ಕೇವಲ ಒಂದೇ ರೀತಿಯ ನಟನೆಗೆ ಸೀಮಿತರಾದವರಲ್ಲ ಜಾಹ್ನವಿ ಕಪೂರ್. ‘ಗುಂಜನ್ ಸಕ್ಸೇನಾ’, ‘ಮಿಲಿ’, ‘ಉಲಝ್’ ಮತ್ತು ‘ಹೋಮ್‌ಬೌಂಡ್’ ಚಿತ್ರಗಳ ಮೂಲಕ ತಮ್ಮ ನಟನಾ ಪ್ರತಿಭೆಯನ್ನು ಜಾಹ್ನವಿ ಸಾಬೀತುಪಡಿಸಿದ್ದಾರೆ. ತೆಲುಗಿನ ‘ದೇವರಾ’ ಚಿತ್ರದಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಸಿನಿರಂಗಕ್ಕೂ ಕಾಲಿಟ್ಟಿದ್ದಾರೆ.
ದೇವರಾ ಸಿನಿಮಾದ ‘ಚುಟ್ಟಮಲ್ಲೇ’ ಹಾಡಿನ ಎಐ ಡೀಪ್‌ಫೇಕ್ ವಿಡಿಯೋ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು. ಹಾಡನ್ನು ತಿರುಚಿ ಅಶ್ಲೀಲವಾಗಿ ಬಿಂಬಿಸಿದ್ದಕ್ಕೆ ಜಾಹ್ನವಿ ಬಹಿರಂಗವಾಗಿಯೇ ಖಂಡಿಸಿದರು. ಅಲ್ಲದೆ, ಜೂ. ಎನ್ಟಿಆರ್ ಸೇರಿದಂತೆ ಅನೇಕ ಕಲಾವಿದರು ಜಾಹ್ನವಿಗೆ ಬೆಂಬಲ ಸೂಚಿಸಿದ್ದಾರೆ. ಇದರ ನಡುವೆ ಪೆದ್ದಿ ಸಿನಿಮಾದ ಹಾಡು ಕೂಡ ಟ್ರೋಲ್ ಆಯಿತು.
ಇತ್ತೀಚೆಗೆ ಜಾಹ್ನವಿ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಒಂದು ಫೋಟೋದಲ್ಲಿ ಜಾಹ್ನವಿ ಅವರು ತಮ್ಮ ಮಿಡಲ್ ಫಿಂಗರ್ ತೋರಿಸಿದ್ದು, ಅನೇಕರು ಈ ಭಂಗಿಯನ್ನು ಟ್ರೋಲಿಂಗ್ ಮಾಡುತ್ತಿರುವವರಿಗೆ ನೀಡಿದ ಖಡಕ್ ತಿರುಗೇಟು ಎಂದು ಭಾವಿಸಿದ್ದಾರೆ.
ಮೊದಲ ಫೋಟೋದಲ್ಲಿ ಜಾಹ್ನವಿ ಅವರು ನೀಳ ಕೂದಲು, ಕಪ್ಪು ಬಣ್ಣದ ಸನ್‌ಗ್ಲಾಸ್, ನ್ಯೂಡ್ ಪಿಂಕ್ ತುಟಿಗಳು ಮತ್ತು ಗೋಲ್ಡ್ ರಿಂಗ್ ಧರಿಸಿ, ನೇರಳೆ ಬಣ್ಣದ ತುಪ್ಪಳ ಕಾಲರ್ ಕೋಟ್‌ನಲ್ಲಿ ಮಿಂಚುತ್ತಾ ತಮ್ಮ ಮಧ್ಯದ ಬೆರಳನ್ನು ತೋರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಎರಡನೇ ಫ್ರೇಮ್‌ನಲ್ಲಿ ಅವರು ತುಸು ಮೃದುವಾದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಬೂದು ಬಣ್ಣದ ಬ್ಲೇಜರ್, ಡಾರ್ಕ್ ಹೈ ನೆಕ್, ಬೆಳ್ಳಿಯ ಕಿವಿಯೋಲೆಗಳು ಹಾಗೂ ಗ್ಲೋಸಿ ಬೆರ್ರಿ ತುಟಿಗಳಲ್ಲಿ ಕಂಗೊಳಿಸಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಮುಂಬರುವ ದಿನಗಳಲ್ಲಿ ಅವರು ಟೈಗರ್ ಶ್ರಾಫ್ ಜೊತೆ ‘ಲಾಗ್ ಜಾ ಗೇಲೆ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರವು 2027ರ ಮೇ 14ರಂದು ಬಿಡುಗಡೆಯಾಗಲಿದೆ.
ಚಿತ್ರರಂಗದ ವರದಿಗಳ ಪ್ರಕಾರ, ಮುಂಬರುವ ದಿನಗಳಲ್ಲಿ ಜಾಹ್ನವಿ ಕಪೂರ್ ಅವರು ನಿರ್ದೇಶಕ ಉಮೇಶ್ ಬಿಸ್ಟ್ ಅವರ ಜೊತೆಯೂ ಕೈಜೋಡಿಸಲಿದ್ದಾರೆ.