ಸಾಂದರ್ಭಿಕ ಚಿತ್ರ 
ಫೋಟೋ ಗ್ಯಾಲರಿ

ಯಾವುದಾದರೂ ಬಿಜಿನೆಸ್​ ಆರಂಭಿಸುವ ಆಸಕ್ತಿ ಇದೆಯೇ? ಕಡಿಮೆ ಬಜೆಟ್​ನಲ್ಲಿ ಯಾವ ಉದ್ಯಮದಲ್ಲಿ ಯಶಸ್ಸು ಸಾಧಿಸಬಹುದು? Business

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನೇಕರಿಗೆ ತಾವೇ ಸ್ವಂತ ಉದ್ಯಮ ( Business ) ಆರಂಭಿಸಿ ಉತ್ತಮ ಆದಾಯ ಗಳಿಸಬೇಕು ಎಂಬ ಆಸೆ ಇರುತ್ತದೆ. ಆದರೆ ಉದ್ಯಮ ಪ್ರಾರಂಭಕ್ಕೂ ಮುನ್ನ ದೊಡ್ಡ ಮೊತ್ತದ ಬಂಡವಾಳ, ಉತ್ತಮವಾದ ಸ್ಥಳ, ಕಾರ್ಮಿಕರು ಹೀಗೆ ಹಲವಾರು ವ್ಯವಸ್ಥೆಗಳು ಬೇಕಾಗಬಹುದು ಎಂಬ ಯೋಚನೆಯಿಂದ ಕೆಲವರು ಹಿಂದೆ ಸರಿಯುತ್ತಾರೆ. ಆದರೆ, ಉದ್ಯಮ ಆರಂಭಿಸುವಾಗ ಬೃಹತ್ ಪ್ರಮಾಣದಲ್ಲಿಯೇ ಮಾಡಬೇಕಿಲ್ಲ. ನಮ್ಮ ಹಣ, ಕೌಶಲ್ಯ, ಆಸಕ್ತಿಗೆ ತಕ್ಕಂತೆ ಸಣ್ಣ ಸಣ್ಣ ಉದ್ಯಮಗಳನ್ನು ಆರಂಭಿಸಬಹುದು. ಈ ಉದ್ಯಮಗಳಿಂದಲೇ ನಿಮಗೆ ದೊಡ್ಡ ಮಟ್ಟದ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ.

ವಿಜಯವಾಣಿ ಸುದ್ದಿ ಜಾಲ

ಮನೆಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಿ

ಮನೆಯಲ್ಲಿಯೇ ರೊಟ್ಟಿ, ಉಪ್ಪಿನಕಾಯಿ, ಮಸಾಲೆ ಪುಡಿ, ತಿಂಡಿಗಳು, ಸಿಹಿ ಪದಾರ್ಥಗಳು ಸೇರಿದಂತೆ ಅನೇಕ ವಿಧವಾದ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡಬಹುದು. ಇದರಿಂದ ಸ್ಥಳೀಯ ಗ್ರಾಹಕರು, ಪರಿಚಯಸ್ಥರು ಮತ್ತು ಆನ್‌ಲೈನ್‌ ಮೂಲಕ ಆರ್ಡರ್‌ ಪಡೆಯುವ ದೊಡ್ಡ ಅವಕಾಶ ಒದಗಿಸುತ್ತದೆ.

ಟೈಲರಿಂಗ್‌ ಮತ್ತು ಬಟ್ಟೆ ವಿನ್ಯಾಸ

ಇತ್ತೀಚಿನ ದಿನಗಳಲ್ಲಿ ಟೈಲರಿಂಗ್ ಮಾಡುವವರಿಗೆ ತುಂಬಾ ಬೇಡಿಕೆ ಉಂಟಾಗಿದೆ. ಹೊಲಿಗೆ ಕೌಶಲ್ಯವಿದ್ದರೆ ಮನೆಯಿಂದಲೇ ಟೈಲರಿಂಗ್‌ ಕೆಲಸ ಆರಂಭಿಸಬಹುದು. ಬ್ಲೌಸ್‌ ಹೊಲಿಗೆ, ಮಕ್ಕಳ ಬಟ್ಟೆ ಹಾಗೂ ಸರಳ ವಿನ್ಯಾಸದ ಉಡುಪುಗಳಿಗೆ ಬೇಡಿಕೆ ಬರುತ್ತದೆ.

ಹ್ಯಾಂಡ್‌ಮೇಡ್‌ ವಸ್ತುಗಳ ಮಾರಾಟ

ಮೇಣದ ಬತ್ತಿ, ಅಲಂಕಾರಿಕ ವಸ್ತುಗಳು, ಗಿಫ್ಟ್‌ ಐಟಂಗಳು, ಮರದ ಎಲೆಯ ತಟ್ಟೆಗಳು, ಕೈಯಿಂದ ತಯಾರಿಸಿದ ಕ್ರಾಫ್ಟ್‌ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಬಹುದು. ಮದುವೆ, ಹಬ್ಬಗಳು ಮತ್ತು ಇತರ ಕಾರ್ಯಕ್ರಮಗಳಿಗೆ ವೈಯಕ್ತಿಕ ವಿನ್ಯಾಸದ ವಸ್ತುಗಳಿಗೆ ಅಪಾರ ಬೇಡಿಕೆ ಇದೆ.

ಸಸ್ಯ, ನರ್ಸರಿ ಉದ್ಯಮ

ಸಣ್ಣ ಪ್ರಮಾಣದಲ್ಲಿ ಅಲಂಕಾರಿಕ ಗಿಡಗಳು, ಹೂವಿನ ಗಿಡಗಳು ಅಥವಾ ಮನೆಯಲ್ಲೇ ಬೆಳೆಸಬಹುದಾದ ಸಸ್ಯಗಳನ್ನು ಮಾರಾಟ ಮಾಡುವುದರಿಂದ ಉದ್ಯಮ ಆರಂಭಿಸಬಹುದು. ಸಸಿಗಳ ಜೊತೆ ಕುಂಡ ಮತ್ತು ಗಾರ್ಡನ್‌ ಪರಿಕರಗಳನ್ನೂ ಮಾರಾಟ ಮಾಡಬಹುದು.

ಡಿಜಿಟಲ್‌ ಸೇವೆಗಳು

ಇಂದು ಪ್ರತಿಯೊಂದು ಕೆಲಸಕ್ಕೂ ಆನ್​ಲೈನ್​ ಅನ್ನು ಹೆಚ್ಚು ಅವಲಂಬಿಸುವಂತೆ ಆಗಿದೆ. ಸರ್ಕಾರಿ ಅರ್ಜಿಗಳು, ಬರಹ, ಭಾಷಾಂತರ, ಗ್ರಾಫಿಕ್‌ ಡಿಸೈನ್‌, ವಿಡಿಯೋ ಎಡಿಟಿಂಗ್‌, ಸಾಮಾಜಿಕ ಜಾಲತಾಣ ನಿರ್ವಹಣೆ ಮುಂತಾದ ಸೇವೆಗಳನ್ನು ಒದಗಿಸಬಹುದು.