ಪ್ರೊಟೀನ್ ವಿಷಯದಲ್ಲಿ ಮೊಟ್ಟೆಗಿಂತ…
ಪ್ರೊಟೀನ್ ವಿಷಯದಲ್ಲಿ ಮೊಟ್ಟೆಗಿಂತ…
ಬಾದಾಮಿ ಮತ್ತು ಗೋಡಂಬಿಯಂತಹ ದುಬಾರಿ ಡ್ರೈಫ್ರೂಟ್ಗಳಲ್ಲಿ ಕಂಡುಬರುವ ಎಲ್ಲಾ ಪೋಷಕಾಂಶಗಳನ್ನು ಇದೊಂದೇ ಒಳಗೊಂಡಿದೆ. ಪ್ರತಿದಿನ ಒಂದು ಹಿಡಿ ಅಥವಾ ಒಂದಿಷ್ಟು ಕಡಲೆಕಾಯಿ ತಿನ್ನೋದ್ರಿಂದ ನಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಗಳು ಲಭಿಸುತ್ತವೆ.ಬಡವರ ಬಾದಾಮಿ ಕಣ್ರೀ
ಹೃದಯ, ಮಿದುಳು, ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಡುವಲ್ಲಿ ಶೇಂಗಾ ಉತ್ತಮ. ಪ್ರತಿದಿನ ನಿಮ್ಮ ಆಹಾರದಲ್ಲಿ ಕಡಲೆಬೀಜಗಳನ್ನು ಸೇರಿಸುವುದರಿಂದ ನೀವು ದೀರ್ಘಕಾಲದವರೆಗೆ ಫಿಟ್ ಆಗಿ ಹಾಗೂ ಆ್ಯಕ್ಟಿವ್ ಆಗಿರಬಹುದು. ಪ್ರತಿದಿನ ಒಂದು ಹಿಡಿ ಕಡಲೆಕಾಯಿ ಅಥವಾ 25ರಿಂದ 30 ಗ್ರಾಂ ತಿನ್ನುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಗೋಡಂಬಿ, ಮೊಟ್ಟೆಗೆ ಪೈಫೋಟಿ
100 ಗ್ರಾಂ ಕಡಲೆಬೀಜದಲ್ಲಿ ಸುಮಾರು 25ರಿಂದ 26 ಗ್ರಾಂ ಪ್ರೋಟೀನ್ ಇರುತ್ತದೆ. ಇದು ಮೊಟ್ಟೆ ಮತ್ತು ಗೋಡಂಬಿಗಿಂತ ಅಧಿಕ ಎನ್ನಲಾಗಿದೆ. 100 ಗ್ರಾಂ ಮೊಟ್ಟೆಯಲ್ಲಿ ಸುಮಾರು 13 ಗ್ರಾಂ ಪ್ರೋಟೀನ್ ಇರುತ್ತದೆ. 100 ಗ್ರಾಂ ಗೋಡಂಬಿಯಲ್ಲಿ 18 ಗ್ರಾಂ ಪ್ರೋಟೀನ್ ಇರುತ್ತದೆ.ನಿಯಾಸಿನ್, ವಿಟಮಿನ್ ಬಿ 3 ಅಂಶ
ಮಿದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಇದು ನರಮಂಡಲವನ್ನು ಶಾಂತಗೊಳಿಸುತ್ತದೆ. ಆಲ್ಝೈಮರ್ನಂತಹ ಕಾಯಿಲೆಗಳನ್ನು ಸಹ ನಿಯಂತ್ರಿಸುತ್ತದೆ. ಕಡಲೆಬೀಜದಲ್ಲಿ ವಿಟಮಿನ್ ಇ ಮತ್ತು ಸತುವು ಚರ್ಮವನ್ನು ಕಾಂತಿಯುಕ್ತವಾಗಿ ಮಾಡುತ್ತದೆ. ಕೂದಲ ಆರೋಗ್ಯವನ್ನು ಕಾಪಾಡುತ್ತೆ ಹಾಗೂ ಬಲಪಡಿಸುತ್ತದೆ.