ಸೇಬು 
ಫೋಟೋ ಗ್ಯಾಲರಿ

ಜಿಮ್‌ಗೆ ಹೋಗುವ ಮುನ್ನ ಈ 5 ಹಣ್ಣುಗಳನ್ನು ಸೇವಿಸಿ ನಿಮ್ಮ ಸ್ಟಾಮಿನಾ ಹೆಚ್ಚಿಸಿಕೊಳ್ಳಿ

ಮಣಿಕಂಠ ಪಾ ಹಿರೇಮಠ

ಸೇಬು

ಸೇಬಿನಲ್ಲಿರುವ ಪೆಕ್ಟಿನ್ ಎಂಬ ನಾರಿನಂಶವು ದೇಹದಲ್ಲಿ ಶಕ್ತಿಯನ್ನು ನಿಧಾನವಾಗಿ ಮತ್ತು ಸ್ಥಿರವಾಗಿ ಬಿಡುಗಡೆ ಮಾಡುತ್ತದೆ. ಇದು ಹೆಚ್ಚು ಹೊತ್ತು ವರ್ಕೌಟ್ ಮಾಡಲು ಸಹಾಯ ಮಾಡುತ್ತದೆ.

ಕಿತ್ತಳೆ

ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ, ಸ್ನಾಯುಗಳ ಹಾನಿಯನ್ನು ತಡೆಯಲು ಮತ್ತು ದೇಹಕ್ಕೆ ಅಗತ್ಯವಾದ ಹೈಡ್ರೇಶನ್ ನೀಡಲು ಸಹಕಾರಿ.

ಕಲ್ಲಂಗಡಿ

ಇದರಲ್ಲಿ ಎಲ್-ಸಿಟ್ರುಲಿನ್ ಎಂಬ ಅಮಿನೋ ಆಮ್ಲವಿದೆ. ಇದು ರಕ್ತ ಸಂಚಾರವನ್ನು ಸುಧಾರಿಸುತ್ತದೆ ಮತ್ತು ವರ್ಕೌಟ್ ಬಳಿಕ ಉಂಟಾಗುವ ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ.

ಬೆರ್ರಿ ಹಣ್ಣು

ಬೆರ್ರಿಗಳಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಸ್ನಾಯುಗಳ ಆಯಾಸ ಕಡಿಮೆ ಮಾಡಿ, ವರ್ಕೌಟ್ ನಂತರದ ಚೇತರಿಕೆಗೆ ವೇಗ ನೀಡುತ್ತವೆ. ಇವು ಜಿಮ್ ಪ್ರಿಯರ ದೈಹಿಕ ಸಾಮರ್ಥ್ಯ ಹೆಚ್ಚಿಸಲು ಅತ್ಯುತ್ತಮ ಹಣ್ಣುಗಳು.

ಅನಾನಸ್

ಇದರಲ್ಲಿರುವ ಬ್ರೋಮೆಲೈನ್ ಎಂಬ ಕಿಣ್ವವು ಉರಿಯೂತ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ಇದು ಕಠಿಣ ವರ್ಕೌಟ್ ಮಾಡುವಾಗ ಸ್ನಾಯುಗಳಿಗೆ ರಕ್ಷಣೆ ನೀಡುತ್ತದೆ.