ಚಿನ್ನದಿಂದ ಇಷ್ಟೊಂದು ಲಾಭನಾ? 
ಫೋಟೋ ಗ್ಯಾಲರಿ

ಅಲಂಕಾರಕ್ಕೆ ಮಾತ್ರವಲ್ಲ... ಚಿನ್ನ ಧರಿಸುವುದರಿಂದ ಇಷ್ಟೆಲ್ಲ ಲಾಭವಿದೆ ಗೊತ್ತಾ? Gold

ರಮೇಶ್​ ಕುಮಾರ್​​ ಬಿ ಎಡಮೋಳೆ

ಚಿನ್ನದಿಂದ ಇಷ್ಟೊಂದು ಲಾಭನಾ?

ಭಾರತೀಯ ಮಹಿಳೆಯರ ಪ್ರಮುಖ ಆಸೆಗಳಲ್ಲಿ ಚಿನ್ನ ಕೂಡ ಒಂದು. ಏಕೆಂದರೆ, ಚಿನ್ನ ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಆಪತ್ಕಾಲದ ನೆಂಟ

ಮನೆಯಲ್ಲಿರುವ ಚಿನ್ನವು ಕೇವಲ ಮಹಿಳೆಯರ ಅಲಂಕಾರಕ್ಕೆ ಮಾತ್ರವಲ್ಲ, ಕಷ್ಟದ ಸಮಯಗಳಲ್ಲಿ ನಮ್ಮನ್ನು ಉಳಿಸುವ ಹೂಡಿಕೆಯೂ ಆಗಿದೆ.

ಸಂಪ್ರದಾಯ

ಚಿನ್ನವನ್ನು ಧರಿಸುವುದು ನಮ್ಮ ಭಾರತದ ವಿಶಿಷ್ಟ ಸಂಪ್ರದಾಯ ಆಗಿದೆ.

ಗೌರವದ ಸಂಕೇತ

ಚಿನ್ನವು ಸಮಾಜದಲ್ಲಿ ನಮ್ಮ ಸ್ಥಾನಮಾನ ಮತ್ತು ಗೌರವದ ಸಂಕೇತವಾಗಿದೆ.

ರಕ್ತ ಪರಿಚಲನೆ

ಚಿನ್ನವನ್ನು ಧರಿಸುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಎಂದು ಆಯುರ್ವೇದ ಹೇಳುತ್ತದೆ.

ಆರ್ಥಿಕ ಭದ್ರತೆ

ಚಿನ್ನವು ನಮಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಮನೆಯಲ್ಲಿ ಚಿನ್ನವಿದ್ದರೆ ಯಾವುದೇ ಬ್ಯಾಂಕ್​ಗೆ ಹೋದರು ಸುಲಭವಾಗಿ ಸಾಲ ಪಡೆಯಬಹುದು.

ಆತಂಕ ಕಡಿಮೆ

ಚಿನ್ನವು ನಮ್ಮ ಮನಸ್ಸಿನ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪಾಸಿಟಿವ್​ ಎನರ್ಜಿ

ಚಿನ್ನವು ಆಧ್ಯಾತ್ಮಿಕವಾಗಿ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಜನರು ನಂಬುತ್ತಾರೆ.

ಉಷ್ಣತೆ ನಿಯಂತ್ರಣ

ಚಿನ್ನವು ನಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಆಕರ್ಷಣೆ

ಚಿನ್ನವು ನಮ್ಮ ಸೌಂದರ್ಯ ಮತ್ತು ಆಕರ್ಷಣೆಯನ್ನು ಹೆಚ್ಚಿಸುತ್ತದೆ.

ಶುಭ ಸಂಕೇತ

ಸಾಂಸ್ಕೃತಿಕ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಚಿನ್ನವನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.