ಮಲಯಾಳಿ ಬ್ಯೂಟಿ
ಮಲಯಾಳಂ ಬ್ಯೂಟಿ ಮಾಳವಿಕಾ ಮೋಹನನ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಚಿತ್ರರಂಗಕ್ಕೆ ಕಾಲಿಟ್ಟ ಕ್ಷಣದಿಂದ ಸತತವಾಗಿ ಎಲ್ಲ ಭಾಷೆಯಲ್ಲೂ ಸಿನಿಮಾಗಳನ್ನರಾಜಾ ಸಾಬ್ನಲ್ಲಿ ನಟನೆ
ಇತ್ತೀಚೆಗೆ ಪ್ರಭಾಸ್ ನಟನೆಯ ರಾಜಾ ಸಾಬ್ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಈ ಸಿನಿಮಾ ನಂತರ ಟಾಲಿವುಡ್ನಲ್ಲಿ ಮಾಳವಿಕಾ ಕ್ರೇಜ್ ಹೆಚ್ಚಾಗಿದ್ದು, ಸಾಕಷ್ಟು ತೆಲುಗು ಸಿನಿಮಾಗಳ ಆಫರ್ಗಳು ಹುಡುಕಿ ಬರುತ್ತಿವೆ.ಸರ್ದಾರ್ 2ನಲ್ಲಿ ಬಿಜಿ
ತಮಿಳಿನಲ್ಲಿ ಸರ್ದಾರ್ 2 ಸಿನಿಮಾದಲ್ಲಿ ಬಿಜಿಯಾಗಿರುವುದಾಗಿ ಹೇಳಿದ್ದಾರೆ. ಸಿನಿಮಾಗಳ ಮೂಲಕ ಸ್ಟಾರ್ ಇಮೇಜ್ ಗಳಿಸಲು ಪ್ರಯತ್ನಿಸುತ್ತಿದ್ದೇನೆ ಮತ್ತು ಸರಣಿ ಸಿನಿಮಾಗಳಲ್ಲಿ ಬಿಜಿಯಾಗಿದ್ದೇನೆ ಎನ್ನುತ್ತಾರೆ ಮಾಳವಿಕಾ.ಜಾಲತಾಣದಲ್ಲಿ ಫುಲ್ ಆ್ಯಕ್ಟೀವ್
ಅಂದಹಾಗೆ, ಮಾಳವಿಕಾ ಅವರು ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಅನ್ನೋದು ಎಲ್ಲರಿಗೂ ಗೊತ್ತಿದೆ. ಸದಾ ಒಂದಿಲ್ಲೊಂದು ಮಾದಕ ಫೋಟೋಗಳನ್ನು ಮಾಳವಿಕಾ ಹರಿಬಿಡುತ್ತಲೇ ಇರುತ್ತಾರೆ. ಹೀಗಾಗಿ, ತಮ್ಮ ಗ್ಲಾಮರಸ್ ಲುಕ್ನಿಂದಲೇ ಮಾಳವಿಕಾ ಹೆಸರು ಗಳಿಸಿದ್ದಾರೆ ಮತ್ತು ಬೇಡಿಕೆ ಸೃಷ್ಟಿಸಿಕೊಳ್ಳುತ್ತಿದ್ದಾರೆ..ಸ್ಟ್ರ್ಯಾಪ್‌ಲೆಸ್ ಬ್ಲ್ಯಾಕ್ ಲೇಟೆಕ್ಸ್
ಇತ್ತೀಚೆಗೆ ಮಾಳವಿಕಾ ಅವರು ಕಪ್ಪು ಬಣ್ಣದ ಸ್ಟ್ರ್ಯಾಪ್‌ಲೆಸ್ ಬ್ಲ್ಯಾಕ್ ಲೇಟೆಕ್ಸ್ ಉಡುಗೆಯಲ್ಲಿ ತುಂಬಾ ಮಾದಕವಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.ಲಕ್ಷಾಂತರ ಲೈಕ್ಸ್
ಐದು ದಿನಗಳ ಹಿಂದಷ್ಟೇ ಮಾಳವಿಕಾ ಅವರು ಹಂಚಿಕೊಂಡಿರುವ ಫೋಟೋಗಳಿಗೆ ಈವರೆಗೂ ಒಂದೂವರೆ ಲಕ್ಷಕ್ಕೂ ಅಧಿಕ ಲೈಕ್ಗಳು ಬಂದಿವೆ. ಅಲ್ಲದೆ, ಸಾವಿರಾರು ಮಂದಿ ಕಾಮೆಂಟ್ಗಳ ಸುರಿಮಳೆಗೈದಿದ್ದಾರೆ.ಪಡ್ಡೆ ಹುಡುಗರು ಫಿದಾ
ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮಾಳವಿಕಾರ ಹಾಟ್ ಅವತಾರಗಳನ್ನು ಕಂಡು ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಅಲ್ಲದೆ, ತರಹೇವಾರಿ ಕಾಮೆಂಟ್ಗಳು ಹರಿಬಿಡುತ್ತಿದ್ದಾರೆ.