ಬಾಲಿವುಡ್​ ಖ್ಯಾತ ನಟಿ 
ಫೋಟೋ ಗ್ಯಾಲರಿ

ಮಸ್ತು​ ಮಲೈಕಾ ನಿನ್ನ ನೋಡಿ ಎವರಿಬಡಿ ಸುಸ್ತು ಮಲೈಕಾ: ಬಾಲಿವುಡ್​ ಬ್ಯೂಟಿಯ ಮೈಮಾಟಕ್ಕೆ ಪಡ್ಡೆಹುಡುಗರು ಫಿದಾ! Malaika Arora

ರಮೇಶ್​ ಕುಮಾರ್​​ ಬಿ ಎಡಮೋಳೆ

ಬಾಲಿವುಡ್​ ಖ್ಯಾತ ನಟಿ

ಬಾಲಿವುಡ್​ ನಟಿ ಮಲೈಕಾ ಅರೋರಾ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಸಾಮಾಜಿಕ ಜಾಲತಾಣ ಬಳಸುವವರು ನಟಿ ಮಲೈಕಾ ಮೈಮಾಟಕ್ಕೆ ಫಿದಾ ಆಗಿರುವುದಂತೂ ಗ್ಯಾರಂಟಿ. 50ರ ವಯಸ್ಸಿನಲ್ಲೂ ತಮ್ಮ ಫಿಟ್​ನೆಸ್​, ಗ್ಲಾಮರ್​ ಹಾಗೂ ಡೇಟಿಂಗ್​ ವದಂತಿಗಳಿಂದಲೇ ಸುದ್ದಿಯಾಗುತ್ತಿರುತ್ತಾರೆ.

ಐಟಂ ಹಾಡುಗಳ ಮೂಲಕ ಜನಪ್ರಿಯ

ಮಲೈಕಾ, ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿ, ನರ್ತಕಿ ಮತ್ತು ಮಾಡೆಲ್. ವಿಶೇಷವಾಗಿ ಬಾಲಿವುಡ್ ಚಿತ್ರಗಳಲ್ಲಿನ ತಮ್ಮ ಅದ್ಭುತ ಐಟಂ ಹಾಡುಗಳ ಮೂಲಕ ಮನೆಮಾತಾಗಿದ್ದಾರೆ. 1973ರ ಅಕ್ಟೋಬರ್ 23ರಂದು ಜನಿಸಿದ ಮಲೈಕಾ, ಎಂಟಿವಿ ವಿಜೆ ಆಗಿ ವೃತ್ತಿಜೀವನ ಆರಂಭಿಸಿ, "ಛೈಯಾ ಛೈಯಾ" ಮತ್ತು "ಮುನ್ನಿ ಬದ್ನಾಮ್ ಹುಯಿ" ನಂತಹ ಐಟಂ ಸಾಂಗ್‌ಗಳಿಂದ ಬಾಲಿವುಡ್‌ನಲ್ಲಿ ಜನಪ್ರಿಯರಾದರು.

ಸ್ಟೈಲಿಶ್ ಜೀವನಶೈಲಿಗೆ ಹೆಸರುವಾಸಿ

ನಟನೆಯ ಜೊತೆಗೆ ಅನೇಕ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ತಮ್ಮ ವೃತ್ತಿಜೀವನದ ಹೊರತಾಗಿ, ಮಲೈಕಾ ಅವರು ತಮ್ಮ ಫಿಟ್ನೆಸ್ ಮತ್ತು ಸ್ಟೈಲಿಶ್ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ.

ಗ್ಲಾಮರ್ ಲೋಕದ ಗೊಂಬೆ

50ರ ಹರೆಯದಲ್ಲೂ ತಮ್ಮ ಯೌವನ ಮತ್ತು ಫಿಟ್ನೆಸ್ ಕಾಯ್ದುಕೊಂಡಿರುವ ಮಲೈಕಾ ಅವರು ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ. ಯೋಗ ಮತ್ತು ಆರೋಗ್ಯಕರ ಜೀವನಶೈಲಿ ಉತ್ತೇಜಿಸುವ ಮಲೈಕಾ, ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಫ್ಯಾಷನ್ ಸೆನ್ಸ್ ಮತ್ತು ವ್ಯಕ್ತಿತ್ವದಿಂದಾಗಿ ಇಂದಿಗೂ ಗ್ಲಾಮರ್ ಲೋಕದ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಮತ್ತೆ ಡೇಟಿಂಗ್​ ವದಂತಿ

ಅರ್ಬಾಜ್ ಖಾನ್ ಜತೆ 1998ರಲ್ಲಿ ವಿವಾಹವಾದರು. ದಂಪತಿಗೆ ಓರ್ವ ಮಗನಿದ್ದು, 2017ರಲ್ಲಿ ವಿಚ್ಛೇದನ ಪಡೆದರು. ಇತ್ತೀಚೆಗೆ ಅರ್ಜುನ್ ಕಪೂರ್ ಜೊತೆಗೂ ಬ್ರೇಕಪ್​ ಆಗಿದೆ. ಸದ್ಯ ಮಲೈಕಾ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ಫೋಟೋಗಳಲ್ಲಿ ತಮಗಿಂತ 17 ವರ್ಷ ಕಿರಿಯ ಉದ್ಯಮಿ ಹರ್ಷ್ ಮೆಹ್ತಾ ಜತೆ ಡೇಟಿಂಗ್ ಮಾಡುತ್ತಿದ್ದಾರೆಂಬ ವದಂತಿಗಳಿವೆ.

ಮಲೈಕಾ ಮಾದಕ ಫೋಟೋ

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿರುವ ಮಲೈಕಾ, ಆಗಾಗ ತಮ್ಮ ಬೋಲ್ಡ್​ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ತಮ್ಮ ಬೋಲ್ಡ್​ ಫೋಟೋಗಳ ಮೂಲಕವೇ ಸುದ್ದಿಯಲ್ಲಿದ್ದಾರೆ. ಎದೆಸೀಳು ಕಾಣುವಂತೆ ಕ್ರೀಮ್​ ಬಣ್ಣದ ಉಡುಗೆ ಧರಿಸಿ ಕ್ಯಾಮೆರಾ ಕಣ್ಣಿಗೆ ತುಂಬಾ ಬೋಲ್ಡ್​ ಆಗಿ ಪೋಸ್​ ನೀಡಿದ್ದಾರೆ.

ಕಾಮೆಂಟ್​ಗಳ ಸುರಿಮಳೆ

ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋಗೆ ಈವರೆಗೂ 1 ಲಕ್ಷಕ್ಕೂ ಅಧಿಕ ಲೈಕ್​ಗಳು ಬಂದಿವೆ. ಮಲೈಕಾ ಅವರ ಮೈಮಾಟ ನೋಡಿದ ಅಭಿಮಾನಿಗಳು 50ರ ವಯಸ್ಸಿನಲ್ಲೂ ಎಷ್ಟು ಚೆನ್ನಾಗಿ ಕಾಣತ್ತಿದ್ದಾರೆ ಮತ್ತು ಫಿಟ್​ನೆಸ್​ ಹೇಗೆ ಕಾಯ್ದುಕೊಂಡಿದ್ದಾರೆ ನೋಡಿ ಎಂದು ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ.