ನೇರಳೆ ಹಣ್ಣು
ನೇರಳೆ ಹಣ್ಣು ಆರೋಗ್ಯಕ್ಕೆ ಅತ್ಯಂತ ಗುಣಕಾರಿ. ವಿಶೇಷವಾಗಿ ಮಧುಮೇಹಿಗಳಿಗೆ ಇದು ವರಪ್ರಸಾದ. ಆದರೆ, ಇದನ್ನು ತಿಂದ ತಕ್ಷಣ ಕೆಲವು ಆಹಾರಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗಿ ಆರೋಗ್ಯ ಹಾಳಾಗಬಹುದು. ಅಂತಹ 5 ಆಹಾರಗಳು ಇಲ್ಲಿವೆ:ಹಾಲು ಮತ್ತು ಹಾಲಿನ ಉತ್ಪನ್ನಗಳು
ನೇರಳೆ ಹಣ್ಣು ತಿಂದ ತಕ್ಷಣ ಹಾಲು, ಮೊಸರು ಅಥವಾ ಮಜ್ಜಿಗೆ ಕುಡಿಯಬಾರದು. ನೇರಳೆಯಲ್ಲಿರುವ ಆಮ್ಲೀಯತೆ ಮತ್ತು ಹಾಲಿನ ಪ್ರೋಟೀನ್ ಒಂದಕ್ಕೊಂದು ಸೇರಿದಾಗ ಹೊಟ್ಟೆಯಲ್ಲಿ ಗ್ಯಾಸ್, ಆಸಿಡಿಟಿ, ಹೊಟ್ಟೆ ಉರಿ ಹಾಗೂ ವಾಂತಿ ಉಂಟಾಗಬಹುದು.ಉಪ್ಪಿನಕಾಯಿ
ನೇರಳೆ ಹಣ್ಣು ತಿಂದ ತಕ್ಷಣ ಉಪ್ಪಿನಕಾಯಿ ತಿನ್ನುವುದು ತುಂಬಾ ಅಪಾಯಕಾರಿ. ಇವೆರಡೂ ಸೇರಿ ಹೊಟ್ಟೆಯಲ್ಲಿ ತೀವ್ರವಾದ ಆಮ್ಲೀಯತೆಯನ್ನು ಉಂಟುಮಾಡುತ್ತವೆ. ಇದರಿಂದ ಹೊಟ್ಟೆ ನೋವು ಮತ್ತು ಜೀರ್ಣಾಂಗವ್ಯೂಹದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.ಅರಿಶಿನ
ನೇರಳೆ ತಿಂದ ತಕ್ಷಣ ಅರಿಶಿನ ಬಳಸಿದ ಆಹಾರಗಳನ್ನು ತಿಂದರೆ ದೇಹದಲ್ಲಿ ರಾಸಾಯನಿಕ ಕ್ರಿಯೆಯಾಗಿ ಹೊಟ್ಟೆಯಲ್ಲಿ ಉರಿ ಹಾಗೂ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ. ಕನಿಷ್ಠ 1 ಗಂಟೆಯ ನಂತರ ಅರಿಶಿನಯುಕ್ತ ಆಹಾರ ಸೇವಿಸುವುದು ಒಳಿತು.ನೀರು
ನೇರಳೆ ಹಣ್ಣು ತಿಂದ ತಕ್ಷಣ ನೀರು ಕುಡಿಯುವ ಅಭ್ಯಾಸ ಅನೇಕರಿಗಿರುತ್ತದೆ. ಆದರೆ ಹೀಗೆ ಮಾಡುವುದರಿಂದ ಜೀರ್ಣಕ್ರಿಯೆ ಮಂದಗತಿಯಾಗಿ ಬೇಧಿ, ವಾಂತಿ ಅಥವಾ ಗಂಟಲಿನ ಕಫ ಹೆಚ್ಚಾಗಬಹುದು. ಹಣ್ಣು ತಿಂದ 30 ನಿಮಿಷಗಳ ನಂತರವಷ್ಟೇ ನೀರು ಕುಡಿಯಬೇಕು.ಮೂಲಂಗಿ
ನೇರಳೆ ಮತ್ತು ಮೂಲಂಗಿ ಪರಸ್ಪರ ವಿರುದ್ಧ ಗುಣಗಳನ್ನು ಹೊಂದಿವೆ. ಇವೆರಡನ್ನೂ ಒಟ್ಟಿಗೆ ಅಥವಾ ಒಂದರ ಬೆನ್ನಲ್ಲೇ ಮತ್ತೊಂದನ್ನು ತಿಂದರೆ ಹೊಟ್ಟೆಯಲ್ಲಿ ವಿಷಕಾರಿ ಅಂಶಗಳು ಸೃಷ್ಟಿಯಾಗಿ ಚರ್ಮದ ಸಮಸ್ಯೆಗಳು ಅಥವಾ ತೀವ್ರ ಅಜೀರ್ಣ ಉಂಟಾಗಬಹುದು.