ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿಡುವುದು ಹೀಗೆ 
ಫೋಟೋ ಗ್ಯಾಲರಿ

ಫ್ರಿಡ್ಜ್‌ನಲ್ಲಿ ಮೊಟ್ಟೆ ಇಡುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ! Egg Storage Tips

ಭಾನುಪ್ರಿಯ ಡಿ.ಕೆ

ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿಡುವುದು ಹೀಗೆ

ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿ ಸರಿಯಾಗಿ ಸಂಗ್ರಹಿಸಿಡದಿದ್ದರೆ ಅವು ಬೇಗನೆ ಹಾಳಾಗುವ ಅಥವಾ ಬ್ಯಾಕ್ಟೀರಿಯಾಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಫ್ರಿಡ್ಜ್‌ನಲ್ಲಿ ಮೊಟ್ಟೆ ಇಡುವಾಗ ನೆನಪಿನಲ್ಲಿಡಬೇಕಾದ ಪ್ರಮುಖ ಸಲಹೆಗಳು ಇಲ್ಲಿವೆ.

ಡೋರ್ ರಾಕ್‌ನಲ್ಲಿ ಇಡಬೇಡಿ

ಫ್ರಿಡ್ಜ್ ಬಾಗಿಲಿನಲ್ಲಿರುವ ಮೊಟ್ಟೆಗಳ ಶೆಲ್ಫ್‌ನಲ್ಲಿ ಇಡುವ ಬದಲು, ಫ್ರಿಡ್ಜ್‌ನ ಒಳಗಿನ ಮೇಲ್ಭಾಗದ ಅಥವಾ ಮಧ್ಯದ ಶೆಲ್ಫ್‌ನಲ್ಲಿ ಇಡಿ. ಬಾಗಿಲು ಪದೇ ಪದೇ ತೆಗೆಯುವುದರಿಂದ ಉಂಟಾಗುವ ತಾಪಮಾನದ ಬದಲಾವಣೆ ತಪ್ಪುತ್ತದೆ.

ಮೂಲ ಕಾರ್ಟನ್‌ನಲ್ಲೇ ಇರಿಸಿ

ಅಂಗಡಿಯಿಂದ ತಂದ ಅಟ್ಟದ ಬಾಕ್ಸ್ ಒಳಗಡೆಯೇ ಇಡುವುದು ಒಳ್ಳೆಯದು. ಇದು ಫ್ರಿಡ್ಜ್‌ನ ಇತರ ಆಹಾರದ ವಾಸನೆ ಮೊಟ್ಟೆಗೆ ಹಿಡಿಯದಂತೆ ಹಾಗೂ ತೇವಾಂಶ ಆರದಂತೆ ಕಾಯುತ್ತದೆ.

ತೀಕ್ಷ್ಣ ತುದಿಯನ್ನು ಕೆಳಮುಖವಾಗಿಡಿ

ಮೊಟ್ಟೆಯ ಮೊನಚಾದ ತುದಿಯನ್ನು ಕೆಳಗೆ ಮಾಡಿ, ಅಗಲವಾದ ತುದಿಯನ್ನು ಮೇಲಕ್ಕೆ ಇಡಬೇಕು. ಇದರಿಂದ ಮೊಟ್ಟೆಯೊಳಗಿನ ಗಾಳಿಯ ಕೋಶ ಸರಿಯಾದ ಜಾಗದಲ್ಲಿದ್ದು, ಮೊಟ್ಟೆ ಹೆಚ್ಚು ದಿನ ತಾಜಾವಾಗಿರುತ್ತದೆ.

ತೊಳೆಯದೆ ಫ್ರಿಡ್ಜ್‌ನಲ್ಲಿಡಿ

ಮೊಟ್ಟೆಯನ್ನು ಬಳಸುವ ಮುನ್ನವೇ ತೊಳೆದು ಫ್ರಿಡ್ಜ್‌ನಲ್ಲಿ ಇಡಬೇಡಿ. ತೊಳೆಯುವುದರಿಂದ ಅದರ ಮೇಲಿರುವ ನೈಸರ್ಗಿಕ ರಕ್ಷಣಾ ಕವಚ ನಾಶವಾಗಿ ಬ್ಯಾಕ್ಟೀರಿಯಾಗಳು ಸುಲಭವಾಗಿ ಒಳಹೋಗಬಹುದು.

ಸ್ಥಿರ ತಾಪಮಾನ ಕಾಯ್ದುಕೊಳ್ಳಿ

ಫ್ರಿಡ್ಜ್‌ನ ತಾಪಮಾನ 4°C (40°F) ಗಿಂತ ಕಡಿಮೆಯಿರಲಿ. ಒಮ್ಮೆ ಫ್ರಿಡ್ಜ್‌ನಿಂದ ಹೊರತೆಗೆದ ಮೊಟ್ಟೆಯನ್ನು 2 ಗಂಟೆಗಿಂತ ಹೆಚ್ಚು ಕಾಲ ಹೊರಗೆ ಇಡಬೇಡಿ.