ಕೃತಿ ಕನ್ನಡಿಗರಿಗೂ ಪರಿಚಯ
ಕೃತಿ ಕರಬಂಧ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ದಿವಂಗತ ಚಿರಂಜೀವಿ ಸರ್ಜಾ, ನಟ ಯಶ್, ಉಪೇಂದ್ರ, ಲವ್ಲಿ ಸ್ಟಾರ್ ಪ್ರೇಮ್ ಹಾಗೂ ದುನಿಯಾ ವಿಜಯ್ ಸೇರಿದಂತೆ ಸ್ಟಾರ್ ಹೀರೋಗಳ ಜತೆ ನಟಿಸಿದ್ದಾರೆ.ಗ್ಲಾಮರ್ನಿಂದ ಮೋಡಿ
ಕೃತಿ ತಮ್ಮ ಗ್ಲಾಮರ್‌ನಿಂದಲೇ ಪ್ರೇಕ್ಷಕರನ್ನು ಮೆಚ್ಚಿಸಿದರು. ಗ್ಲಾಮರ್ ಮಾತ್ರವಲ್ಲದೆ, ನಟನೆಯಿಂದಲೂ ಮೋಡಿ ಮಾಡಿದರು. ಗೂಗ್ಲಿ ಚಿತ್ರದಲ್ಲಿ ಅವರ ನಟನೆ ಎಲ್ಲರ ಗಮನ ಸೆಳೆಯಿತು.ಅವಕಾಶಗಳ ಕೊರತೆ
ಸ್ಯಾಂಡಲ್ವುಡ್ನಲ್ಲಿ ಅವಕಾಶಗಳ ಕೊರತೆಯಿಂದಾಗಿ, ಕೃತಿ ಅವರು ಬಾಲಿವುಡ್‌ಗೆ ಜಂಪ್ ಆದರು. ಬಾಲಿವುಡ್‌ನಲ್ಲಿ ಸರಣಿ ಚಿತ್ರಗಳಲ್ಲಿ ನಟಿಸಿದರು. ಆದರೆ, ಯಾವುದು ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ.ಕಳೆದ ವರ್ಷ ಮದುವೆ
ಕಳೆದ ವರ್ಷ ನಟ ಪುಲ್ಕಿತ್ ಸಾಮ್ರಾಟ್ ಅವರನ್ನು ಮದುವೆಯಾದರು. ಇದು ಲವ್ ಮ್ಯಾರೇಜ್. ಇದಾದ ನಂತರ, ಕೃತಿ ಅವರು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಇದೀಗ ಕುಟುಂಬ ಜೀವನದಲ್ಲಿ ಕೃತಿ ನಿರತರಾಗಿದ್ದಾರೆ.ಹಾಟ್ ಫೋಟೋ
ಇನ್ನು ಸಿನಿಮಾಗಳ ಹೊರತಾಗಿ, ಕೃತಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ಹಾಗಾಗ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ತಮ್ಮ ಇತ್ತೀಚಿನ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸಿದ್ದಾರೆ.ಬ್ಯಾಕ್ ಲೆಸ್ ಕೃತಿ
ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಚಿನ್ನದ ಬಣ್ಣದ ಉದ್ದನೆಯ ಉಡುಪಿನಲ್ಲಿ ಬ್ಯಾಕ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಮದುವೆಯಾದರೂ ಇನ್ನೂ ತಮ್ಮ ಫಿಟ್ನೆಸ್ ಕಾಯ್ದುಕೊಂಡಿದ್ದು, ಕೃತಿಯ ಮೈಮಾಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.