ಬಿಸಿನೀರು + ಜೇನುತುಪ್ಪ
ಬೆಳಿಗ್ಗೆ ಎದ್ದ ತಕ್ಷಣ ಉಗುರುಬೆಚ್ಚಗಿನ ನೀರಿಗೆ ಜೇನುತುಪ್ಪ ಸೇರಿಸಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಷ್ಟು ನಿಜವೋ, ಅದನ್ನು ತಪ್ಪು ತಪ್ಪಾಗಿ ಅಥವಾ ಅತಿಯಾಗಿ ಸೇವಿಸಿದರೆ ಅಷ್ಟೇ ಅಡ್ಡಪರಿಣಾಮಗಳಿವೆ ಎಂಬುದು ಕೂಡ ಅಷ್ಟೇ ನಿಜ.ದೇಹದಲ್ಲಿ ವಿಷಕಾರಿ ಅಂಶ ಉತ್ಪತ್ತಿ
ಕುದಿಯುವ ನೀರಿನೊಂದಿಗೆ ಜೇನುತುಪ್ಪವನ್ನು ಸೇರಿಸಿದಾಗ ಅದರ ರಾಸಾಯನಿಕ ಸಂರಚನೆ ಬದಲಾಗುತ್ತದೆ. ಇದು ದೇಹದಲ್ಲಿ ಸುಲಭವಾಗಿ ಜೀರ್ಣವಾಗದ ವಿಷಕಾರಿ ಅಂಶವನ್ನು ಉತ್ಪತ್ತಿ ಮಾಡುತ್ತದೆ. ಇದು ಆರೋಗ್ಯಕ್ಕೆ ಹಾನಿಕರ. ನೀರು ಕೇವಲ ಉಗುರುಬೆಚ್ಚಗಿರಬೇಕು.ರಕ್ತದಲ್ಲಿ ಸಕ್ಕರೆ ಮಟ್ಟದ ಏರಿಕೆ
ಜೇನುತುಪ್ಪದಲ್ಲಿ ಫ್ರಕ್ಟೋಸ್ ಮತ್ತು ಸುಕ್ರೋಸ್ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ತೂಕ ಇಳಿಸಿಕೊಳ್ಳುವ ಆತುರದಲ್ಲಿ ದಿನಕ್ಕೆ ಮೂರ್ನಾಲ್ಕು ಬಾರಿ ಅಥವಾ ಅತಿಯಾದ ಪ್ರಮಾಣದಲ್ಲಿ ಜೇನುತುಪ್ಪದ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗಬಹುದು.ಜೀರ್ಣಕ್ರಿಯೆಯ ತೊಂದರೆ
ಜೇನುತುಪ್ಪದಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಮತ್ತು ಫ್ರಕ್ಟೋಸ್ ಅಂಶವನ್ನು ಎಲ್ಲರ ಜೀರ್ಣಾಂಗವ್ಯೂಹವೂ ಸುಲಭವಾಗಿ ಸ್ವೀಕರಿಸುವುದಿಲ್ಲ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪದ ನೀರು ಕುಡಿಯುವುದರಿಂದ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಹೊಟ್ಟೆ ನೋವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು.ದೇಹದ ತೂಕ ಹೆಚ್ಚಾಗುವುದು
ಜೇನುತುಪ್ಪದಲ್ಲಿ ಕ್ಯಾಲೊರಿಗಳು ಅಧಿಕವಾಗಿರುತ್ತವೆ. ನೀವು ದಿನವಿಡೀ ಸೇವಿಸುವ ಕ್ಯಾಲೊರಿಗಳ ಪ್ರಮಾಣವನ್ನು ಗಮನಿಸದೆ, ಕೇವಲ ಜೇನುತುಪ್ಪ ಆರೋಗ್ಯಕ್ಕೆ ಒಳ್ಳೆಯದು ಎಂದು ಅತಿಯಾಗಿ ಬಳಸುತ್ತಾ ಹೋದರೆ ಅದು ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಶೇಖರಣೆಯಾಗಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ.ಹಲ್ಲುಗಳ ಸವೆತ ಮತ್ತು ದಂತ ಕ್ಷಯ
ಜೇನುತುಪ್ಪವು ಅಂಟಂಟಾದ ಸ್ವಭಾವವನ್ನು ಹೊಂದಿದೆ. ಬೆಳಿಗ್ಗೆ ಜೇನುತುಪ್ಪದ ನೀರನ್ನು ಕುಡಿದ ನಂತರ ಬಾಯಿಯನ್ನು ಸ್ವಚ್ಛವಾಗಿ ಮುಕ್ಕಳಿಸದಿದ್ದರೆ, ಆ ಸಿಹಿಯಾದ ಅಂಶ ಹಲ್ಲುಗಳ ನಡುವೆ ಉಳಿದುಕೊಳ್ಳುತ್ತದೆ. ಇದು ಬಾಯಿಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ.