ಕ್ಯಾಲ್ಸಿಯಂ 
ಫೋಟೋ ಗ್ಯಾಲರಿ

ಮೂಳೆಗಳ ಬಲಕ್ಕೆ ಹಾಲೊಂದೇ ಅಲ್ಲ; ಈ ಆಹಾರಗಳೇ ಅಸಲಿ ಖಜಾನೆ!

ಭಾನುಪ್ರಿಯ ಡಿ.ಕೆ

ಕ್ಯಾಲ್ಸಿಯಂ

ಕ್ಯಾಲ್ಸಿಯಂ ಎಂದರೆ ತಕ್ಷಣ ನೆನಪಿಗೆ ಬರುವುದು ಹಾಲು. ಆದರೆ ಹಾಲನ್ನು ಇಷ್ಟಪಡದವರಿಗೂ ಅಥವಾ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಬಯಸುವವರಿಗೂ ಪ್ರಕೃತಿಯಲ್ಲಿ ಹಾಲನ್ನು ಮೀರಿಸುವ ಅದ್ಭುತ ಆಹಾರಗಳಿವೆ.

ರಾಗಿ

ಧಾನ್ಯಗಳ ರಾಜ ಎಂದೇ ಕರೆಯಲ್ಪಡುವ ರಾಗಿಯಲ್ಲಿ ಹಾಲಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ಕ್ಯಾಲ್ಸಿಯಂ ಇರುತ್ತದೆ. ಪ್ರತಿ 100 ಗ್ರಾಂ ರಾಗಿಯಲ್ಲಿ ಸುಮಾರು 340 ಮಿಗ್ರಾಂ ಕ್ಯಾಲ್ಸಿಯಂ ಇದ್ದು, ಇದು ಮೂಳೆಗಳ ಬಲವರ್ಧನೆಗೆ ಅತ್ಯುತ್ತಮ.

ಎಳ್ಳು

ಈ ಪುಟ್ಟ ಬೀಜಗಳು ಕ್ಯಾಲ್ಸಿಯಂನ ಮಹಾ ಗಣಿಯಾಗಿವೆ. ಕೇವಲ ಒಂದು ಚಮಚ ಎಳ್ಳಿನಲ್ಲಿ ಹಾಲಿನ ಒಂದು ಲೋಟಕ್ಕಿಂತ ಹೆಚ್ಚಿನ ಕ್ಯಾಲ್ಸಿಯಂ ಸಿಗುತ್ತದೆ.

ಚಿಯಾ ಬೀಜಗಳು

ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಚಿಯಾ ಬೀಜಗಳಲ್ಲಿ ಹಾಲಿನಲ್ಲಿರುವುದಕ್ಕಿಂತ ಐದು ಪಟ್ಟು ಹೆಚ್ಚು ಕ್ಯಾಲ್ಸಿಯಂ ಇರುತ್ತದೆ. ಜೊತೆಗೆ ಇವುಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಕೂಡ ಸಮೃದ್ಧವಾಗಿದೆ.

ಸೊಪ್ಪುಗಳು

ಅದರಲ್ಲೂ ಮುಖ್ಯವಾಗಿ ಬಸಳೆ ಸೊಪ್ಪು, ದಂಟು ಮತ್ತು ನುಗ್ಗೆಸೊಪ್ಪಿನಲ್ಲಿ ಅತ್ಯಧಿಕ ಪ್ರಮಾಣದ ಕ್ಯಾಲ್ಸಿಯಂ ಹಾಗೂ ಕಬ್ಬಿಣದಂಶ ಇರುತ್ತದೆ.

ಬಾದಾಮಿ

ಒಣಫಲಗಳ ಪೈಕಿ ಬಾದಾಮಿಯಲ್ಲಿ ಅತಿ ಹೆಚ್ಚು ಕ್ಯಾಲ್ಸಿಯಂ ಇದ್ದು, ದಿನಕ್ಕೆ 5-6 ನೆನೆಸಿದ ಬಾದಾಮಿ ತಿನ್ನುವುದರಿಂದ ಮೂಳೆಗಳು ಮತ್ತು ಹಲ್ಲುಗಳು ಬಲಗೊಳ್ಳುತ್ತವೆ.