ಮೇಲೇಳುವಾಗ ದೇಹದಲ್ಲಾಗುವ ಬದಲಾವಣೆಗಳು
ಮೇಲೇಳುವಾಗ ದೇಹದಲ್ಲಾಗುವ ಬದಲಾವಣೆಗಳು
ನಾವೆಲ್ಲರೂ ರಾತ್ರಿ ಮಲಗಿಕೊಂಡು ಬೆಳಗ್ಗೆ ಮೇಲೆಳುವಾಗ ದೇಹದಲ್ಲಿ ಕೆಲ ಬದಲಾವಣೆಗಳಾಗುವುದನ್ನು ಗಮನಿಸಿರುತ್ತೇವೆ. ಬೆಳಗ್ಗೆ ಎದ್ದಾಗ ಕಾಣಿಸುವ ಕೆಲವು ಲಕ್ಷಣಗಳು ಗಂಭೀರ ಕಾಯಿಲೆಯ ಮುನ್ಸೂಚನೆಯಾಗಿವೆ ಎಂದು ಹೇಳಲಾಗಿದೆ. ತೀವ್ರವಾದ ತಲೆನೋವು, ಎದೆನೋವು, ಉಸಿರಾಟದ ತೊಂದರೆ, ಒಂದು ಬದಿಯ ದೌರ್ಬಲ್ಯ, ಗೊಂದಲ, ಹೃದಯಾಘಾತ, ಸ್ಟ್ರೋಕ್ನಂತಹ ಸಮಸ್ಯೆಯಾಗಿರಬಹುದು.ಗಂಭೀರ ಕಾಯಿಲೆಯ ಲಕ್ಷಣಗಳು
ತೀವ್ರ ಎದೆನೋವು ಅಥವಾ ಒತ್ತಡ, ದಿಢೀರ್ ತಲೆನೋವು ಅಥವಾ ಗೊಂದಲ
ಉಸಿರಾಟದ ತೊಂದರೆ ಒಂದು ಬದಿಯ ದೌರ್ಬಲ್ಯ ಅಥವಾ ಮರಗಟ್ಟುವಿಕೆ
ತೀವ್ರ ಜ್ವರ ಅಥವಾ ಶೀತ ದಿಢೀರ್ ದೃಷ್ಟಿ ಸಮಸ್ಯೆ ಗಂಭೀರ ಕಾಯಿಲೆಯ ಲಕ್ಷಣವಾಗಿದೆ.ಗಂಭೀರ ಲಕ್ಷಣಗಳಿಗೆ ಸಲಹೆ
ಎದೆನೋವು, ಉಸಿರಾಟದ ತೊಂದರೆ, ದಿಢೀರ್ ತಲೆನೋವು, ಒಂದು ಬದಿಯ ದೌರ್ಬಲ್ಯ, ಅಥವಾ ಗೊಂದಲದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ 108 ಗೆ ಕರೆ ಮಾಡಿ ಅಥವಾ ಸಮೀಪದ ಆಸ್ಪತ್ರೆಗೆ ತೆರಳಿ. ರಕ್ತದೊತ್ತಡ, ಕೊಲೆಸ್ಟ್ರಾಲ್, ಮತ್ತು ಸಕ್ಕರೆಯಂತಹ ಮೂಲಭೂತ ತಪಾಸಣೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳಿ.