ತೂಕ ಹೆಚ್ಚಿಸಿಕೊಳ್ಳಿ
ಆರೋಗ್ಯಕರವಾಗಿ ಮತ್ತು ನೈಸರ್ಗಿಕವಾಗಿ ತೂಕ ಹೆಚ್ಚಿಸಿಕೊಳ್ಳಲು ಪೋಷಕಾಂಶ ಹಾಗೂ ಕ್ಯಾಲೊರಿ ಭರಿತ ಆಹಾರಗಳನ್ನು ಸೇವಿಸುವುದು ಅತ್ಯಗತ್ಯ. ನಿಮ್ಮ ತೂಕವನ್ನು ಹೆಚ್ಚಿಸಲು ಇಂದಿನಿಂದಲೇ ಈ ಆಹಾರಗಳನ್ನು ಅಳವಡಿಸಿಕೊಳ್ಳಿ.ಬಾಳೆಹಣ್ಣು ಮತ್ತು ಹಾಲು
ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ಸ್ ಮತ್ತು ಕ್ಯಾಲೊರಿಗಳು ಸಮೃದ್ಧವಾಗಿವೆ. ಪ್ರತಿದಿನ 2 ಬಾಳೆಹಣ್ಣುಗಳನ್ನು ಪೂರ್ಣ ಕೆನೆ ಭರಿತ ಹಾಲಿನೊಂದಿಗೆ ಅಥವಾ ಮಿಲ್ಕ್‌ಶೇಕ್ ರೂಪದಲ್ಲಿ ಸೇವಿಸುವುದರಿಂದ ದೇಹಕ್ಕೆ ತಕ್ಷಣದ ಶಕ್ತಿ ಸಿಗುತ್ತದೆ.ಒಣ ಹಣ್ಣುಗಳು ಮತ್ತು ಬೀಜಗಳು
ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಮತ್ತು ವಾಲ್‌ನಟ್ಸ್‌ಗಳಲ್ಲಿ ಆರೋಗ್ಯಕರ ಕೊಬ್ಬು ಹಾಗೂ ಪ್ರೊಟೀನ್ ಅಧಿಕವಾಗಿರುತ್ತದೆ. ಪ್ರತಿದಿನ ಒಂದು ಹಿಡಿಯಷ್ಟು ಒಣಹಣ್ಣುಗಳನ್ನು ಸ್ನ್ಯಾಕ್ಸ್ ರೂಪದಲ್ಲಿ ಅಥವಾ ರಾತ್ರಿ ನೆನೆಸಿಟ್ಟು ಬೆಳಗ್ಗೆ ಸೇವಿಸುವುದು ಉತ್ತಮ.ಶೇಂಗಾ ಬೀಜ ಮತ್ತು ಪೀನಟ್ ಬಟರ್
ಶೇಂಗಾ ಪ್ರೊಟೀನ್‌ನ ಅತ್ಯುತ್ತಮ ಮೂಲವಾಗಿದ್ದು, ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ದಿನವೂ ಹುರಿದ ಶೇಂಗಾ ತಿನ್ನುವುದರಿಂದ ಅಥವಾ ಬ್ರೆಡ್ ಜೊತೆ ಪೀನಟ್ ಬಟರ್ ಬಳಸಿ ತಿನ್ನುವುದರಿಂದ ದೇಹಕ್ಕೆ ಉತ್ತಮ ಕ್ಯಾಲೊರಿ ದೊರೆಯುತ್ತದೆ.ಆಲೂಗಡ್ಡೆ ಮತ್ತು ಗೆಣಸು
ಇವುಗಳಲ್ಲಿ ಪಿಷ್ಟ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಹೆಚ್ಚಾಗಿರುತ್ತವೆ. ಇವುಗಳನ್ನು ಬೇಯಿಸಿ ಊಟದ ಜೊತೆ ಸೇವಿಸುವುದರಿಂದ ದೇಹದಲ್ಲಿ ಗ್ಲೈಕೋಜನ್ ಸಂಗ್ರಹ ಹೆಚ್ಚಿ, ನೈಸರ್ಗಿಕವಾಗಿ ತೂಕ ಹೆಚ್ಚುತ್ತದೆ.ತುಪ್ಪ ಮತ್ತು ಬೆಣ್ಣೆ
ಸಾಂಪ್ರದಾಯಿಕವಾಗಿ ತೂಕ ಹೆಚ್ಚಿಸಲು ತುಪ್ಪ ರಾಮಬಾಣ. ಬಿಸಿ ಅನ್ನ, ಚಪಾತಿ ಅಥವಾ ದಾಲ್‌ಗೆ ಒಂದು ಚಮಚ ಶುದ್ಧ ಹಸುವಿನ ತುಪ್ಪವನ್ನು ಸೇರಿಸಿ ಉಣ್ಣುವುದರಿಂದ ಕ್ಯಾಲೊರಿ ಪ್ರಮಾಣ ಸುಲಭವಾಗಿ ಹೆಚ್ಚುತ್ತದೆ.