ಹಾಟ್ ಬ್ಯೂಟಿ ನಿವೇತಾ
ಟಾಲಿವುಡ್ ಜನಪ್ರಿಯ ನಾಯಕಿಯರಲ್ಲಿ ನಿವೇತಾ ಥಾಮಸ್ ಕೂಡ ಒಬ್ಬರು. ಗ್ಲಾಮರ್ನಿಂದ ದೂರವಿರುವ ಮತ್ತು ನಟನೆಗೆ ಹೆಚ್ಚು ಸ್ಕೋಪ್ ಇರುವ ಪಾತ್ರಗಳಿಗೆ ಆದ್ಯತೆ ನೀಡುತ್ತಾರೆ.ನಟನೆಯಿಂದಲೇ ಸದ್ದು ಮಾಡಿದ ನಟಿ
ನಿನ್ನು ಕೋರಿ, ಬ್ರೋಚೇವರೆವರೂರ, ಜೈ ಲವಕುಶ ಮತ್ತು ವಕೀಲ್ ಸಾಬ್ ಸಿನಿಮಾಗಳ ಮೂಲಕ ತೆಲುಗು ಜನರ ಹೃದಯದಲ್ಲಿ ಭದ್ರವಾದ ಸ್ಥಾನವನ್ನು ಗಳಿಸಿದ್ದಾರೆ. ತಮ್ಮ ನಟನೆಯಿಂದಲೇ ಚಿತ್ರಪ್ರೇಮಿಗಳ ನೆಚ್ಚಿನ ನಟಿ ಎನಿಸಿಕೊಂಡಿದ್ದಾರೆ.ಅಭಿಮಾನಿಗಳ ನೆಚ್ಚಿನ ಹಾಡು
ಅಂದಹಾಗೆ ನಿವೇತಾ ಥಾಮಸ್ ಅವರು ಚೆನ್ನೈ ಮೂಲದವರು. 2008ರಲ್ಲಿ ತೆರೆಕಂಡ ಮಲಯಾಳಂ ಚಿತ್ರ ಅಂಜನಾ ಸುಗುಣನ್ ಮೂಲಕ ಸಿನಿರಂಗಕ್ಕೆ ಪಾದರ್ಪಣೆ ಮಾಡಿದರು. ಇದಾದ ಬಳಿಕ ಅವರು ನಟ ಜೈ ನಟನೆಯ ನವೀನ ಸರಸ್ವತಿ ಸಬಥಮ್ ಚಿತ್ರದ ಮೂಲಕ ನಾಯಕಿಯಾಗಿ ತಮಿಳಿನಲ್ಲಿ ಪಾದರ್ಪಣೆ ಮಾಡಿದರು. ಈ ಚಿತ್ರದ "ವೈಟ್ ಅಂಡ್ ಲವ್" ಹಾಡು ಇನ್ನೂ ಅಭಿಮಾನಿಗಳ ಪ್ಲೇಲೀಸ್ಟ್ನಲ್ಲಿದೆ.ಸ್ಟಾರ್ ನಟರ ಜತೆ ನಟನೆ
ವಿಜಯ್ ಅವರ ಕುರುವಿ ಚಿತ್ರದಲ್ಲಿ ವಿಜಯ್ ಅವರ ತಂಗಿಯಾಗಿ ನಟಿಸಿದ್ದಾರೆ. ಅಲ್ಲದೆ, ಜಿಲ್ಲಾ ಸಿನಿಮಾದಲ್ಲೂ ವಿಜಯ್ಗೆ ತಂಗಿಯಾಗಿ ನಟಿಸಿ ಗಮನ ಸೆಳೆದರು. ಕಮಲ್ ಹಾಸನ್ ಅಭಿನಯದ ಪಾಪನಾಸಂ ಚಿತ್ರದಲ್ಲಿ ಕಮಲ್ ಮಗಳಾಗಿ ಮತ್ತು ರಜನಿಯ ಸೂಪರ್ ಹಿಟ್ ದರ್ಬಾರ್ ಸಿನಿಮಾದಲ್ಲಿ ರಜನಿ ಮಗಳಾಗಿ ನಟಿಸಿದ ನಂತರ ನಿವೇತಾ ಥಾಮಸ್ ತುಂಬಾ ಜನಪ್ರಿಯತೆ ಗಳಿಸಿದರು.ತೆಲುಗಿನಲ್ಲಿ ಬಿಜಿ
ಇದಾದ ಬಳಿಕ ಬಳಿಕ ತೆಲುಗಿನಲ್ಲಿ ಬಿಜಿಯಾದ ನಿವೇತಾ, ಜೆಂಟಲ್ಮ್ಯಾನ್, ಜೈ ಲವಕುಶ ಹಾಗೂ ವಕೀಲ್ ಸಾಬ್ ಸಿನಿಮಾ ಮೂಲಕ ಒಳ್ಳೆಯ ಖ್ಯಾತಿ ಗಳಿಸಿದರು. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಿವೇತಾ, ಆಗಾಗ ಕಲರ್ಫುಲ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.ಸಾಂಪ್ರದಾಯಿಕ ಉಡುಗೆಯಲ್ಲಿ ಹಾಟ್ನೆಸ್
ಇದೀಗ ನಟಿ ನಿವೇತಾ ಥಾಮಸ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ನಿವೇತಾ ಅವರ ಫೋಟೋವನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.ಕಡಿಮೆಯಾದ ಸಿನಿಮಾ ಅವಕಾಶ
ಸಿನಿಮಾ ವಿಚಾರಕ್ಕೆ ಬರುವುದಾದರೆ, ಸದ್ಯ ನಿವೇತಾ ಅವರ ಕೈಯಲ್ಲಿ ಯಾವುದೇ ಸಿನಿಮಾಗಳು ಇಲ್ಲ. ಕೊನೆಯದಾಗಿ 35 ಚಿನ್ನ ಕಥಾ ಕಾದು ಸಿನಿಮಾದಲ್ಲಿ ನಟಿಸಿದರು. ಆದರೂ, ಆಗಾಗ ನಿವೇತಾ ಹೆಸರು ಚಾಲ್ತಿಯಲ್ಲಿರುತ್ತದೆ. ಇದೀಗ, ಅವರ ಸಹೋದರ ನಿಖಿಲ್ ಥಾಮಸ್ ಬೆಂಗಳೂರು ಮಹಾನಗರಂಲೋ ಬಾಲಕಾ ಚಿತ್ರದ ಮೂಲಕ ನಾಯಕನಾಗಿ ಟಾಲಿವುಡ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.