ಎಲ್ಲವೂ ಸ್ಮಾರ್ಟ್
ಡಿಜಿಲಟ್ ಯುಗದಲ್ಲಿ ಈಗ ಎಲ್ಲವೂ ಸ್ಮಾರ್ಟ್ ಅಂಡ್ ಸೆಕ್ಯೂರ್. ಅದರಲ್ಲೂ, ಸ್ಮಾರ್ಟ್‌ಫೋನ್‌ಗಳ ಬಳಕೆಯಂತು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ (Battery Charging). ಜಾಗತಿಕವಾಗಿ ಆರು ಇಂಚಿನ ವಿಶಿಷ್ಟ ಡಿಸೈನ್ನೊಳಗೊಂಡ ದುಬಾರಿ ಮೊಬೈಲ್ಗಳ ಮಾರಾಟ ಕೂಡ ದುಪ್ಪಟ್ಟಾಗಿವೆ.ಜೀವನದ ಅವಿಭಾಜ್ಯ ಅಂಗ
ಖರೀದಿಸಲು ಜನರು ನಾ ಮುಂದು ತಾ ಮುಂದು ಎಂದು ಮಾರುಕಟ್ಟೆಗಳಲ್ಲಿ ಮುಗಿಬೀಳುತ್ತಿದ್ದಾರೆ. ಇದೊಂದು ರೀತಿ ದುರಂತವೇ ಸರಿ. ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಸ್ಮಾರ್ಟ್‌ಫೋನ್ ಬಳಸುವ ಜನರು ಏಕೆ ಇನ್ನೂ ಸ್ಮಾರ್ಟ್ ಆಗಿಲ್ಲ ಅನ್ನೋದೇ ಬೇಸರದ ಸಂಗತಿ.ಫೋನ್ ಬೇಕೇ ಬೇಕು
ತಿಂಡಿ-ಊಟ ಮಾಡ್ತೇವೋ ಇಲ್ಲವೋ! ಆದ್ರೆ, ಕೈಯಲ್ಲಿ ಆರು ಇಂಚಿನ ಸ್ಮಾರ್ಟ್‌ಫೋನ್ ಸದಾ ಇರಲೇಬೇಕು ಎಂಬ ಮನಸ್ಥಿತಿ ಜನರಲ್ಲಿ ಮೂಡಿಬಿಟ್ಟಿದೆ. ಬೆಳಗ್ಗೆ ಎಚ್ಚರಗೊಂಡ ಕ್ಷಣದಿಂದ ರಾತ್ರಿ ನಿದ್ರೆಗೆ ಜಾರುವವರೆಗೂ ಈ ಫೋನ್ ಬೇಕೇ ಬೇಕು. ಆ ಮಟ್ಟಿಗಿನ ಅಡಿಕ್ಷನ್ ಜನರಲ್ಲಿದೆ. ತಮ್ಮ ಬಹುಪಾಲು ಸಮಯವನ್ನು ಫೋನ್ ಜತೆ ಕಳೆಯುವ ಮಂದಿ, ಬ್ಯಾಟರಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆದೀರ್ಘಕಾಲ ಬಾಳಿಕೆ
ಕಾರಣ, ರಾತ್ರಿಯೆಲ್ಲ ಫುಲ್ ಚಾರ್ಚ್ ಮಾಡಿದ್ರೂ ಸಂಜೆ ಆಗುವುದರೊಳಗೆ ಚಾರ್ಚ್ ಖಾಲಿ ಆಗಿರುತ್ತದೆ ಎಂದು ಹಲವರು ಬೇಸರ ವ್ಯಕ್ತಪಡಿಸುತ್ತಾರೆ. ಇದರಿಂದ ಬೇಸತ್ತು, ಹೊಸ ಮೊಬೈಲ್ಗಳ ಮೊರೆ ಹೋಗುವ ಬಳಕೆದಾರರು, ಪ್ರತಿದಿನ ಮಾಡುವ ಮಿಸ್ಟೇಕ್ ಅನ್ನು ಸರಿಪಡಿಸಿಕೊಂಡರೆ, ಬ್ಯಾಟರಿ ದೀರ್ಘಕಾಲ ಬಾಳಿಕೆ ಬರುತ್ತದೆ.ಡಬ್ಬಾ ಫೋನ್
