ಕಿವೀ ಹಣ್ಣು 
ಫೋಟೋ ಗ್ಯಾಲರಿ

ಆರೋಗ್ಯದ ಸಂಜೀವಿನಿ ಕಿವೀ ಜ್ಯೂಸ್

ಮಣಿಕಂಠ ಪಾ ಹಿರೇಮಠ

ಕಿವೀ ಹಣ್ಣು

ಕಿವೀ ಹಣ್ಣನ್ನು ಪೌಷ್ಟಿಕಾಂಶಗಳ ಆಗರ ಎಂದು ಕರೆಯಲಾಗುತ್ತದೆ. ಇದರಲ್ಲಿ ಕಿತ್ತಳೆ ಮತ್ತು ಸೇಬಿಗಿಂತ ಹೆಚ್ಚಿನ ಪ್ರಮಾಣದ ವಿಟಮಿನ್‌ಗಳು ಹಾಗೂ ಖನಿಜಾಂಶಗಳಿವೆ. ಈ ಹಣ್ಣಿನ ಜ್ಯೂಸ್ ಸೇವನೆಯಿಂದ ಲಭಿಸುವ ಪ್ರಮುಖ ಲಾಭಗಳು ಈ ಕೆಳಗಿನಂತಿವೆ.

ರೋಗನಿರೋಧಕ ಶಕ್ತಿ ಹೆಚ್ಚಳ

ಕಿವೀ ಜ್ಯೂಸ್‌ನಲ್ಲಿ ವಿಟಮಿನ್ ಸಿ (Vitamin C) ಅತಿ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಬಿಳಿ ರಕ್ತಕಣಗಳ ಉತ್ಪಾದನೆಯನ್ನು ಉತ್ತೇಜಿಸಿ, ಸಾಮಾನ್ಯ ಶೀತ, ಕೆಮ್ಮು ಮತ್ತು ಇತರ ಸೋಂಕುಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿ ನೀಡುತ್ತದೆ.

ಸುಗಮ ಜೀರ್ಣಕ್ರಿಯೆ

ಕಿವೀಯಲ್ಲಿ ಆಕ್ಟಿನೈಡಿನ್ (Actinidin) ಎಂಬ ಕಿಣ್ವ ಹಾಗೂ ನಾರಿನಂಶ (Fiber) ಸಮೃದ್ಧವಾಗಿದೆ. ಇದು ಪ್ರೋಟೀನ್ ಜೀರ್ಣವಾಗಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸಿ ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ.

ಹೃದಯದ ಆರೋಗ್ಯ ಮತ್ತು ಬಿಪಿ ನಿಯಂತ್ರಣ

ಇದರಲ್ಲಿರುವ ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ಚರ್ಮದ ಕಾಂತಿ ಹೆಚ್ಚಳ

ಕಿವೀಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಇ ಚರ್ಮದ ಮೇಲಿನ ಸುಕ್ಕುಗಳನ್ನು ತಡೆದು, ಚರ್ಮವು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಮೊಡವೆಗಳ ನಿವಾರಣೆಗೂ ಪೂರಕವಾಗಿದೆ.

ಕಿಡ್ನಿ ಕಲ್ಲು

ಸಂಶೋಧನೆಗಳ ಪ್ರಕಾರ, ಕಿವೀ ಜ್ಯೂಸ್ ನಿಯಮಿತ ಸೇವನೆಯಿಂದ ಕೀಲುಗಳಲ್ಲಿ ಸಂಗ್ರಹವಾಗಿರುವ ಯೂರಿಕ್ ಆಸಿಡ್ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಕಿಡ್ನಿ ಕಲ್ಲುಗಳು ಕರಗಲು ಸಹಾಯವಾಗುತ್ತದೆ. ಅಲ್ಲದೆ, ಇದು ಅಸ್ತಮಾದಂತಹ ಉಸಿರಾಟದ ಸಮಸ್ಯೆ ಇರುವವರಿಗೂ ಉತ್ತಮ ಪಾನೀಯವಾಗಿದೆ.