ಆರ್ಥಿಕ ನಿಯಮದಲ್ಲಿ ಬದಲಾವಣೆ 
ಫೋಟೋ ಗ್ಯಾಲರಿ

ಜುಲೈ 1 ರಿಂದ ಬದಲಾಗಲಿವೆ ಪ್ರಮುಖ ಆರ್ಥಿಕ ನಿಯಮಗಳು!

ಭಾನುಪ್ರಿಯ ಡಿ.ಕೆ

ಆರ್ಥಿಕ ನಿಯಮದಲ್ಲಿ ಬದಲಾವಣೆ

ಪ್ರತಿ ಹೊಸ ತಿಂಗಳು ಆರಂಭವಾಗುತ್ತಿದ್ದಂತೆ ದೇಶದಲ್ಲಿ ಹಲವು ಆರ್ಥಿಕ ಮತ್ತು ಹಣಕಾಸು ನಿಯಮಗಳು ಬದಲಾಗುವುದು ಸಾಮಾನ್ಯ.

ಆಧಾರ್ ಇಮೇಲ್ ಉಚಿತ ಅಪ್‌ಡೇಟ್

ಆಧಾರ್ ಕಾರ್ಡ್‌ನಲ್ಲಿ ಇಮೇಲ್ ಐಡಿ ನವೀಕರಿಸಲು ಇದ್ದ 75 ರೂ. ಶುಲ್ಕವನ್ನು ತೆಗೆದುಹಾಕಲಾಗಿದ್ದು, ಜುಲೈ 1 ರಿಂದ ಆಧಾರ್ ಆ್ಯಪ್ ಮೂಲಕ ಉಚಿತವಾಗಿ ನವೀಕರಿಸಬಹುದು.

ಬಿಗಿಯಾದ ರೈಲ್ವೆ ನಿಯಮಗಳು

ಟಿಕೆಟ್ ರಹಿತ ಪ್ರಯಾಣಿಕರಿಗೆ ವಿಧಿಸುವ ದಂಡದ ಮೊತ್ತ ಹೆಚ್ಚಾಗಲಿದೆ. ರೈಲು ಹಾಗೂ ರೈಲ್ವೆ ಆವರಣದಲ್ಲಿ ಶಿಸ್ತು ಕಾಯ್ದುಕೊಳ್ಳಲು ಕಠಿಣ ನಿಯಮಗಳು ಜಾರಿಯಾಗಲಿವೆ.

LPG ಟು PNG ಗಡುವು ಹಾಗೂ ಬೆಲೆ ಪರಿಹಾರ

LPGಯಿಂದ PNGಗೆ ಬದಲಾಯಿಸಲು ನೀಡಿದ್ದ 90 ದಿನಗಳ ಗಡುವು ಜೂನ್ 30ಕ್ಕೆ ಮುಗಿಯಲಿದ್ದು, ಸಂಪರ್ಕ ರದ್ದತಿ ಪ್ರಕ್ರಿಯೆ ಆರಂಭವಾಗಬಹುದು.

ITR ಸಲ್ಲಿಕೆಗೆ ಕೊನೆಯ ದಿನಾಂಕ

2025-26ನೇ ಹಣಕಾಸು ವರ್ಷದ ITR-1 ಮತ್ತು ITR-2 ರಿಟರ್ನ್ಸ್ ಸಲ್ಲಿಸಲು ಜುಲೈ 31, 2026 ಕೊನೆಯ ದಿನವಾಗಿದೆ. ತಡವಾದರೆ ದಂಡ ಬೀಳಲಿದೆ.

ಪಾಸ್‌ಪೋರ್ಟ್ ಶುಲ್ಕ ಏರಿಕೆ

ವಿದೇಶಾಂಗ ಸಚಿವಾಲಯವು ಸೇವಾ ಶುಲ್ಕ ಹೆಚ್ಚಿಸಿರುವುದರಿಂದ ನಿಯಮಿತ ಮತ್ತು ತತ್ಕಾಲ್ ಪಾಸ್‌ಪೋರ್ಟ್ ಅರ್ಜಿಗಳು ಇನ್ಮುಂದೆ ದುಬಾರಿಯಾಗಲಿವೆ.

ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ಸ್ ಕಡಿತ

ಆಯ್ದ PhonePe SBI ಕ್ರೆಡಿಟ್ ಕಾರ್ಡ್‌ಗಳ ಮಾಸಿಕ ರಿವಾರ್ಡ್ ಗಳಿಕೆಗೆ ಹೊಸ ಮಿತಿ ಹೇರಲಾಗಿದೆ. ಇನ್ಮುಂದೆ ಶೈಕ್ಷಣಿಕ ಶುಲ್ಕ, ಚಿನ್ನ ಖರೀದಿ, ಟೋಲ್ ಪಾವತಿ ಹಾಗೂ ಫೋನ್‌ಪೇ ಹೊರತಾದ ಯುಟಿಲಿಟಿ ಬಿಲ್‌ಗಳಿಗೆ ರಿವಾರ್ಡ್ ಪಾಯಿಂಟ್ಸ್ ಸಿಗುವುದಿಲ್ಲ.