ಚಳಿಗಾಲದಲ್ಲಿ ತಲೆಯ ಸೋಂಕು ಸಾಮಾನ್ಯ 
ಫೋಟೋ ಗ್ಯಾಲರಿ

ಚಳಿಗಾಲದಲ್ಲಿ ತಲೆಯ ಸೋಂಕು ಗುರುತಿಸುವುದು ಹೇಗೆ? Head infection

ಭಾನುಪ್ರಿಯ ಡಿ.ಕೆ

ಚಳಿಗಾಲದಲ್ಲಿ ತಲೆಯ ಸೋಂಕು ಸಾಮಾನ್ಯ

ಚಳಿಗಾಲದಲ್ಲಿ ತಲೆಯ ಸೋಂಕು ಸಾಮಾನ್ಯವಾದ ಸಮಸ್ಯೆಯಾಗಿದೆ. ನಾವು ಧರಿಸುವ ಟೋಪಿ, ಸ್ಕಾರ್ಫ್​ಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ಈ ಸಮಸ್ಯೆಗಳು ಬರಬಹುದು.

ತಲೆಯಲ್ಲಿ ತೀವ್ರ ತುರಿಕೆ

ಸೋಂಕಾದಾಗ ತಲೆಯನ್ನು ಆಗಾಗ ಕೆರೆದುಕೊಳ್ಳುವಂತೆ ಭಾಸವಾಗುತ್ತದೆ. ವಿಶೇಷವಾಗಿ ಕಿವಿ ಹಿಂದೆ, ಕುತ್ತಿಗೆ ಹತ್ತಿರ ಇದು ಅಲರ್ಜಿಯಂತಹ ಸಮಸ್ಯೆಗಳು ಹೆಚ್ಚಾದಾಗ ಕಂಡುಬರುತ್ತದೆ.

ತಲೆಯಲ್ಲಿ ಚಲನೆ ಅನುಭವ

ಕೆಲವೊಮ್ಮೆ ತಲೆಯ ಮೇಲೆ ಏನೋ ಓಡಾಡುತ್ತಿರುವಂತೆ ಅಥವಾ ಜಿಗಿಯುತ್ತಿರುವಂತೆ ಭಾಸವಾಗುತ್ತದೆ. ಸೋಂಕು ಹೇನನ್ನು ಉತ್ಪತ್ತಿ ಮಾಡಿಕೊಂಡಿರುತ್ತದೆ. ಇದು ರಾತ್ರಿ ವೇಳೆ ಹೆಚ್ಚು ಸಕ್ರಿಯವಾಗಿರುವುದರಿಂದ ನಿದ್ರೆಗೆ ತೊಂದರೆಯಾಗಬಹುದು.

ಕೂದಲಿನಲ್ಲಿ ಮೊಟ್ಟೆಗಳು

ಒಳಗಿನ ಕೂದಲಿನ ಬುಡದ ಹತ್ತಿರ ಸಣ್ಣ ಬಿಳಿ ಅಥವಾ ಹಳದಿ ಬಣ್ಣದ ಮೊಟ್ಟೆಗಳು ಅಂಟಿಕೊಂಡಿರುತ್ತವೆ. ಇವು ಸುಲಭವಾಗಿ ತಲೆಯಿಂದ ಉದುರುವುದಿಲ್ಲ.

ಗಾಯಗಳು ಅಥವಾ ಉರಿಯೂತ

ಹೆಚ್ಚು ಕೆರೆದುಕೊಂಡರೆ ತಲೆಯಲ್ಲಿ ಕೆಂಪು ಬಣ್ಣದ ಗಡ್ಡೆಗಳು ಅಥವಾ ಸಣ್ಣ ರಕ್ತಸ್ರಾವ ಉಂಟಾಗುತ್ತದೆ. ಕೆಲವೊಮ್ಮೆ ಇವುಗಳಿಂದ ಬ್ಯಾಕ್ಟೀರಿಯಾಗಳು ಸಹ ಉಂಟಾಗಬಹುದು.