶ ಹೆಚ್ಚಿರುತ್ತದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ದಿಢೀರನೆ ಹೆಚ್ಚಾಗಬಹುದು.

ಅಲರ್ಜಿ ಸಮಸ್ಯೆ ಇರುವವರು

ಕೆಲವರಿಗೆ ಈ ಹಣ್ಣನ್ನು ತಿಂದಾಗ ಚರ್ಮದ ಮೇಲೆ ದದ್ದುಗಳು, ತುರಿಕೆ ಅಥವಾ ಮುಖ ಮತ್ತು ಜಿಹ್ವೆ ಊದಿಕೊಳ್ಳುವಂತಹ ಅಲರ್ಜಿ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಅಂತಹವರು ಇದನ್ನು ತಿನ್ನಬಾರದು.

ಅತಿಸಾರ ಇರುವವರು

ಇದರಲ್ಲಿ ಫೈಬರ್ (ನಾರಿನಂಶ) ಅಧಿಕವಾಗಿರುತ್ತದೆ. ಈಗಾಗಲೇ ಲೂಸ್ ಮೋಷನ್ ಅಥವಾ ಅತಿಸಾರದಿಂದ ಬಳಲುತ್ತಿರುವವರು ಇದನ್ನು ತಿಂದರೆ ಹೊಟ್ಟೆಯ ಸಮಸ್ಯೆ ಇನ್ನು ಹೆಚ್ಚಾಗಬಹುದು.

ಕಡಿಮೆ ರಕ್ತದೊತ್ತಡ (Low BP) ಹೊಂದಿರುವವರು

ಡ್ರ್ಯಾಗನ್ ಫ್ರೂಟ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ, ಈಗಾಗಲೇ ಲೋ ಬಿಪಿ ಸಮಸ್ಯೆ ಇದ್ದು, ಔಷಧಿ ತೆಗೆದುಕೊಳ್ಳುತ್ತಿರುವವರು ಇದನ್ನು ತಿಂದರೆ ರಕ್ತದೊತ್ತಡ ಇನ್ನು ಕಡಿಮೆಯಾಗುವ ಅಪಾಯವಿರುತ್ತದೆ.

ಕಿಡ್ನಿ ಸಮಸ್ಯೆ ಇರುವವರು

ಇದರಲ್ಲಿ ಪೊಟ್ಯಾಸಿಯಂ ಪ್ರಮಾಣ ಹೆಚ್ಚಾಗಿರುತ್ತದೆ. ಮೂತ್ರಪಿಂಡದ ಕಾಯಿಲೆ ಇರುವವರಿಗೆ ಅತಿಯಾದ ಪೊಟ್ಯಾಸಿಯಂ ಅನ್ನು ದೇಹದಿಂದ ಹೊರಹಾಕಲು ಸಾಧ್ಯವಾಗುವುದಿಲ್ಲ, ಇದು ಕಿಡ್ನಿಯ ಆರೋಗ್ಯವನ್ನು ಮತ್ತಷ್ಟು ಹದಗೆಡಿಸಬಹುದು.