ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಮಾಲೀಕಿ ಕಾವ್ಯಾ ಮಾರನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗ್ರೀಸ್ನಲ್ಲಿ ಅದ್ಧೂರಿಯಾಗಿ ಮದುವೆಯಾದ ಈ ಜೋಡಿ, ಈಗ ಚೆನ್ನೈನಲ್ಲಿ ನವೆಂಬರ್ 21 ರಂದು ಆರತಕ್ಷತೆ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಈದೀಗ ಆರತಕ್ಷತೆ ಪೂರ್ವದಲ್ಲಿ ಕಾವ್ಯಾ ಹಾಗೂ ಅನಿರುದ್ಧ್ ಫ್ಯಾಮಿಲಿ ಫೋಟೊಶೂಟ್ ನಡೆಸಿದ್ದು, ಇದರಲ್ಲಿ ತಮಿಳುನಾಡಿನ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್, ತಮಿಳು ಚಿತ್ರರಂಗದ ದಿಗ್ಗಜ ನಟ ರಜನಿಕಾಂತ್, ಕಾವ್ಯಾ ತಂದೆ ಕಲಾನಿಥಿ ಮಾರನ್ ಸೇರಿದಂತೆ ಹಲವರೊಂದಿಗಿನ ಫೋಟೊಗಳನ್ನು ಅನಿರುದ್ಧ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.