ರಶ್ಮಿಕಾ ಇಂದು ಬಹುಬೇಡಿಕೆ ನಟಿ  
ಫೋಟೋ ಗ್ಯಾಲರಿ

ರಶ್ಮಿಕಾ ಪ್ರೀ ವೆಡ್ಡಿಂಗ್​ ಬ್ಯಾಚುಲರ್​ ಟ್ರಿಪ್​? ಲಂಕಾದಲ್ಲಿ ಸುಂದರಿಯರ ಮೋಜು-ಮಸ್ತಿ! Rashmika Mandanna

ರಮೇಶ್​ ಕುಮಾರ್​​ ಬಿ ಎಡಮೋಳೆ

ರಶ್ಮಿಕಾ ಇಂದು ಬಹುಬೇಡಿಕೆ ನಟಿ

ರಶ್ಮಿಕಾ ಮಂದಣ್ಣ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳಬೇಕಿಲ್ಲ ಏಕೆಂದರೆ, ಆಕೆ ಕನ್ನಡತಿಯಾಗಿದ್ದು, ಪ್ಯಾನ್​ ಇಂಡಿಯಾ ನಟಿಯಾಗಿ ಬೆಳೆದಿದ್ದಾರೆ. ಸಾಲು ಸಾಲು ಹಿಟ್​ ಸಿನಿಮಾಗಳ ಮೂಲಕ ಇಂದು ಬಹುಬೇಡಿಕೆ ನಟಿಯಾಗಿದ್ದಾರೆ.

ನಟ ವಿಜಯ್ ಜತೆ ಎಂಗೇಜ್​ಮೆಂಟ್​

ಇತ್ತೀಚೆಗೆ, ರಶ್ಮಿಕಾ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಕೇವಲ ಸಿನಿಮಾ ಕಾರಣಕ್ಕಲ್ಲ, ವ್ಯಯಕ್ತಿಕ ಕಾರಣಕ್ಕೂ ರಶ್ಮಿಕಾ ಸುದ್ದಿಯಾಗುತ್ತಿದ್ದಾರೆ. ಹೌದು, ನಟ ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಬ್ಯಾಕ್​ ಟು ಬ್ಯಾಕ್​ ಸಿನಿಮಾ

ಇತ್ತೀಚಗೆ ರಶ್ಮಿಕಾ ನಟನೆಯ ಬಾಲಿವುಡ್​ ಸಿನಿಮಾ ಥಮ್ಮಾ ಹಾಗೂ ಟಾಲಿವುಡ್​ನ ಗರ್ಲ್​ಫ್ರೆಂಡ್​ ಸಿನಿಮಾ ಬ್ಯಾಕ್​ ಟು ಬ್ಯಾಕ್​ ಬಿಡುಗಡೆಯಾಗಿ ಬಾಕ್ಸ್​ಆಫೀಸ್​ನಲ್ಲಿ ಸದ್ದು ಮಾಡಿದವು.

ಲಂಕಾ ಪ್ರವಾಸದಲ್ಲಿ ರಶ್ಮಿಕಾ

ಸಿನಿಮಾಗಳಿಂದ ಬಿಡುವು ಪಡೆದುಕೊಂಡಿರುವ ರಶ್ಮಿಕಾ ಇದೀಗ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಹೊಸ ಚರ್ಚೆಗೆ ಗ್ರಾಸವಾಗಿದೆ.

ಪ್ರೀ ವೆಡ್ಡಿಂಗ್​ ಬ್ಯಾಚುಲರ್​ ಟ್ರಿಪ್​

ಇದು ಕೇವಲ ವಿರಾಮವಲ್ಲ, ಬಹುಶಃ ಬ್ಯಾಚಿಲರೆಟ್ ಪ್ರವಾಸವೂ ಆಗಿರಬಹುದು ಎಂದು ಕೆಲವು ಅಭಿಮಾನಿಗಳು ಊಹಿಸುತ್ತಿದ್ದಾರೆ. ಏಕೆಂದರೆ, 2026, ಫೆಬ್ರವರಿ ತಿಂಗಳಲ್ಲಿ ರಾಜಸ್ಥಾನದ ಉದಯಪುರದಲ್ಲಿ ವಿಜಯ್ ದೇವರಕೊಂಡ-ರಶ್ಮಿಕಾ ವಿವಾಹದ ಬಗ್ಗೆ ಈಗಾಗಲೇ ವದಂತಿಗಳು ಹರಡಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ರಶ್ಮಿಕಾ ಜತೆ ವರ್ಷಾ ಬೊಲ್ಲಮ್ಮ

ಸದ್ಯ ರಶ್ಮಿಕಾ ಪ್ರವಾಸದ ಮೂಡ್​ನಲ್ಲಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಸಾಕಷ್ಟು ಫೋಟೋಗಳನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ರಶ್ಮಿಕಾ ಜತೆ ನಟಿ ವರ್ಷಾ ಬೊಲ್ಲಮ್ಮ ಕೂಡ ಇದಾರೆ. ಅಲ್ಲದೆ, ಅವರೊಂದಿಗೆ ಇನ್ನಿತರ ಗೆಳತಿಯರು ಕೂಡ ಇದಾರೆ.

ನನ್ನ ಹುಡುಗಿಯರು ಅತ್ಯುತ್ತಮರು

ತಮ್ಮ ಪ್ರವಾಸದ ಬಗ್ಗೆ ಬರೆದುಕೊಂಡಿರುವ ರಶ್ಮಿಕಾ, ನನಗೆ ಇತ್ತೀಚೆಗೆ 2 ದಿನ ರಜೆ ಸಿಕ್ಕಿತು ಮತ್ತು ನನ್ನ ಹುಡುಗಿಯರೊಂದಿಗೆ ಸಮಯ ಕಳೆಯಲು ಈ ಅವಕಾಶ ದೊರೆಯಿತು. ನಾವು ಶ್ರೀಲಂಕಾದಲ್ಲಿರುವ ಈ ಸುಂದರವಾದ ಪ್ರದೇಶಗಳಿಗೆ ಹೋದೆವು. ಹುಡುಗಿಯರ ಪ್ರವಾಸ ಎಂದು ಕರೆದಿರುವ ರಶ್ಮಿಕಾ, ಕೆಲವರು ಕಾಣೆಯಾಗಿದ್ದಾರೆ ಆದರೆ ನನ್ನ ಹುಡುಗಿಯರು ಅತ್ಯುತ್ತಮರು ಎಂದು ಬರೆದುಕೊಂಡಿದ್ದಾರೆ.

ಸುಂದರ ಫೋಟೋಗಳು

ರಶ್ಮಿಕಾ ಹಂಚಿಕೊಂಡಿರುವ ಸಾಕಷ್ಟು ಫೋಟೋಗಳಲ್ಲಿ ಬೀಚ್​ನಲ್ಲಿ ಸಮಯ ಕಳೆಯುತ್ತಿರುವುದು, ಎಳನೀರು ನೀರು ಕುಡಿಯುತ್ತಿರುವುದು, ತನ್ನ ಸ್ನೇಹಿತರೊಂದಿಗೆ ನಗುತ್ತಾ ಮೋಜು ಮಾಡುತ್ತಿರುವುದು ಮತ್ತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುತ್ತಿರುವ ದೃಶ್ಯಗಳಿವೆ. ಅಲ್ಲದೆ, ಕೆಲವು ಸುಂದರ ದೃಶ್ಯಗಳನ್ನು ಸೆರೆಹಿಡಿದು ಪೋಸ್ಟ್​ ಮಾಡಿದ್ದಾರೆ.

ವೈಯಕ್ತಿಕ ಜೀವನದಲ್ಲಿ ಗೌಪ್ಯತೆ

ಸದ್ಯ ರಶ್ಮಿಕಾ ಅವರ ಪ್ರವಾಸ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಬ್ಬರೂ ತಮ್ಮ ವೈಯಕ್ತಿಕ ಜೀವನವನ್ನು ಯಾವಾಗಲೂ ಸಾರ್ವಜನಿಕರಿಂದ ದೂರವಿಡಲು ಬಯಸುತ್ತಾರೆ.

ರಶ್ಮಿಕಾಗೆ 2025 ಯಶಸ್ವಿ ವರ್ಷ

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾರೆ, 2025 ರಶ್ಮಿಕಾ ಅವರಿಗೆ ತುಂಬಾ ಬಿಜಿಯಾದ ಮತ್ತು ಲಾಭದಾಯಕ ವರ್ಷವಾಗಿತ್ತು. ಛಾವಾ, ಕುಬೇರಾ, ಥಮ್ಮಾ ಮತ್ತು ದಿ ಗರ್ಲ್‌ಫ್ರೆಂಡ್‌ನಂತಹ ಚಿತ್ರಗಳು ರಶ್ಮಿಕಾರನ್ನು ಸುದ್ದಿಯಲ್ಲಿ ಇರಿಸಿದವು. ಸಿಕಂದರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕ್ಲಿಕ್ ಆಗದಿದ್ದರು ಸಹ, ಈ ವರ್ಷವನ್ನು ಯಶಸ್ವಿಯಾಗಿ ಕೊನೆಗೊಳಿಸಿದರು.