ದಾಖಲೆಗಳ ಬಾಗಿಲನ್ನು ಬಡಿಯುತ್ತಿದೆ ಚಿನ್ನ-ಬೆಳ್ಳಿ 
ಫೋಟೋ ಗ್ಯಾಲರಿ

2025ರಲ್ಲಿ ಗೋಲ್ಡ್​-ಸಿಲ್ವರ್ ಕಂಡ ಏರಿಕೆ ಎಷ್ಟು?

ಮೋಹನ್​ ಶೆಟ್ಟಿ

ದಾಖಲೆಗಳ ಬಾಗಿಲನ್ನು ಬಡಿಯುತ್ತಿದೆ ಚಿನ್ನ-ಬೆಳ್ಳಿ

ಚಿನ್ನ-ಬೆಳ್ಳಿ ಮತ್ತೊಮ್ಮೆ ದಾಖಲೆಗಳ ಬಾಗಿಲನ್ನು ಬಡಿಯುತ್ತಿದೆ. ದಿನದಿಂದ ದಿನಕ್ಕೆ ಕೊಂಚವಾದರೂ ಕಡಿಮೆಯಾಗುವ ಲಕ್ಷಣಗಳನ್ನು ತೋರಬೇಕಿದ್ದ ಚಿನ್ನ-ಬೆಳ್ಳಿಯ ದರಗಳು, ಇದೀಗ ಸಾರ್ವಕಾಲಿಕ ಗರಿಷ್ಠ ದಾಖಲೆ ಮಟ್ಟವನ್ನು ಮೀರಿ ಹೊಸ ದಾಖಲೆಗೆ ಸಾಕ್ಷಿಯಾಗುತ್ತಿವೆ.

ಕಡೆಗೂ 3 ಲಕ್ಷ ರೂ. ದಾಟಿದ ಬೆಳ್ಳಿ

ಹೊಸ ವರ್ಷಕ್ಕೆ ಕಾಲಿಟ್ಟ ಬಳಿಕವಾದರೂ ಆಭರಣಗಳ ಬೆಲೆಯಲ್ಲಿ ಕಡಿಮೆಯಾಗುತ್ತೆ ಎಂದು ಗ್ರಾಹಕರು ಅಂದಾಜಿಸಿದ್ದರು. ಆದರೆ, ಕಳೆದ ವರ್ಷದ 2 ಲಕ್ಷ ರೂ. ದಾಟಿಹೋಗಿದ್ದ ಸಿಲ್ವರ್​ ಬೆಲೆಯೂ 2026ರ ಮೊದಲೆರೆಡು ವಾರ ಕಳೆಯುತ್ತಿದ್ದಂತೆ 3 ಲಕ್ಷ ರೂ. ಗಡಿಯನ್ನು ದಾಟಿ, ಹೊಸ ದಾಖಲೆಯನ್ನು ನಿರ್ಮಿಸಿದೆ.

ಕೇವಲ 71,500 ರೂ. ಇತ್ತು

ಕಳೆದ ವರ್ಷದ ಚಿನ್ನ-ಬೆಳ್ಳಿ ಎರಡೂ ಗಣನೀಯ ಹಾಗೂ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿತು. ಅಂದು ಆದ ಏರಿಕೆ ಇಂದಿಗೂ ಅದ್ಯಾಕೋ ಕುಸಿಯುವ ಲಕ್ಷಣಗಳನ್ನು ತೋರುತ್ತಿಲ್ಲ ಎಂಬುದೇ ಸದ್ಯ ಚಿನ್ನದಂತ ಗ್ರಾಹಕರ ತಲೆಬಿಸಿಯಾಗಿದೆ. ಹಾಗಿದ್ದರೆ, 2025ರ ಆರಂಭದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿತ್ತು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

1.39 ಲಕ್ಷ ರೂ.

ವರ್ಷದ ಆರಂಭದಲ್ಲಿ, ಚಿನ್ನದ ಬೆಲೆ 24 ಕ್ಯಾರೆಟ್​ 10 ಗ್ರಾಂಗೆ ಬೆಲೆ ಕೇವಲ 71,500 ರೂ. ಇತ್ತು. ಅದೇ 2025ರ ಕೊನೆಯ ಸೋಮವಾರದ ವೇಳೆಗೆ, 1.39 ಲಕ್ಷ ರೂ.ಗೆ ಏರಿಕೆಯಾಗಿತ್ತು. ಇದು ಶೇ.80ರಷ್ಟು ಭಾರೀ ಏರಿಕೆಯನ್ನು ಸೂಚಿಸಿತು. ಇನ್ನು ಬೆಳ್ಳಿ ದರದಲ್ಲಿ ಗಮನಿಸಿದರೆ, ಶೇ.140ರಿಂದ 150ರಷ್ಟು ಹೆಚ್ಚಾಗಿದೆ. ಇದು ಸಾರ್ವಕಾಲಿಕ ದಾಖಲೆಗಳನ್ನು ಮೀರಿ ಹೊಸ ದಾಖಲೆ ಬರೆದಿದೆ

2.32 ಲಕ್ಷ ರೂ.

ಅಲ್ಲಿಗೆ, ವರ್ಷಾಂತ್ಯದಲ್ಲಿ ಆರಂಭದಲ್ಲಿ 90,500 ರೂ.ನಲ್ಲಿದ್ದ ಪ್ರತಿ ಕೆಜಿ ಬೆಳ್ಳಿ ಬೆಲೆಗಳು ವರ್ಷಾಂತ್ಯದ ವೇಳೆಗೆ 2.32 ಲಕ್ಷ ರೂ. ತಲುಪಿತು. ಈಗ ಹೊಸ ವರ್ಷಕ್ಕೆ ಕಾಲಿಟ್ಟು ಎರಡು ವಾರಗಳು ಕಳೆದಿದೆ ಅಷ್ಟೇ! ಅದಾಗಲೇ 3 ಲಕ್ಷ ರೂ. ಗಡಿದಾಟಿ ಹೋಗಿದೆ.