ಮೊಬೈಲ್ ಫೋನ್‌ 
ಫೋಟೋ ಗ್ಯಾಲರಿ

ಬೇಸಿಗೆಯಲ್ಲಿ ನಿಮ್ಮ ಫೋನ್ ಹೀಟ್ ಆಗ್ತಿದ್ಯಾ? ತಡೆಯಲು ಹೀಗೆ ಮಾಡಿ!

ಭಾನುಪ್ರಿಯ ಡಿ.ಕೆ

ಮೊಬೈಲ್ ಫೋನ್‌

ಬೇಸಿಗೆಯ ತೀವ್ರ ಬಿಸಿಲಿಗೆ ಕೇವಲ ನಮಗಷ್ಟೇ ಅಲ್ಲ, ನಮ್ಮ ಕೈಯಲ್ಲಿರೋ ಮೊಬೈಲ್ ಫೋನ್‌ಗಳಿಗೂ ಬೆವತು ನೀರಾಗುವ ಪರಿಸ್ಥಿತಿ ಬರುತ್ತದೆ! ಬೇಸಿಗೆಯಲ್ಲಿ ವಾತಾವರಣದ ತಾಪಮಾನ ಹೆಚ್ಚಿರುವುದರಿಂದ ಮೊಬೈಲ್ ಅತಿಯಾಗಿ ಬಿಸಿಯಾಗುವುದು ಸಾಮಾನ್ಯ. ಇದರಿಂದ ಬ್ಯಾಟರಿ ಬೇಗ ಖಾಲಿಯಾಗುವುದಲ್ಲದೆ, ಫೋನ್ ಹಾನಿಗೊಳಗಾಗುವ ಸಾಧ್ಯತೆಯೂ ಇರುತ್ತದೆ.

ಬಿಸಿಲಿನಲ್ಲಿ ನೇರವಾಗಿ ಫೋನ್ ಇಡಬೇಡಿ

ನಿಮ್ಮ ಫೋನ್ ಅನ್ನು ಎಂದಿಗೂ ನೇರ ಬಿಸಿಲು ಬೀಳುವ ಜಾಗದಲ್ಲಿ ಇಡಬೇಡಿ. ವಿಶೇಷವಾಗಿ ಕಾರಿನ ಡ್ಯಾಶ್‌ಬೋರ್ಡ್ ಮೇಲೆ, ಬಿಸಿಲಿನ ಕಿಟಕಿಗಳ ಬಳಿ ಅಥವಾ ಬೈಕ್ ರೈಡ್ ಮಾಡುವಾಗ ಬಿಸಿಲಿಗೆ ಸಿಗುವಂತೆ ಫೋನ್ ಇಡಬಾರದು. ಬಿಸಿಲಿನ ತಾಪ ಮತ್ತು ಫೋನ್‌ ಒಳಗಿನ ಪ್ರೊಸೆಸರ್ ತಾಪ ಎರಡೂ ಸೇರಿದರೆ ಫೋನ್ ಬ್ಲಾಸ್ಟ್ ಆಗುವ ಅಪಾಯವೂ ಇರುತ್ತದೆ.

ಮೊಬೈಲ್ ಕವರ್ ಅನ್ನು ಬಿಚ್ಚಿಡಿ

ನಾವು ಫೋನ್ ರಕ್ಷಣೆಗಾಗಿ ಬಳಸುವ ದಪ್ಪನೆಯ ಪ್ಲಾಸ್ಟಿಕ್ ಅಥವಾ ರಬ್ಬರ್ ಕವರ್‌ಗಳು ಬೇಸಿಗೆಯಲ್ಲಿ ಫೋನ್‌ಗೆ ಶತ್ರುಗಳಾಗುತ್ತವೆ. ಇವು ಫೋನ್‌ನಿಂದ ಹೊರಬರುವ ಶಾಖವನ್ನು ( ಒಳಗೇ ಹಿಡಿದಿಟ್ಟುಕೊಳ್ಳುತ್ತವೆ. ಫೋನ್ ಅತಿಯಾಗಿ ಬಿಸಿಯಾಗುತ್ತಿದೆ ಎನಿಸಿದಾಗ, ತಕ್ಷಣವೇ ಅದರ ಬ್ಯಾಕ್ ಕವರ್ ಅನ್ನು ತೆಗೆದು ಪಕ್ಕಕ್ಕಿಡಿ. ಇದರಿಂದ ಫೋನ್ ಸುಲಭವಾಗಿ ತಂಪಾಗುತ್ತದೆ.

ಚಾರ್ಜ್ ಮಾಡುವಾಗ ಫೋನ್ ಬಳಸಬೇಡಿ

ಮೊಬೈಲ್ ಚಾರ್ಜ್ ಆಗುವಾಗ ಸ್ವಾಭಾವಿಕವಾಗಿಯೇ ಸ್ವಲ್ಪ ಬಿಸಿಯಾಗುತ್ತದೆ. ಇಂತಹ ಸಮಯದಲ್ಲಿ ನೀವು ಗೇಮ್ ಆಡಿದರೆ ಅಥವಾ ಸೋಶಿಯಲ್ ಮೀಡಿಯಾ ಬಳಸಿದರೆ ಫೋನ್ ತಾಪಮಾನ ದುಪ್ಪಟ್ಟಾಗುತ್ತದೆ.

ಅನಗತ್ಯ ಆ್ಯಪ್‌ಗಳನ್ನು ಆಫ್ ಮಾಡಿ

ಹಿನ್ನೆಲೆಯಲ್ಲಿ ಚಾಲನೆಯಲ್ಲಿರುವ ಆ್ಯಪ್‌ಗಳು ಪ್ರೊಸೆಸರ್ ಮೇಲೆ ಒತ್ತಡ ಹೇರುತ್ತವೆ. ಬೇಸಿಗೆಯಲ್ಲಿ ಫೋನ್ ಬಳಸದಿದ್ದಾಗ Wi-Fi, Bluetooth ಮತ್ತು ಜಿಪಿಎಸ್ ಅನ್ನು ಆಫ್ ಮಾಡಿ. ಹಾಗೆಯೇ ಬ್ರೈಟ್‌ನೆಸ್ ಅನ್ನು ಪೂರ್ತಿ ಜಾಸ್ತಿ ಇಡಬೇಡಿ, ಇದು ಬ್ಯಾಟರಿಯನ್ನು ಅತಿಯಾಗಿ ಬಿಸಿ ಮಾಡುತ್ತದೆ.

ಬಿಸಿಯಾದ ಫೋನ್ ಅನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ!

ಫೋನ್ ಅತಿಯಾಗಿ ಬಿಸಿಯಾದಾಗ ತಕ್ಷಣ ತಂಪಾಗಲಿ ಎಂದು ಅನೇಕರು ಅದನ್ನು ಎಸಿ ಮುಂಭಾಗ ಅಥವಾ ಫ್ರಿಡ್ಜ್ ಒಳಗಡೆ ಇಡುತ್ತಾರೆ. ಇದು ಅತ್ಯಂತ ತಪ್ಪು ವಿಧಾನ. ದಿಢೀರ್ ತಾಪಮಾನ ಬದಲಾವಣೆಯಿಂದಾಗಿ ಫೋನ್ ಒಳಗಡೆ ತೇವಾಂಶ ಸೃಷ್ಟಿಯಾಗಿ ಶಾರ್ಟ್ ಸರ್ಕ್ಯೂಟ್ ಆಗಬಹುದು.