1. ವಾರ್​ 2 
ಫೋಟೋ ಗ್ಯಾಲರಿ

ಈ ವರ್ಷ ಬಾಕ್ಸ್​ ಆಫೀಸಿನಲ್ಲಿ ಮಕಾಡೆ ಮಲಗಿದ ಸಿನಿಮಾಗಳು | Flop Movies

ವಿಶ್ವಾಸ್​ ಎನ್​ ಜೋಳದಾಳು

1. ವಾರ್​ 2

ವಾರ್ 2 ಸಿನಿಮಾವು ಮೂಲತಃ ಹಿಂದಿ ಭಾಷೆಯಲ್ಲಿ ತೆರೆಕಂಡಿತ್ತು. ಇದನ್ನು ಪ್ಯಾನ್​ ಇಂಡಿಯಾ ಸಿನಿಮಾವಾಗಿ ನಿರ್ಮಿಸಲಾಗಿದ್ದು, ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್.ಟಿ.ಆರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಬಹು ದೊಡ್ಡ ಮೊತ್ತದ ಬಜೆಟ್​ನಲ್ಲಿ ನಿರ್ಮಾಣವಾದ ಈ ಸಿನಿಮಾ ಹಾಕಿದ ಬಂಡವಾಳವನ್ನು ಸಹ ಗಳಿಸಲು ಸಾಧ್ಯವಾಗಲಿಲ್ಲ.

2. ಗೇಮ್ ಚೆಂಜರ್

ಗೇಮ್ ಚೆಂಜರ್ ಇದು ಮೂಲತಃ ತೆಲಗು ಸಿನಿಮಾವಾಗಿದ್ದು, ಖ್ಯಾತನಟ ರಾಮ್​ಚರಣ್​ ನಾಯಕನಟನಾಗಿ ಅಭಿನಯಿಸಿದ್ದರು. 400-450 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾದ ಈ ಚಿತ್ರ 130-150 ಕೋಟಿ ಮಾತ್ರ ಗಳಿಸಿಲು ಸಾಧ್ಯವಾಯಿತು. ದೊಡ್ಡ ಮಟ್ಟದ ಹೈಪ್​ಹೊಂದಿದ್ದ ಈ ಸಿನಿಮಾದ ಕಥೆಯಲ್ಲಿ ಸ್ಪಷ್ಟತೆ ಕೊರತೆ ಇದ್ದ ಕಾರಣ ಈ ಸಿನಿಮಾ ಪ್ಲಾಪ್ ಪಟ್ಟಿಯನ್ನು ಸೇರಿದೆ.

3. ಥಗ್ ಲೈಫ್

ಥಗ್ ಲೈಫ್ ಇದು ಮೂಲತಃ ತಮಿಳು ಭಾಷೆಯಲ್ಲಿ ತೆರೆಕಂಡಿತು. ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಮತ್ತು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮನಿರತ್ನಂ ಕಾಂಭಿನೇಷನ್​ನಲ್ಲಿ ಮೂಡಿಬಂದ ಈ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಯಿತು.

4. ಸಿಕಂದರ್​

ಸಕಂದರ್ ಇದು ಮೂಲತಃ ಹಿಂದಿ ಭಾಷೆಯ ಸಿನಿಮಾವಾಗಿದ್ದು ಬಾಲಿವುಡ್​ನ ಸೂಪರ್ ಸ್ಟಾರ್​ ಸಲ್ಮಾನ್​ ಖಾನ್​ ನಾಯಕ ನಟರಾಗಿ ನಟಿಸಿದ್ದರು. ಇವರೊಟ್ಟಿಗೆ ರಶ್ಮಿಕಾ ಮಂದಣ್ಣ , ಕಾಜಲ್ ಅಗರವಾಲ್​ ಮತ್ತು ಸತ್ಯಜೀತ್ ಸಹ ತೆರೆಹಂಚಿಕೊಂಡಿದ್ದರು. ಆದರೆ ಈ ಸಿನಿಮಾದ ಕಥೆ ಪ್ರೇಕ್ಷಕರ ಮನವನ್ನು ಗೆಲ್ಲುವುದರಲ್ಲಿ ಸೋತಿತು.

5. ಭಾಗಿ 4

ಭಾಗಿ 4 ಇದು ಮೂಲತಃ ಹಿಂದಿ ಭಾಷೆಯ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಟೈಗರ್ ಶ್ರಾಫ್, ಸಂಜಯ್ ದತ್, ಸೌರವ್ ಸಚ್ಚದೇವಾ ಮೊದಲಾದ ದೊಡ್ಡ ತಾರಾಗಣವಿದ್ದರೂ ಸಹ ಕಥೆ, ಸ್ಕ್ರಿಪ್ಟ್ ಮತ್ತು ನಿರ್ದೇಶನ ಬಹಳ ಕಳಪೆಯಾಗಿದ್ದರಿಂದ ಎಷ್ಟೇ ದೊಡ್ಡ ತಾರಾಗಣವನ್ನು ಹೊಂದದ್ದರು ಸಹ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿತು.