01. ನವದೆಹಲಿ (2025) 
ಫೋಟೋ ಗ್ಯಾಲರಿ

ಲಕ್ಸುರಿ ಕಾರುಗಳ ಅತಿ ವೇಗಕ್ಕೆ ಅನೇಕರು ಬಲಿ! ಇಲ್ಲಿದೆ ಪ್ರಮುಖ ಅಪಘಾತಗಳ ಪಟ್ಟಿ

ಮೋಹನ್​ ಶೆಟ್ಟಿ

01. ನವದೆಹಲಿ (2025)

ಜು.09ರಂದು ದೆಹಲಿಯ ಶಿವಕ್ಯಾಂಪ್​ನಲ್ಲಿ ಐವರು ಪಾದಚಾರಿಗಳ ಮೇಲೆ ಕುಡಿದು ಆಡಿ ಕಾರನ್ನು ಚಲಾಯಿಸಿದ ಚಾಲಕ, ದಂಪತಿ ಮತ್ತು 8 ವರ್ಷದ ಬಾಲಕಿ ಮೇಲೂ ವಾಹನ ಹರಿಸಿದ್ದ.

02. ನೋಯ್ಡಾ, ಉತ್ತರ ಪ್ರದೇಶ (2025)

ಮಾ.30ರಂದು ನೋಯ್ಡಾ ಸೆಕ್ಟರ್​ 94ರಲ್ಲಿ ಫುಟ್​ಪಾತ್​ ಮೇಲೆ ನಡೆದುಕೊಂಡ ಹೋಗ್ತಿದ್ದ ಇಬ್ಬರು ಕಾರ್ಮಿಕರಿಗೆ ಕೆಂಪು ಬಣ್ಣದ ಲ್ಯಾಂಬೋರ್ಗಿನಿ ಗುದ್ದಿತು.

03. ಪುಣೆ, ಮಹಾರಾಷ್ಟ್ರ (2024)

ಕಲ್ಯಾಣಿ ನಗರದಲ್ಲಿ ಅಪ್ರಾಪ್ತ ಬಾಲಕನೊಬ್ಬ, ಕುಡಿದ ಮತ್ತಿನಲ್ಲಿ ವೇಗವಾಗಿ ಪೋರ್ಷೆ ಕಾರು ಚಲಾಯಿಸಿದ್ದೇ, ಬೈಕ್​ಗೆ ಡಿಕ್ಕಿ ಹೊಡೆದ. ಅಪರಘಾತದ ಪರಿಣಾಮ ಇಬ್ಬರು ಐಟಿ ದಂಪತಿ ಸ್ಥಳದಲ್ಲೇ ಮೃತಪಟ್ಟರು.

04. ನೋಯ್ಡಾ, ಉತ್ತರ ಪ್ರದೇಶ (2024)

ಮೇ 16ರಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ನೋಯ್ಡಾದಲ್ಲಿ ವೇಗವಾಗಿ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದರು ಮತ್ತು ಮೂವರು ಗಂಭೀರವಾಗಿ ಗಾಯಗೊಂಡರು.

05. ನೋಯ್ಡಾ, ಉತ್ತರ ಪ್ರದೇಶ (2024)

ಜನವರಿ 14ರ ಮುಂಜಾನೆ ಸೆಕ್ಟರ್ 53ರ ಬಳಿ ಯುವಕನೊಬ್ಬ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರು ಪಾದಚಾರಿಗಳ ಮೇಲೆ ಹರಿದ ಪರಿಣಾಮ ರಸ್ತೆ ದಾಟುತ್ತಿದ್ದ ಜನಕ್ ದೇವ್ ಶಾ ಎಂಬಾತ ಸ್ಥಳದಲ್ಲೇ ಮೃತಪಟ್ಟ. ಇನ್ನೊಬ್ಬ ಗಂಭಿರವಾಗಿ ಗಾಯಗೊಂಡ.

06. ಅಹಮದಾಬಾದ್, ಗುಜರಾತ್ (2023)

ಜುಲೈ 20ರ ಮುಂಜಾನೆ ಇಸ್ಕಾನ್ ಸೇತುವೆಯ ಮೇಲೆ ಉದ್ಯಮಿಯ ಮಗ ಚಲಾಯಿಸುತ್ತಿದ್ದ ಜಾಗ್ವಾರ್ ಕಾರು ಜನರ ಗುಂಪಿನ ಮೇಲೆ ಹರಿದ ಪರಿಣಾಮ 9 ಮಂದಿ ದುರಂತ ಅಂತ್ಯ ಕಂಡರು. ಈ ಅಪಘಾತದಲ್ಲಿ ಹಲವರು ಗಾಯಗೊಂಡರು. ಚಾಲಕನನ್ನು ಬಂಧಿಸಿದ ಪೊಲೀಸರು, ಹಲವು ಕ್ರಿಮಿನಲ್ ಆರೋಪಗಳ ಅಡಿಯಲ್ಲಿ ಕೇಸ್​ ದಾಖಲಿಸಿದರು.

