ಬಿಕ್ಕಳಿಕೆ ಎಂದರೇನು? 
ಫೋಟೋ ಗ್ಯಾಲರಿ

ಬಿಕ್ಕಳಿಕೆ ಬರ್ತಿದ್ಯಾ? ಗಾಬರಿ ಬೇಡ, ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು! Hiccups

ಭಾನುಪ್ರಿಯ ಡಿ.ಕೆ

ಬಿಕ್ಕಳಿಕೆ ಎಂದರೇನು?

ಎದೆಯ ಭಾಗ ಮತ್ತು ಹೊಟ್ಟೆಯ ಭಾಗವನ್ನು ಬೇರ್ಪಡಿಸುವ ಒಂದು ಸ್ನಾಯುವಾದ ಡಯಾಫ್ರಾಮ್ ಹಠಾತ್ತಾಗಿ ಸಂಕುಚಿತಗೊಂಡಾಗ, ಶ್ವಾಸಕೋಶಕ್ಕೆ ಗಾಳಿ ವೇಗವಾಗಿ ನುಗ್ಗುತ್ತದೆ. ಆ ವೇಳೆ ನಮ್ಮ ಗಂಟಲಿನಲ್ಲಿರುವ 'ವೋಕಲ್ ಕಾರ್ಡ್ಸ್' ತಕ್ಷಣ ಮುಚ್ಚಿಕೊಳ್ಳುತ್ತವೆ. ಆಗ ಬರುವ ಶಬ್ದವೇ ಬಿಕ್ಕಳಿಕೆ

ಉಸಿರನ್ನು ಹಿಡಿದಿಟ್ಟುಕೊಳ್ಳಿ

ಆಳವಾಗಿ ಉಸಿರು ತೆಗೆದುಕೊಂಡು 10-20 ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳಿ. ನಂತರ ನಿಧಾನವಾಗಿ ಬಿಡಿ. ಇದನ್ನು 2-3 ಬಾರಿ ಮಾಡಿ. ಇದರಿಂದ ಡಯಾಫ್ರಾಮ್ ಶಾಂತಗೊಳ್ಳುತ್ತದೆ.

ತಣ್ಣನೆಯ ನೀರು ಕುಡಿಯಿರಿ

ಒಂದು ಲೋಟ ಐಸ್ ವಾಟರ್ ಅನ್ನು ದೊಡ್ಡ ಗುಟುಕುಗಳಲ್ಲಿ ನಿಧಾನವಾಗಿ ಕುಡಿಯಿರಿ. ಅಥವಾ ಲೋಟದ ಇನ್ನೊಂದು ಬದಿಯಿಂದ ಕುಡಿಯುವುದು ಟ್ರೈ ಮಾಡಿ – ಇದು ಗಂಟಲಿನ ಸ್ನಾಯುಗಳನ್ನು ಆಶ್ಚರ್ಯಗೊಳಿಸಿ ಬಿಕ್ಕಳಿಕೆ ನಿಲ್ಲಿಸುತ್ತದೆ.

ಒಂದು ಚಮಚ ಸಕ್ಕರೆ ತಿನ್ನಿರಿ

ಬಾಯಿಗೆ 1 ಚಮಚ ಸಕ್ಕರೆ ಹಾಕಿ ನಿಧಾನವಾಗಿ ಅಗಿದು ನುಂಗಿ. ಇದು ನರಗಳನ್ನು ಉತ್ತೇಜಿಸಿ ಬಿಕ್ಕಳಿಕೆಯನ್ನು ತಡೆಯುತ್ತದೆ.

ಎರಡು ಕಿವಿಗಳನ್ನು ಮುಚ್ಚಿಕೊಂಡು ಉಸಿರು ಹಿಡಿಯಿರಿ

ಕೆಲವು ಸೆಕೆಂಡುಗಳ ಕಾಲ ಉಸಿರನ್ನು ಹಿಡಿದು, ಎರಡು ಕಿವಿಗಳನ್ನು ಬೆರಳುಗಳಿಂದ ಮುಚ್ಚಿಕೊಳ್ಳಿ. ಇದು ವೇಗಸ್ ನರವನ್ನು ಪ್ರಭಾವಿಸಿ ಬಿಕ್ಕಳಿಕೆ ನಿಲ್ಲಿಸುವ ಸರಳಗೊಳಿಸುತ್ತದೆ.

ನಾಲಿಗೆಯನ್ನು ಹೊರಹಾಕಿ

ನಾಲಿಗೆಯನ್ನು ಹೊರಹಾಕಿ ಸ್ವಲ್ಪ ಹೊತ್ತು ಹಾಗೆಯೇ ಇರಿಸಿ ಅಥವಾ ನಿಂಬೆಹಣ್ಣಿನ ತುಂಡು ಕಚ್ಚಿ. ಇದು ಕೂಡ ತ್ವರಿತ ಪರಿಣಾಮ ನೀಡುತ್ತದೆ.