ರಾತ್ರಿಯಿಡೀ ಫೋನ್ ಅನ್ನು ಚಾರ್ಚ್ಗೆ ಹಾಕುವುದರಿಂದ ನಿಮಗೆ ಅಪಾಯ ಕಟ್ಟಿಟ್ಟಬುತ್ತಿ. ಫುಲ್ ಚಾರ್ಚ್ ಮಾಡಿದ್ರೂ ಬ್ಯಾಟರಿ ಉಳಿಯುತ್ತಿಲ್ಲ. ಇದರಲ್ಲೇನೋ ಸಮಸ್ಯೆಯಿದೆ. ಡಬ್ಬಾ ಫೋನ್ ಎಂದು ಭಾವಿಸಿ, ಹೊಸ ಸ್ಮಾರ್ಟ್‌ಫೋನ್ ಮೊರೆ ಹೋದ್ರೆ ನಿಮಗೆ ನೀವೇ ಹಾಕಿಕೊಳ್ಳುವ ದಂಡವಿದು. ರಾತ್ರಿ ಪೂರ ಚಾರ್ಚಿಂಗ್ ಹಾಕುವ ಅಭ್ಯಾಸವನ್ನು ಬಿಡಿ. ಇದೇ ಬ್ಯಾಟರಿಯನ್ನು ಕಡಿಸುತ್ತದೆಲಿಥಿಯಂ-ಐಯಾನ್ ಬ್ಯಾಟರಿಗಳ ಮೇಲಿನ ಒತ್ತಡ!
ಸ್ಮಾರ್ಟ್‌ಫೋನ್‌ಗಳಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಬಳಸಲಾಗುತ್ತದೆ. ಇವು 100% ಅಂದ್ರೆ ಫುಲ್ ಚಾರ್ಜ್ ಆದ ಮೇಲೆ ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತವೆ. ಇದು ಬ್ಯಾಟರಿಯಲ್ಲಿ ಕೆಮಿಕಲ್ ಒತ್ತಡವನ್ನು ಜಾಸ್ತಿ ಮಾಡುತ್ತದೆ. ಹೀಗಾಗಿಯೇ, ಹಲವು ಫೋನ್ಗಳ ಬ್ಯಾಟರಿಗಳು ಬೇಗ ಕೆಟ್ಟುಹೋಗ್ತವೆ. ಕೆಲವು ಊದಿಕೊಂಡರೆ, ಇನ್ನೂ ಕೆಲವು ಸ್ಫೋಟಗೊಳ್ಳುತ್ತವೆ100% ಫುಲ್ ಆದ ಮೇಲೂ ಚಾರ್ಚ್ ಬೇಡ!
ಬ್ಯಾಟರಿ ಫುಲ್ ಆದ ಮೇಲೂ ಚಾರ್ಚಿಂಗ್ ಮುಂದುವರಿಸಿದರೆ ಹಲವು ಫೋನ್ಗಳಲ್ಲಿ ಶಾಖ ಉತ್ಪಾದನೆ ಆಗುತ್ತದೆ. ಈ ಅತಿಯಾದ ಶಾಖವು ಬ್ಯಾಟರಿಯನ್ನು ಡ್ಯಾಮೇಜ್ ಮಾಡುವುದಲ್ಲದೇ, ಕೆಲವೊಮ್ಮೆ ಭಾರೀ ಸ್ಫೋಟಕ್ಕೂ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಹಾಗಿದ್ರೆ, ಎಷ್ಟಿದ್ದರೆ ಒಳ್ಳೆಯದು?80% ಚಾರ್ಚ್ ಓಕೆ
ತಜ್ಞರ ಪ್ರಕಾರ, ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಸಂಪೂರ್ಣವಾಗಿ ಬಳಕೆ ಮಾಡುವುದು ಅಥವಾ ಫುಲ್ಗಿಂತಲೂ ಹೆಚ್ಚು ಅವಧಿ ಚಾರ್ಚ್ ಮಾಡುವುದು ಸರಿಯಲ್ಲ. ಸಾಮಾನ್ಯವಾಗಿ, 80 ಪರ್ಸೆಂಟ್ ಚಾರ್ಚ್ ಇಟ್ಟುಕೊಳ್ಳುವುದು ಉತ್ತಮ ಎನ್ನಲಾಗಿದೆ. ಹೀಗೆ ಮಾಡುವುದರಿಂದ ಬ್ಯಾಟರಿ ದೀರ್ಘಕಾಲದವರೆಗೆ ಬಾಳಿಕೆ ಬರುತ್ತದೆ