ಫೋಟೋ ಗ್ಯಾಲರಿ

ಕಿತ್ತಳೆ ಹಣ್ಣು ತಿಂದು ಸಿಪ್ಪೆ ಎಸೆಯುವ ಮುನ್ನ; ಮುಖ ಬಂಗಾರದಂತೆ ಹೊಳೆಯಲು ಹೀಗೆ ಬಳಸಿ..Natural Face Pack

ವಿಜಯವಾಣಿ ಸುದ್ದಿ ಜಾಲ

ಕಿತ್ತಳೆ ಸಿಪ್ಪೆಯ ಫೇಸ್​ಪ್ಯಾಕ್

orange peel Face Pack: ಮುಂಗಾರಿನಲ್ಲಿ ಹಾಗೂ ಚಳಿಗಾಲದಲ್ಲಿ ಮುಖ ಒಡೆಯುವುದು, ಒಣಗಿದಂತೆ ಕಾಣುವುದು, ಸುಕ್ಕಾದಂತೆ ಕಾಣುತ್ತದೆ. ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ದೇಹಕ್ಕೆ ನೀಡುವ ಆಹಾರ ಮತ್ತು ಬಾಹ್ಯದ ಚರ್ಮಕ್ಕೆ ಕೊಡುವ ಮದ್ದು ಬಹಳ ಮುಖ್ಯವಾಗುತ್ತದೆ. ಧೂಳಿಗೆ ಮುಖ ಕಪ್ಪಾಗುತ್ತದೆ. ಹೀಗಾಗಿ, ಮುಖದ ಕಾಂತಿ ಹೆಚ್ಚಿಸಲು ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಫೇಸ್​ಪ್ಯಾಕ್​ ಆಗಿ ಬಳಕೆ ಮಾಡೋದು ಹೇಗೆ ಎಂದು ತಿಳಿದುಕೊಳ್ಳೋಣ.

ಫೇಸ್ ಪ್ಯಾಕ್ ಮಾಡುವ ವಿಧಾನ

  • ಅಕ್ಕಿ : 2 ಚಮಚ

  • ಹಾಲು: ಕಾಲು ಕಪ್

  • ಕಡಲೆ ಹಿಟ್ಟು: 1ಚಮಚ

  • ಜೇನು ತುಪ್ಪ:1ಚಮಚ

  • ಹುರಿದ ಅರಿಶಿನ :1ಚಮಚ

ಹೀಗೆ ತಯಾರಿಸಿ

ಕಿತ್ತಳೆ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ನಂತರ ಅಕ್ಕಿ ಮತ್ತು ಸಿಪ್ಪೆಯನ್ನು ಕಾಲು ಕಪ್​ ಹಾಲಿಗೆ ಸೇರಿಸಿ 7-8 ನಿಮಿಷ ಕಡಿಮೆ ಉರಿಯಲ್ಲಿ ಕಾಯಿಸಿಕೊಳ್ಳಿ. ಇದು ತಣ್ಣಗಾದ ಬಳಿಕ ಅಕ್ಕಿ ಮತ್ತು ಕಿತ್ತಳೆ ಸಿಪ್ಪೆಯನ್ನು ಪುಡಿ ಮಾಡಿ ಅದಕ್ಕೆ ಅರಿಶಿನ, ಜೇನುತ್ತುಪ್ಪ, ಕಡಲೆ ಹಿಟ್ಟು ಸೇರಿಸಿ ಮಿಶ್ರಣ ಮಾಡಿ. ಈಗ ಇದು ಮುಖಕ್ಕೆ ಲೇಪಿಸಿಕೊಳ್ಳಲು ಸಿದ್ಧವಾಗಿದೆ.

