ಬ್ಯೂಟಿಫುಲ್ ನಟಿ
ಕನ್ನಡ ಚಿತ್ರರಂಗದ ಬ್ಯೂಟಿಫುಲ್ ಯುವ ನಟಿಯರಲ್ಲಿ ನಿಶ್ವಿಕಾ ನಾಯ್ಡು ಕೂಡ ಒಬ್ಬರು. 1996 ಮೇ 19ರಂದು ಬೆಂಗಳೂರಿನಲ್ಲಿ ತೆಲುಗು ಮಾತನಾಡುವ ಕುಟುಂಬದಲ್ಲಿ ಜನಿಸಿದರು. ನಿಶ್ವಿಕಾ ಅವರು ಭರತನಾಟ್ಯದಲ್ಲಿ ತರಬೇತಿ ಪಡೆದಿದ್ದು, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಸೈಕಾಲಜಿಯಲ್ಲಿ ಪದವಿ ಪಡೆದಿದ್ದಾರೆ.ಅಮ್ಮ ಐ ಲವ್ ಯೂ ಚೊಚ್ಚಲ ಚಿತ್ರ
2018ರಲ್ಲಿ ಅಮ್ಮ ಐ ಲವ್ ಯೂ ಚಿತ್ರದೊಂದಿಗೆ ಚೊಚ್ಚಲ ಪ್ರವೇಶ ಮಾಡಿದ ನಿಶ್ವಿಕಾ, ತಮ್ಮ ಮೊದಲ ಸಿನಿಮಾದಲ್ಲೇ ದಿವಂಗತ ನಟ ಚಿರಂಜೀವಿ ಸರ್ಜಾ ಜೊತೆಗೆ ಉತ್ತಮ ನಟನೆಯಿಂದಲೇ ಗಮನ ಸೆಳೆದರು.ಮಾರ್ಕ್ ಸಿನಿಮಾದಲ್ಲಿ ನಿಶ್ವಿಕಾ
ಇದಾದ ನಂತರ ಜೆಂಟಲ್‌ಮ್ಯಾನ್, ಗುರು ಶಿಷ್ಯರು, ಸಕತ್ (ಗೋಲ್ಡನ್ ಸ್ಟಾರ್ ಗಣೇಶ್ ಜೊತೆ), ದಿಲ್‌ಪಸಂದ್ (ಕೃಷ್ಣ ಜೊತೆ), ಕರತಕ ದಮನಕ (ಶಿವಣ್ಣ ಮತ್ತು ಪ್ರಭುದೇವ ಜೊತೆ) ನಂತರ 2025ರಲ್ಲಿ ಮಾರುತ ಸಿನಿಮಾಗಳ ಮೂಲಕ ಮಿಂಚಿದರು. ಸುದೀಪ್ ನಟನೆಯ ಮಾರ್ಕ್ ಸಿನಿಮಾದಲ್ಲಿ ವಿಶೇಷ ಹಾಡೊಂದರಲ್ಲಿ ಸೊಂಟ ಬಳುಕಿಸಿದ್ದಾರೆ.ಸಿಕ್ಸ್ಪ್ಯಾಕ್
ನಟನೆ ಮಾತ್ರವಲ್ಲದೇ ಫಿಟ್ನೆಸ್ ಫ್ರೀಕ್ ಆಗಿರುವ ನಿಶ್ಚಿಕಾ ಆಗಾಗ ತಮ್ಮ ವರ್ಕೌಟ್ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸಿಕ್ಸ್ಪ್ಯಾಕ್ ಮಾಡಿಯೂ ಗಮನ ಸೆಳೆದಿದ್ದಾರೆ.ವಿವಾದಗಳು ಹೊಸದೇನಲ್ಲ
ನಿಶ್ವಿಕಾ ವಿವಾದಗಳಿಂದಲೂ ಸುದ್ದಿಯಾಗಿದ್ದಾರೆ. ಇತ್ತೀಚಿಗೆ ಕಿರಿತೆರೆ ನಟಿ ವೈಷ್ಣವಿ ಕೌಂಡಿನ್ಯ ತಮ್ಮ ಬಟ್ಟೆ ವಿಚಾರಕ್ಕೆ ಟ್ರೋಲ್ ಆದಾಗ, ಅವರ ಪರ ಧ್ವನಿ ಎತ್ತಿದ ನಿಶ್ವಿಕಾ, ಹೆಣ್ಣು ಮಕ್ಕಳು ಬೆತ್ತಲೆಯಾಗಿ ನಿಂತು ಕೊಂಡರೂ ಅವರ ಅನುಮತಿ ಇಲ್ಲದೇ ನೋಡಬಾರದು ಎಂದಿದ್ದರು. ಈ ಮಾತು ಜಾಲತಾಣದಲ್ಲಿ ಆಕ್ರೋಶಕ್ಕೆ ಗುರಿಯಾಗಿತ್ತು.ಹೋಟೆಲ್ ಕೋಣೆಯಲ್ಲಿ ಕಳೆದುಹೋದೆ
ಇದೀಗ ತಮ್ಮ ಇನ್ಸ್ಟಾಗ್ರಾಂನಲ್ಲಿ ನಿಶ್ವಿಕಾ ಹಂಚಿಕೊಂಡಿರುವ ಮಾದಕ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಕಪ್ಪು ಬಣ್ಣದ ಬ್ಲೇಜರ್ ಜೊತೆಗೆ ತುಂಡುಡುಗೆ ಧರಿಸಿ ತುಂಬಾ ಮಾದಕವಾಗಿ ಪೋಸ್ ನೀಡಿದ್ದಾರೆ. ತಮ್ಮ ಫೋಟೋಗಳಿಗೆ ಹೋಟೆಲ್ ಕೋಣೆಯಲ್ಲಿ ಕಳೆದುಹೋದೆ ಎಂಬ ಶೀರ್ಷಿಕೆ ನೀಡಿದ್ದು, ಫೋಟೋಗಳು ಸಾಕಷ್ಟು ಸದ್ದು ಮಾಡುತ್ತಿವೆ.ಮೋಸ್ಟ್ ಡಿಜೈರಬಲ್ ವುಮನ್
ಕನ್ನಡದ ಯುವ ಪ್ರೇಕ್ಷಕರ ನೆಚ್ಚಿನ ನಟಿಯರಲ್ಲಿ ಒಬ್ಬರಾಗಿರುವ ನಿಶ್ವಿಕಾ, ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯರಾಗಿದ್ದು, 2020ರಲ್ಲಿ ಬೆಂಗಳೂರು ಟೈಮ್ಸ್‌ನ ‘ಮೋಸ್ಟ್ ಡಿಜೈರಬಲ್ ವುಮನ್’ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದರು.