ಅತಿಯಾದರೆ ಅಮೃತವೂ ವಿಷ!
ಅತಿಯಾದರೆ ಅಮೃತವೂ ವಿಷ ಎಂಬ ಗಾದೆಯಂತೆ ಮಿತಿ ಮೀರಿದ ಆಹಾರ ಸೇವನೆ ನಮ್ಮ ದೇಹದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಇಂದಿನ ಧಾವಂತದ ಜೀವನದಲ್ಲಿ ರುಚಿಗೆ ಮಾರುಹೋಗಿ ಅತಿಯಾಗಿ ತಿನ್ನುವುದು (Overeating) ಅನೇಕ ಆರೋಗ್ಯ ಸಮಸ್ಯೆಗಳಿಗೆ ಮುನ್ನುಡಿ ಬರೆಯುತ್ತಿದೆ.ತೂಕ ಹೆಚ್ಚಾಗುತ್ತದೆ!
ಅಗತ್ಯಕ್ಕಿಂತ ಹೆಚ್ಚು ಕ್ಯಾಲೊರಿ ಸೇವಿಸುವುದರಿಂದ ದೇಹದಲ್ಲಿ ಕೊಬ್ಬು ಸಂಗ್ರಹವಾಗಿ ತೂಕ ಹೆಚ್ಚಾಗುತ್ತದೆ. ಇದು ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ನೇರ ಕಾರಣವಾಗುತ್ತದೆ.ಗ್ಯಾಸ್ಟ್ರಿಕ್, ಎದೆಯುರಿ, ಹೊಟ್ಟೆ ಉಬ್ಬರ !
ಅತಿಯಾಗಿ ತಿಂದಾಗ ಜೀರ್ಣಾಂಗವ್ಯೂಹದ ಮೇಲೆ ಒತ್ತಡ ಬೀಳುತ್ತದೆ. ಇದರಿಂದ ಗ್ಯಾಸ್ಟ್ರಿಕ್, ಎದೆಯುರಿ, ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.ರಾತ್ರಿ ವೇಳೆ ಅತಿಯಾಗಿ ತಿಂದರೆ ಸರಿಯಾಗಿ ನಿದ್ರೆ ಬರುವುದಿಲ್ಲ!
ಹೊಟ್ಟೆ ತುಂಬ ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಶಕ್ತಿ ವ್ಯಯವಾಗುತ್ತದೆ, ಇದರಿಂದ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗದೆ ಆಲಸ್ಯ ಆವರಿಸುತ್ತದೆ. ಅಲ್ಲದೆ, ರಾತ್ರಿ ವೇಳೆ ಅತಿಯಾಗಿ ತಿಂದರೆ ಸರಿಯಾಗಿ ನಿದ್ರೆ ಬರುವುದಿಲ್ಲ.ಸರಿಯಾದ ಕ್ರಮಗಳೇನು?
ಹಸಿವಾದಾಗ ಮಾತ್ರ ಆಹಾರ ಸೇವಿಸಿ.
ಆಹಾರವನ್ನು ನಿಧಾನವಾಗಿ, ಚೆನ್ನಾಗಿ ಅಗಿಯಿರಿ.
ಪ್ರತಿ ಬಾರಿ ಊಟ ಮಾಡುವಾಗ ಹೊಟ್ಟೆಯ 80% ರಷ್ಟು ಮಾತ್ರ ಭರ್ತಿಯಾಗಲಿ.
ಹೆಚ್ಚು ನೀರು ಕುಡಿಯಿರಿ ಮತ್ತು ನಾರಿನಂಶವಿರುವ ಆಹಾರಕ್ಕೆ ಆದ್ಯತೆ ನೀಡಿ.