ಹೀಗೆ ಬಳಕೆ ಮಾಡಿ

ನೀವು ಮುಖಕ್ಕೆ ಯಾವುದೇ ಪ್ಯಾಕ್​ ಬಳಕೆ ಮಾಡುವ ಮುನ್ನ ಸೋಪಿನಿಂದ ಫೇಸ್​ ವಾಶ್​ ಮಾಡಬೇಕು. ನಂತರ ಕೂದಲು ಮುಖದ ಮೇಲೆ ಹರಿಯದಂತೆ ಕಟ್ಟಿ, ಇಡೀ ಮುಖಕ್ಕೆ ನಯವಾಗಿ ಹಚ್ಚಿ 17-20 ನಿಮಿಷ ಒಣಗಲು ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ನಯವಾಗಿ ಮಸಾಜ್​ ಮಾಡುತ್ತಾ ಮುಖ ತೊಳೆಯಿರಿ. ನೆನಪಿಡಿ ಮುಖವನ್ನು ಸ್ಕ್ರಬ್​ ಮಾಡುವುದು ಸರಿಯಾದ ವಿಧಾನವಲ್ಲ. ಈ ಫೇಸ್​ ಪ್ಯಾಕ್​ ಅನ್ನು ವಾರಕ್ಕೆ 2-3 ಬಾರಿ ಬಳಕೆ ಮಾಡುವುದರಿಂದ ನಿಮಗೆ ಒಳ್ಳೆ ಫೀಡ್​ಬ್ಯಾಕ್ ಸಿಗುವ ಸಾಧ್ಯತೆ ಇರುತ್ತದೆ.

ನಿತ್ಯ ಮುಖವು ಸೂರ್ಯನ ಬೆಳಕು, ಧೂಳು ಹಾಗೂ ಎಸಿ ಗಾಳಿಗೆ ಒಡ್ಡಿಕೊಳ್ಳುವ ಹಿನ್ನೆಲೆ, ಮುಖ ಟ್ಯಾನ್​ ಆಗಬಹುದು. ಹೀಗಾಗಿ ಮುಖಕ್ಕೆ ಈ ಫೇಸ್​ ಪ್ಯಾಕ್​ ಹಚ್ಚುವುದರಿಂದ ನಿಮ್ಮ ಮುಖವು ಬಂಗಾರದಂತೆ ಹೊಳೆಯಲು ಸಹಾಯ ಮಾಡುತ್ತದೆ. ಗಮನಿಸಿ ಸ್ಕಿನ್ ಅಲರ್ಜಿ, ಸೆನ್ಸಿಟಿವ್ ಸ್ಕಿನ್​ ಇರುವವರು ವೈದ್ಯರ ಸಲಹೆ ಮೇರೆಗೆ ಬಳಕೆ ಮಾಡುವುದು ಸೂಕ್ತ

ಕಿತ್ತಳೆ ಸಿಪ್ಪೆಯಲ್ಲಿರುವ ಆರೋಗ್ಯ ಪ್ರಯೋಜನವೇನು?

ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ನಾರಿನಾಂಶ, ವಿಟಮಿನ್​ ಸಿ ಹಾಗೂ ಆಂಟಿ ಆಕ್ಸಿಡೆಂಟ್​ ಅಂಶ ಇದೆ. ಕಿತ್ತಳೆ ಹಣ್ಣಿಗಿಂತ ಅದರ ಸಿಪ್ಪೆಯಲ್ಲಿ ಆರೋಗ್ಯಕಾರಿ ಅಂಶಗಳಿದೆ. ಉದಯ ಮೊಡವೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಕಿತ್ತಳೆ ಸಿಪ್ಪೆಯನ್ನು ಸರಿಯಾಗಿ ಬಳಕೆ ಮಾಡಿದರೆ, ಮುಖ ಮಾತ್ರವಲ್ಲದೇ ದೇಹದ ಇತರ ಆರೋಗ್ಯ ಸಮಸ್ಯೆಗೂ ಮದ್ದಾಗ ಕೆಲಸ ಮಾಡುತ್ತದೆ. ಕಿತ್ತಳೆ ಸಿಪ್ಪೆಯು ಜೀರ್ಣಕ್ರಿಯೆ, ಹೃದಯದ ಆರೋಗ್ಯ, ಹಲ್ಲಿ ನ ಆರೋಗ್ಯ ಕಾಪಾಡಲು ಇದು ಸಹಾಯ ಮಾಡುತ್ತದೆ, (ಏಜೆನ್ಸೀಸ್).