ವಿಮಾನ ಹಾರಾಟಕ್ಕೆ ಒಪ್ಪಿಗೆ
ಭಾರತ ಮತ್ತು ಚೀನಾ 2025 ರ ಅಕ್ಟೋಬರ್ ಅಂತ್ಯದ ವೇಳೆಗೆ ನೇರ ಪ್ರಯಾಣಿಕ ವಿಮಾನಯಾನವನ್ನು ಪುನರಾರಂಭಿಸಲಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದು ದ್ವಿಪಕ್ಷೀಯ ಸಂಬಂಧಗಳಲ್ಲಿ ಸಾಮಾನ್ಯತೆಯನ್ನು ಪುನಃಸ್ಥಾಪಿಸುವತ್ತ ಮಹತ್ವದ ಹೆಜ್ಜೆಯಾಗಿದೆ.ಕೋವಿಡ್ ಬಳಿಕ ಸ್ಥಗಿತಗೊಂಡಿದ್ದ ನೇರ ವಿಮಾನ ಸೇವೆ
2020ರಲ್ಲಿ ಗಡಿ ಸಂಘರ್ಷ ಮತ್ತು ಕೋವಿಡ್ ಸಾಂಕ್ರಾಮಿಕದ ಬಳಿಕ ಸ್ಥಗಿತಗೊಂಡಿದ್ದ ನೇರ ವಿಮಾನ ಸೇವೆಗಳನ್ನು ಪುನರಾರಂಭಿಸುವುದು ಮತ್ತು ವಾಯು ಸೇವೆಗಳ ಒಪ್ಪಂದವನ್ನು ಪರಿಷ್ಕರಿಸುವ ಕುರಿತು ಈ ವರ್ಷದ ಆರಂಭದಿಂದ ಎರಡೂ ಕಡೆಯವರು ತಾಂತ್ರಿಕ ಮಟ್ಟದ ಚರ್ಚೆಗಳನ್ನು ನಡೆಸಲಾಗುತ್ತಿತ್ತು. ಹೀಗಾಗಿ ಆರಂಭದಿಂದಲೂ ನಡೆದ ಹಲವು ಸುತ್ತಿನ ತಾಂತ್ರಿಕ ಮಟ್ಟದ ಮಾತುಕತೆಗಳು ಯಶಸ್ವಿಯಾಗಸೇವೆ ಆರಂಭಿಸುತ್ತೇನೆಂದ ಇಂಡಿಗೋ
ಭಾರತ ಮತ್ತು ಚೀನಾ ಒಪ್ಪಂದಕ್ಕೆ ಬಂದಿವೆ ಎಂದು ವಿದೇಶಾಂಗ ಸಚಿವಾಲಯ ದೃಢಪಡಿಸುತ್ತಿದ್ದಂತೆ ಇಂಡಿಗೋ, ಭಾರತ ಮತ್ತು ಚೀನಾ ನಡುವೆ ನೇರ ವಿಮಾನಯಾನವನ್ನು ಪುನರಾರಂಭಿಸುವುದಾಗಿ ಘೋಷಿಸಿದೆ. 2025 ರ ಅಕ್ಟೋಬರ್ 26 ರಿಂದ ಕೋಲ್ಕತ್ತಾದಿಂದ ಗುವಾಂಗ್‌ಝೌ (CAN) ಗೆ ದೈನಂದಿನ ತಡೆರಹಿತ ವಿಮಾನಗಳನ್ನು ನೀಡುತ್ತದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.