07. ನುಹ್, ಹರಿಯಾಣ (2023)

ಆಗಸ್ಟ್ 22ರಂದು ಉಮ್ರಿ ಗ್ರಾಮದ ಬಳಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು, ವೇಗವಾಗಿ ಬಂದ ಹಿನ್ನೆಲೆ ಟ್ಯಾಂಕರ್‌ಗೆ ಡಿಕ್ಕಿ ಹೊಡೆಯಿತು. ಈ ಅಪಘಾತದಲ್ಲಿ ಟ್ಯಾಂಕರ್ ಚಾಲಕ ಮತ್ತು ಕ್ಲೀನರ್​ ಸಾವನ್ನಪ್ಪಿದರು.

08. ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ, ಉತ್ತರ ಪ್ರದೇಶ (2022)

ಅ.14ರಂದು, ಎಕ್ಸ್‌ಪ್ರೆಸ್‌ವೇಯಲ್ಲಿ 230 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಚಲಿಸುತ್ತಿದ್ದ ಬಿಎಂಡಬ್ಲ್ಯೂ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದು ಸಂಪೂರ್ಣವಾಗಿ ನಜ್ಜುಗುಜ್ಜಾಯಿತು. ಐಷಾರಾಮಿ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು ಭೀಕರ ದುರಂತಕ್ಕೆ ಸಾಕ್ಷಿಯಾಯಿತು.

09. ಪಾಲ್ಘರ್, ಮಹಾರಾಷ್ಟ್ರ (2022)

ನವೆಂಬರ್ 2022ರಲ್ಲಿ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಮತ್ತು ಅವರ ಸ್ನೇಹಿತ ಜಹಾಂಗೀರ್ ಪಂಡೋಲೆ ತಮ್ಮ ಮರ್ಸಿಡಿಸ್-ಬೆನ್ಜ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚರೋಟಿ ಬಳಿಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಭಾರೀ ಅಪಘಾತಕ್ಕೀಡಾಯಿತು.

10. ಬೆಂಗಳೂರು, ಕರ್ನಾಟಕ (2021)

ಆಗಸ್ಟ್ 31ರ ಮುಂಜಾನೆ ಬೆಂಗಳೂರಿನಲ್ಲಿ ವೇಗವಾಗಿ ಬಂದ ಆಡಿ ಕ್ಯೂ3 ಕಾರು ರಸ್ತೆ ಬದಿಯ ಕಂಬಕ್ಕೆ ಡಿಕ್ಕಿ ಹೊಡೆದು, ಫುಟ್​ಪಾತ್​ ದಾಟಿ ಕಟ್ಟಡವೊಂದರ ಗೋಡೆಗೆ ರಭಸವಾಗಿ ಡಿಕ್ಕಿಯಾಯಿತು. ಇದರ ಪರಿಣಾಮ ಘಟನೆಯಲ್ಲಿ ಮೂವರು ಮಹಿಳೆಯರು ಮತ್ತು ಹೊಸೂರಿನ ಡಿಎಂಕೆ ಶಾಸಕರ ಮಗ ಮತ್ತು ಸೊಸೆ ಸೇರಿ ಒಟ್ಟು ಏಳು ಮಂದಿ ದಾರುಣ ಅಂತ್ಯ ಕಂಡರು.

11. ಹೊಸಪೇಟೆ, ಕರ್ನಾಟಕ (2020)

ಫೆಬ್ರವರಿ 10ರಂದು, ಹೊಸಪೇಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗವಾಗಿ ಬಂದ ಮರ್ಸಿಡಿಸ್ ಬೆನ್ಜ್ ಕಾರು, ಟೀ ಅಂಗಡಿಗೆ ಡಿಕ್ಕಿ ಹೊಡೆದಿದ್ದಲ್ಲದೇ, ಯುವಕನನ್ನು ಒಂದಷ್ಟು ದೂರ ಎಳೆದೊಯ್ದ ಕಾರಣ, ಆತ ಸ್ಥಳದಲ್ಲೇ ಸಾವನ್ನಪ್ಪಿದ. ಈ ಅಪಘಾತದಲ್ಲಿ ಐಷಾರಾಮಿ ಕಾರಿನಲ್ಲಿದ್ದ ಓರ್ವ ಪ್ರಯಾಣಿಕ ಕೂಡ ಮೃತಪಟ್ಟ.